ದಾವಣಗೆರೆ : ಪತ್ರಕರ್ತರಿಗೆ ಸರಕಾರದ ನೆರವಿನ ಅಗತ್ಯವಿದೆ ಎಂದು ಮಾಯಾಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ನಗರದ ಪಿ.ಬಿ.ರಸ್ತೆಯಲ್ಲಿರುವಅಪೂರ್ವ ಹೋಟೇಲ್ ಸಭಾಂಗಣದಲ್ಲಿಕರ್ನಾಟಕಕಾರ್ಯನಿರತ ಪತ್ರಕರ್ತರ ಸಂಘದಿಂದ ಏರ್ಪಡಿಸಿದ್ದ ಗುರುತಿನಚೀಟಿ ವಿತರಣಾಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಸಮಾಜದಲ್ಲಿ ನಡೆಯುವ ಅಂಕುಡೊಂಕುಗಳನ್ನು ತಿದ್ದಿ ಸಮಾಜದ ಸ್ವಾಸ್ಥö್ಯಕಾಪಾಡುತ್ತಿರುವ ಹಲವು ಪತ್ರಕರ್ತರು ಬಡತನದಲ್ಲಿದ್ದಾರೆ. ಅವರಿಗೆ ಸರಕಾರದ ಸೌಲಭ್ಯಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣ ಕ ಪ್ರಯತ್ನ ಮಾಡುತ್ತೇನೆ. ವಿವಿಧ ನಿಗಮಗಳಿಂದ ಕೊಡುವ ಸೌಲಭ್ಯ ಬಳಸಿಕೊಂಡು ಪತ್ರಿಕೋದ್ಯಮದಜೊತೆಗೆಅದಾಯ ಬರುವಂತಹ ವೃತ್ತಿ ಮಾಡಿಎಂದು ಕಿವಿಮಾತು ಹೇಳಿದರು.


ನಾನು ಕೂಡಚಿಕ್ಕವನಿದ್ದಾಗ ಪತ್ರಿಕೆಗಳನ್ನು ಕೂಗಿ ಮಾರಾಟ ಮಾಡಿದ್ದೇನೆಎಂದು ನೆನಪಿಸಿಕೊಂಡರು. ನನ್ನಎಲ್ಲಾ ಹೋರಾಟಗಳ ಹಾಗೂ ಸಮಾಜ ಸೇವೆಯ ಸುದ್ದಿಗಳನ್ನು ಬಿತ್ತರಿಸಿ ನಾನು ಒಬ್ಬಜನನಾಯಕನಾಗಿ ಹೊರಹೊಮ್ಮಲು ಪತ್ರಕರ್ತರೇಕಾರಣಎಂದು ಹೇಳಿದರು.

ಹೊಟೇಲ್‌ಉದ್ಯಮಿಅಣಬೇರುರಾಜಣ್ಣ ಮಾತನಾಡಿ, ಪತ್ರಕರ್ತರಿಗೆ ಸಮಾಜದಲ್ಲಿಉತ್ತಮಗೌರವವಿದೆ. ಅದನ್ನು ಪತ್ರಕರ್ತರು ಕಾಪಾಡಿಕೊಳ್ಳಬೇಕು.ಪತ್ರಕರ್ತರಿಗೆಇದುವರಿಗೂ ಭವನಇಲ್ಲದಿರುವುದು ವಿಷಾದಕರ ಸಂಗತಿ ಪತ್ರಕರ್ತರ ಭವನಆಗುವವರೆಗೂ ನಮ್ಮ ಹೋಟೆಲಿನ ಸಭಾಂಗಣ ಬಳಿಸಿಕೊಂಡು ನಿಮ್ಮಕಾರ್ಯಚಟುವಟಿಕೆ ಮಾಡಿಕೊಳ್ಳಿ.ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡಿದರೆ ನಿಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು.ಇ.ಎಂ.ಮಂಜುನಾಥಅಧ್ಯಕ್ಷರಾದ ನಂತರಕಾರ್ಯನಿರತ ಪತ್ರಕರ್ತರು ಸಂಘ ಉತ್ತಮವಾಗಿ ಹಾಗೂ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆಎಂದರು. ಮಹಾನಗರ ಪಾಲಿಕೆಯಆಯುಕ್ತೆರೇಣುಕಾ ಪತ್ರಕರ್ತರಿಗೆಗುರುತಿನಚೀಟಿ ವಿತರಿಸಿ ಮಾತನಾಡಿ, ಮಹಾನಗರ ಪಾಲಿಕೆಯಲ್ಲಿ ಎಸ್ಸಿ,ಎಸ್ಟಿ ಮತ್ತು ಒಬಿಸಿ ಸೇರಿದವರಿಗೆ ಮನೆಕಟ್ಟಲು ಮೂರು ಲಕ್ಷದವರಿಗೂ ಪಾಲಿಕೆ ಸೌಲಭ್ಯ ಸಿಗಲಿದೆ. ನಿವೇಶನವುಳ್ಳ ಪತ್ರಕರ್ತರುಇದನ್ನು ಬಳಸಿಕೊಳ್ಳಲು ತಿಳಿಸಿದರು.
ನಾನು ಅನೇಕ ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದೇನೆ. ಎಲ್ಲಾ ಜಿಲ್ಲೆಗಳ ಪತ್ರಕರ್ತರಒಡನಾಟವಿದೆ.ದಾವಣಗೆರೆಜಿಲ್ಲೆಯ ಪತ್ರಕರ್ತರು ಸೌಮ್ಯ ಸ್ವಭಾವದವರುಏನಾದರೂ ಬರೆಯುವಾಗಅದನ್ನು ಕೇಳಿ ವಿಮರ್ಶೆ ನೈಜ ಸುದ್ದಿಯನ್ನೇ ವರದಿ ಮಾಡುತ್ತಿರುವುದುತುಂಬಾ ಸಂತೋಷದ ಸಂಗತಿ.ದಾವಣಗೆರೆಜಿಲ್ಲೆಯಲ್ಲಿ ಪತ್ರಕರ್ತ ಭವನಕ್ಕೆ ನಿವೇಶನ ಕೋರಿಅರ್ಜಿ ನೀಡಿದ್ದೀರಿ.ಅದನ್ನು ಸರಕಾರದ ನಿಟ್ಟಿನಲ್ಲಿ ಚರ್ಚಿಸಿ ನಿವೇಶನ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣ ಕ ಪ್ರಯತ್ನ ಮಾಡುತ್ತೇನೆಎಂದರು.
ಸAಘದರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ್ ಮಾತನಾಡಿ, ಜಿಲ್ಲೆಯಲ್ಲಿ ೩೮ ನೇ ರಾಜ್ಯ ಸಮ್ಮೇಳನ ಇದೇ ವರ್ಷ ನಡೆಯಲಿದ್ದು ಸಂಘದಎಲ್ಲಾ ಸದಸ್ಯರು ಸಮ್ಮೇಳನ ಯಶಸ್ವಿಗೊಳಿಸಲು ಸಕ್ರಿಯರಾಗಿ ಪಾಲ್ಗೊಳ್ಳಲು ಕರೆ ನೀಡಿದರು.

(೨೦೨೨ ನೇ ಸಾಲಿನ ಪತ್ರಿಕಾ ದಿನಾಚರಣೆಕಾರ್ಯಕ್ರಮದಲ್ಲಿ ಘೋಷಿಸಿದಂತೆ ಪತ್ರಕರ್ತರಕ್ಷೇಮಾಭಿವೃದ್ದಿ ನಿಧಿಗೆ ಹೋಟೇಲ್‌ಉದ್ಯಮಿಅಣಬೇರುರಾಜಣ್ಣಅವರು ೨೦ ಸಾವಿರ ನಗದು ನೀಡಿದರು.
ನಿವೇಶನವುಳ್ಳ ಎಸ್ಸಿ,ಎಸ್ಟಿ ಹಾಗೂ ಒಬಿಸಿ ಪತ್ರಕರ್ತರು ಪಾಲಿಕೆಯಿಂದ ೩ ಲಕ್ಷರೂ ವರೆಗೆ ಅನುದಾನ ಸೌಲಭ್ಯ ಸಿಗಲಿದೆ. ಸದ್ಬಳಕೆ ಮಾಡಿಕೊಳ್ಳಿ
ಪಾಲಿಕೆ ಆಯುಕ್ತೆ ರೇಣುಕಾ)


ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾನಿಪ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ , ಪತ್ರಕರ್ತರುತುಂಬ ಸಂಕಷ್ಟದಲ್ಲಿದ್ದಾರೆ. ಸಂಘಟಿರಾದರೆ ಮಾತ್ರ ಸರಕಾರದ ಸೌಲಭ್ಯ ಪಡೆಯಲು ಸಾಧ್ಯ.ಅದ್ದರಿಂದಎಲ್ಲಾರೂ ಸಂಘಟಿತರಾಗಿಎಂದರು.
ಸಂಘದಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ ನಿರೂಪಿಸಿದರು. ಖಜಾಂಚಿಎನ್,ವಿ ಬದರಿನಾಥ ವಂದಿಸಿದರು. ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಕೆ.ಒಡೆಯರ, ರಾಜ್ಯ ಸಮಿತಿ ಸದಸ್ಯಕೆ.ಚಂದ್ರಣ್ಣ, ಕಾರ್ಯದರ್ಶಿ ಜೆ.ಎಸ್.ವೀರೇಶ್, ನಿಂಗೋಜಿರಾವ್, ಉಪಾಧ್ಯಕ್ಷಎಚ್.ಎನ್. ಪ್ರಕಾಶ, ಆರ್.ಎಸ್.ತಿಪ್ಪೇಸ್ವಾಮಿ. ಕರ‍್ಯಕಾರಿ ಸಮಿತಿ ಸದಸ್ಯರಾದಎನ್.ರವಿ, ಸಿ.ವೇದಮೂರ್ತಿ, ಬಿ.ಎಸ್.ಮುದ್ದಯ್ಯ, ಅನಿಲಕುಮಾರ ಎಂ.ಬಿ, ಕೆ.ಸಿ.ಮಂಜುನಾಥ, ಇಂದುಧರ, ನಂದನಕುಮಾರ್, ಹೆಚ್. ಚಂದ್ರಶೇಖರ, ಚಿತ್ರದುರ್ಗಜಿಲ್ಲಾಧ್ಯಕ್ಷ ದಿನೇಶ್, ಬೆಂಗಳೂರಿನ ರಾಜ್ಯ ಸಮಿತಿ ಸದಸ್ಯದೇವರಾಜ, ಜಗಳೂರು ತಾಲೂಕುಅಧ್ಯಕ್ಷಚಿದಾನಂದ, ಹೊನ್ನಾಳ್ಳಿ ಯೋಗೇಶ್, ಕೊಟ್ರೇಶ್‌ಅಣಬೂರು ಮಠ, ಹರಿಹರತಾಲೂಕುಉಪಾಧ್ಯಕ್ಷ ಹೆಚ್.ಸುಧಾಕರ, ಕುಣ ಬೆಳಕೆರೆ ಸುರೇಶ್, ನ್ಯಾಮತಿ ಸಂಚಾಲಕ ಶಾಸ್ತಿç ಹೊಳೆ ಮಠ ಸೇರಿದಂತೆಇತರರುಇದ್ದರು.
ವಾರ್ತಾಇಲಾಖೆಯ ನಿವೃತ್ತ ನೌಕರ ಬಿ.ಎಸ್.ಬಸವರಾಜ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here