ರಾಯಚೂರು ತಾಲೂಕಿನ ಇಡಪನೂರು ಪೋಲಿಸ್ ಠಾಣಾ ವ್ಯಾಪ್ತಿಯ ಗಿಲ್ಲೆಸೂಗೂರು ಕ್ಯಾಂಪ್‌ನಲ್ಲಿ ಮೊನ್ನೇ ಅಂದರೆ ದಿನಾಂಕ 13-07-23 ರಂದು ಸರಿಸುಮಾರು ಮಧ್ಯಾಹ್ನ 3-4 ಗಂಟೆಗೆ ಅಲೆಮಾರಿ ಸಮುದಾಯಗಳಲ್ಲಿ ಅಲಕ್ಷಿತ ಜಾತಿಯಲ್ಲಿ ಒಂದಾದ ಬುಡ್ಗಜಂಗಮ ಸಮುದಾಯದ 14 ವರ್ಷದ ದುರ್ದೈವಿ ಸಿರಿಗಿರಿ ಈರಮ್ಮ ಎಂಬ ಬಾಲಕಿಯನ್ನು ಅನುಮಾನಸ್ಪಾದವಾಗಿ ಅತ್ಯಾಚಾರವೆಸಗಿ, ಹತ್ಯೆ ಮಾಡಿ ಬೇವಿನ ಗಿಡಕ್ಕೆ ನೇಣು ಹಾಕಿದ್ದಾರೆಂದು ಪೋಲಿಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೂವರು ಆರೋಪಿಗಳನ್ನು ಈಗಾಗಲೇ ವಶಕ್ಕೆ ಪಡೆದು ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ.

ಕ್ಯಾಂಪ್‌ನ ಹೊರವಲಯದ ಬೇವಿನ ಗಿಡಕ್ಕೆ ಹಗ್ಗ ಬಿಗಿದ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಮರಣೋತ್ತರ ಪರೀಕ್ಷೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಮೃತ ದೇಹವನ್ನು ರವಾನಿಸಿದ್ದರು. ಇನ್ನೂ ರಿಪೋರ್ಟ್ ಬಂದಿರುವುದಿಲ್ಲ. 14-07-23 ರಂದು ರಾತ್ರಿ ಆ ಬಾಲಕಿಯ ಅಂತ್ಯಕ್ರಿಯೆ ಗಿಲ್ಲೆಸಗೂರು ಕ್ಯಾಂಪಲ್ಲಿ ಮಾಡಲಾಗಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ದಯವಿಟ್ಟು ರಾಜ್ಯಮಟ್ಟದ ಸುದ್ದಿ ಮಾಡಿ ಆ ಮೂವರು ಯುವಕರಿಗೆ ಕಠಿಣ ಶಿಕ್ಷೆಯಾಗಬೇಕು. ಪಕ್ಕದ ರಾಜ್ಯದವರು ಸುದ್ದಿ ಮಾಡಿದ್ದಾರೆ. ನಮ್ಮ ರಾಜ್ಯದ ಮಾಧ್ಯಮದವರಿಗೆ ಮಂಕು ಬಡಿದಿದೆ ಎಂದು ಹೇಳುತ್ತಾ, ಆ ಸಾವನ್ನಪಿದ ಬಾಲಕಿಯ ಪೋಷಕರಿಗೆ ರಾಜ್ಯ ಸರಕಾರ 25 ಲಕ್ಷ ಪರಿಹಾರವನ್ನು ಒದಗಿಸಬೇಕೆಂದು ಆಗ್ರಹ ಪಡಿಸುತ್ತಾ, ಆ ಶವದ ಸ್ಥಳ, ಪರಿಸ್ಥಿತಿ ನೋಡಿದರೆ ಅದು ನೂರಕ್ಕೆ ನೂರು ರೇಪ್ ಆ್ಯಂಡ್ ಮರ್ಡರ್ ಎಂದು, ಆ ಮೂರು ಆರೋಪಿಗಳಲ್ಲಿ ಒಬ್ಬನ ಹೆಸರು ಶಿವಲಿಂಗ, ಇನ್ನೊಬ್ಬನ ಹೆಸರು ಶಿವ, ಮೂರನೇ ವ್ಯಕ್ತಿಯ ಹೆಸರು ಈರೇಶ ಎಂದು ತಿಳಿದು ಬಂದಿದೆ. ಪೋಸ್ಟ್ ಮಾರ್ಟ್ಂ ರಿಪೋರ್ಟ್ ಇನ್ನೂ ಬಂದಿಲ್ಲ. ಅದು ಬಂದ ನಂತರ ಮುಂದಿನ ಕ್ರಮದ ಬಗ್ಗೆ ಪೋಲಿಸರು ತಿಳಿಸುತ್ತೇವೆ ಎಂದು ಹೇಳಿದ್ದಾರೆಂದು ಪ್ರತ್ಯಕ್ಷದರ್ಶಿ ವ್ಯಕ್ತಿಯೊಬ್ಬರು ಸಾಯಂಕಾಲದೊಳಗೆ ರಿಪೋರ್ಟ್ ನೋಡಿ ತಿಳಿಸುತ್ತೇವೆಂದು ಪೋಲಿಸರು ಸಮಯ ನೀಡಿದ್ದರು. ಆದರೆ ರಿಪೋರ್ಟ್ ಇನ್ನೂ ಬಂದಿರುವುದಿಲ್ಲ ಹಾಗೆಯೇ ಪೋಲಿಸರು ಕೇಸನ್ನು ದಾಖಲಿಸಿಕೊಳ್ಳದೇ ವಿಚಾರಿಸುತ್ತಿದ್ದಾರೆಂದು ಆ ವ್ಯಕ್ತಿ ಅಸ್ಪಷ್ಟವಾಗಿ ತಿಳಿಸುತ್ತಾರೆ.

ಘಟನಾ ನಡೆದ ದಿನದಂದೇ ರಾತ್ರಿ 10 ಗಂಟೆಗೆ ಆ ಮೂರು ಹುಡುಗರನ್ನು ಪೋಲಿಸರು ಸೆರೆ ಹಿಡಿದಿದ್ದಾರೆ. ಆ ಹುಡುಗರು ಕೂಡ ಆ ಮೃತ ಬಾಲಕಿಯ ಸ್ವ ಸಮುದಾಯದ ಬುಡ್ಗಜಂಗಮರು. ಮೇಲಾಗಿ ಆ ಬಾಲಕಿಯ ಪಕ್ಕದ ಮನೆಯವರು ಎಂದು ಗುರುತಿಸಲಾಗಿದೆ. ಆ ಹುಡುಗರು ಫಿನಾಯಿಲ್ ಮಾರುವವರು ಎಂದು ಹೇಳಲಾಗಿದೆ.

ಚಿಕ್ಕಪುಟ್ಟ ವಸ್ತುಗಳನ್ನು ಆ ಕುಟುಂಬ ಮಾರಾಟ ಮಾಡಿ ಜೀವನೋಪಾಯವನ್ನು ನಡೆಸುತ್ತಿದ್ದು, ಸುತ್ತಮುತ್ತಲಿನ ಗ್ರಾಮಗಳಲ್ಲಿ ವಸ್ತುಗಳನ್ನು ಮಾರಾಟ ಮಾಡಿ ಅಂದು ಮನೆಗೆ ದಿನನಿತ್ಯ ಬರುವ ಸಮಯಕ್ಕಿಂತ ಮುಂಚಿತವಾಗಿ ಆ ಬಾಲಕಿ ಬಂದಾಗ, ಆ ಯುವಕರು ಇಲ್ಲಸಲ್ಲದನ್ನು ಹೇಳಿ ಮೋಡಿ ಮಾಡಿ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ತಂದೆ-ತಾಯಿ ಮನೆಗೆ ಬಂದಾಗ ಮಗಳು ಮನೆಯಲ್ಲಿ ಇರದ್ದನ್ನು ಕಂಡು, ವಿಚಾರಿಸುತ್ತಿರುವಾಗ ಊರಿನ ಹೊರವಲಯದಲ್ಲಿ ಮೃತದೇಹವಿದೆ ಎಂದು ತಿಳಿಯುತ್ತದೆ. ಈ ವಿಷಯದ ಬಗ್ಗೆ ಬಾಲಕಿಯ ಪರ ಮಾತನಾಡಲು ಪೋಷಕರು ಯಾರೂ ಮುಂದೆ ಬರುತ್ತಿಲ್ಲ. ಸಮುದಾಯದ ದೊಡ್ಡವರ ಮುಂದೆ ಪಂಚಾಯತಿ ಮಾಡಿದ್ದೇವೆ ಎಂದು ತೆಲುಗು ನ್ಯೂಸ್ ಚಾನೆಲ್‌ NTV Telugu ವರದಿ ಮಾಡಿದೆ.

ಸುಮಾರು ವರ್ಷಗಳಿಂದ ಹೈಸ್ಕೂಲ್ ಹಿಂದುಗಡೆ ಇರುವ ಖಾಲಿ ಜಾಗದಲ್ಲಿ ಈ ಕುಟುಂಬ ವಾಸವಿತ್ತು. ಊರು ಊರಿಗೆ ಹೋಗಿ ವಸ್ತುಗಳನ್ನು ಮಾರುವ ಈ ಹುಡುಗಿಯ ಮೇಲೆ ಈ ಮೂವರು ಆರೋಪಿಗಳು ಕಣ್ಣು ಹಾಕಿದ್ದರು. ಆ ಬಾಲಕಿಯ ಮನೆಯ ಸಮೀಪದಲ್ಲೇ ಇರುವ ಹೊಲದಲ್ಲಿ ಅತ್ಯಾಚಾರ ಮಾಡಿದ್ದಾರೆ. ಅತ್ಯಾಚಾರವೆಸಗಿ ಮರಕ್ಕೆ ನೇಣು ಹಾಕಿ ಆತ್ಮಹತ್ಯೆ ಎಂದು ಬಿಂಬಿಸುವಂತೆ ಆರೋಪಿಗಳು ಪ್ರಯತ್ನಿಸಿದ್ದಾರೆಂದು ಕೂಡ ತೆಲುಗು ಚಾನೆಲ್‌ಗಳು ವರದಿ ಮಾಡಿವೆ.

ಈ ಬಾಲಕಿಯ ಸಾವು ತುಂಬಾ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೋರ್ಟು, ಕಛೇರಿ, ಪೋಲಿಸ್ ಇದ್ಯಾವುದಕ್ಕೆ ಅಲೆಯದ-ಗೊತ್ತಿಲ್ಲದ ಈ ತಬ್ಬಲಿ ಸಮುದಾಯಗಳಲ್ಲಿ ಇಂತಹ ಹೇಯಕೃತ್ಯ ನಡೆಯುತ್ತಿರೋದು ಅಸಹ್ಯ. ಸಮುದಾಯದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದೆಂದರೆ ಸರಿಯಾದ ತನಿಖೆ ನಡೆಸಿ ಕಠಿಣ ಶಿಕ್ಷೆಗೆ ತಪ್ಪು ಮಾಡಿದವರನ್ನು ಗುರಿಪಡಿಸಬೇಕು. ರಾಜ್ಯ ಸರಕಾರ ಸೂಕ್ತ ಪರಿಹಾರ ಆ ಕುಟುಂಬಕ್ಕೆ ಒದಗಿಸಬೇಕಾದ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ರಾಜ್ಯದ ಯಾವ ಅಲೆಮಾರಿ ಸಂಘಟಕರು, ಮುಖಂಡರು, ಚಿಂತಕರು, ಸಂಘಟನೆಗಳು ಧ್ವನಿ ಎತ್ತದಿರುವುದು ಆಘಾತ ತಂದಿದೆ.

ನಮ್ಮಮ್ಮ ಈರಮ್ಮನೇ ಅಂತ ಆ ಬಾಲಕಿಯ ತಂದೆ ಕಣ್ಣೀರಾಕುತ್ತಾ, ಗೋಳಾಡುತ್ತಿರುವುದು ನೋಡಿದರೆ ಹೃದಯ ಹಿಂಡಿ ಬರುತ್ತದೆ. ಆ ಮೃತ ಬಾಲಕಿಯ ಆತ್ಮಕ್ಕೆ ಶಾಂತಿ ದೊರಕಬೇಕಾದರೆ, ಆ ಮೂವರಿಗೆ ಕಠಿಣ ಶಿಕ್ಷೆ ಆಗಬೇಕು. ಜೊತೆಗೆ ಆ ಕುಟುಂಬಕ್ಕೆ ಸರಕಾರದಿಂದ 25 ಲಕ್ಷ ಪರಿಹಾರ ಧನ ಹಾಗೆಯೇ ಮನೆ ನಿರ್ಮಿಸಿ ಸರಕಾರ ಕೊಡಬೇಕೆಂದು ಈ ಮೂಲಕ ಸೂಕ್ತ ಪರಿಹಾರಕ್ಕಾಗಿ ತಮ್ಮ ಗಮನಕ್ಕೆ ತರಲು ಬಯಸುತ್ತೇನೆ.

ಕಾಂಗ್ರೆಸ್ಸಿನ ಸಾಮಾಜಿಕ ನ್ಯಾಯ ಘಟಕ ಹಾಗೂ ಅಲೆಮಾರಿ ಸಮನ್ವಯ ಸಮಿತಿ ಘಟಕವೂ ಸಹ ಈ ಘಟನಾ ಬಗ್ಗೆ ವಿಶೇಷ ಗಮನಹರಿಸಿ, ಆ ನರರಾಕ್ಷಸರಿಗೆ ತಕ್ಕ ಶಿಕ್ಷೆ ಕೊಡಿಸುವಲ್ಲಿ ಹಾಗೂ ರಾಜ್ಯ ಸರಕಾರದಿಂದ ಆ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಲು ಮುಂದಾಗಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. (ಶಿವರಾಜ್ ಮೋತಿ)

LEAVE A REPLY

Please enter your comment!
Please enter your name here