ಬ್ಯಾಂಕ್ ಹಿಂದಿನ ಉಪಾಧ್ಯಕ್ಷರಾಗಿದ್ದ ಬಣ್ಣೇನಹಳ್ಳಿ ಧನಂಜಯ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರೇಗೌಡ ಅವರನ್ನು ಬಿಟ್ಟರೆ ಬೇರೆ ಯಾವ ನಿರ್ದೇಶಕರು ನಾಮಪತ್ರವನ್ನು ಸಲ್ಲಸದ ಕಾರಣ ಚಂದ್ರೇಗೌಡ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ ಪಾರ್ವತಮ್ಮ ಅವರು ಘೋಷಣೆ ಮಾಡಿದರು.
ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಚಂದ್ರೇಗೌಡ ಅವರನ್ನು ಅಭಿನಂದಿಸಿ ಮಾತನಾಡಿದ ಬ್ಯಾಂಕ್ ಮಾಜಿ ನಿರ್ದೇಶಕ ಕೈಗೋನಹಳ್ಳಿ ಕುಮಾರ್ ಬ್ಯಾಂಕ್ ನ ಅಧ್ಯಕ್ಷರು ಹಾಗೂ ಎಲ್ಲಾ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬ್ಯಾಂಕ್ ಸಮಗ್ರ ಅಭಿವೃದ್ಧಿಗೆ ಕಾರಣರಾಗಬೇಕು.ರೈತರಿಗೆ ಸಕಾಲಕ್ಕೆ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ನೀಡಬೇಕು.ಸಾಲ ತೆಗೆದುಕೊಂಡ ಷೇರುದಾರರು ಸಕಾಲಕ್ಕೆ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಬ್ಯಾಂಕ್ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಸಲಹೆ ನೀಡಿದರು.
ನೂತನ ಉಪಾಧ್ಯಕ್ಷ ಚಂದ್ರೇಗೌಡ ಮಾತನಾಡಿ ನನ್ನನ್ನು ಅವಿರೋಧವಾಗಿ ಉಪಾಧ್ಯಕ್ಷರಾಗಲು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ.ನನ್ನ ಅಧಿಕಾರದ ಅವಧಿಯಲ್ಲಿ ಅಧ್ಯಕ್ಷರನ್ನು ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬ್ಯಾಂಕ್ ನ ಅಭಿವೃದ್ಧಿಗೆ ಶ್ರಮಿಸುತ್ತೇನೆ.ರೈತರ ಹಿತದೃಷ್ಟಿಯಿಂದ ಬ್ಯಾಂಕ್ ನಿಂದ ಸಾಲವನ್ನು ನೀಡಿ ಸಕಾಲಕ್ಕೆ ಸಾಲವನ್ನು ವಸೂಲಿ ಮಾಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ಅಧ್ಯಕ್ಷೆ ಜಯಶೀಲರಾಮೇಗೌಡ,ಮಾಜಿ ಅಧ್ಯಕ್ಷ ಕಬ್ಬಲಗೆರೆ ಪುಟ್ಟಸ್ವಾಮಿಗೌಡ,ಕಾಂತರಾಜೇಗೌಡ,ನಾಗರಾಜೇಗೌಡ,ಮಾಜಿ ಉಪಾಧ್ಯಕ್ಷ ಬಣ್ಣೇನಹಳ್ಳಿ ಧನಂಜಯ, ನಿರ್ದೇಶಕರಾದ ಏಜಾಜ್ ಪಾಷಾ, ರಾಧ ಈಶ್ವರಪ್ರಸಾದ್,ಬಿ ಪಿ ನಾಗೇಶ್,ರಾಜಾನಾಯ್ಕ್, ಮುಖಂಡರಾದ ರಾಮೇಗೌಡ,ರಾಮಕೃಷ್ಣ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
(ವರದಿ ಕಾಮನಹಳ್ಳಿ ಮಂಜುನಾಥ್)