ಬೆಂಗಳೂರು: ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭವೃದ್ದಿ ಸಂಘ ಮತ್ತು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ತು ವತಿಯಿಂದ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಫೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಕಾರ್ಯಕ್ರಮ.
ಪ್ರತಿಭಟನಾ ಸ್ಥಳಕ್ಕೆ ಮುಖ್ಯ ಆಯುಕ್ತರಾದ ಮಹೇಶ್ವರರಾವ್ ರವರು, ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ರವರು, ಪೌರಾಡಳಿತ ಇಲಾಖೆ ನಿರ್ದೇಶರಾದ ಪ್ರಭುಲಿಂಗ ಕವಳಿಕಟ್ಟಿರವರು ಆಗಮಿಸಿ ಮನವಿ ಪತ್ರವನ್ನು ರಾಜ್ಯಾಧ್ಯಕ್ಷರಾದ ಎ.ಅಮೃತ್ ರಾಜ್ ರವರಿಂದ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರರಾವ್ ರವರು ಮಾತನಾಡಿ ಅಧಿಕಾರಿ, ನೌಕರರ ಮೇಲೆ ಸಹನಾಭೂತಿ ಇರಬೇಕು. ಅವರ ಕಷ್ಟಗಳು ಕುರಿತು ನನಗೆ ಅರಿವಿದೆ.
ಮುಂದಿನ ದಿನಗಳಲ್ಲಿ ಹೋರಾಟ ಮಾಡುವ ಅವಶ್ಯಕತೆ ಇಲ್ಲ. ಕುಳಿತು ಚರ್ಚೆ ಮಾಡಿ ಬಗೆಹರಿಸೋಣ, ಸಸ್ಪೆಂಡ್ ಅದ ನೌಕರರ ಕುರಿತು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇನೆ .ಸಂಘದವರು ಇಟ್ಟ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಸುರಳ್ಕರ್ ವಿಕಾಸ್ ಕಿಶೋರ್ ರವರು ಮಾತನಾಡಿ ವಿವಿಧ ಬೇಡಿಕೆಗಳ ಕುರಿತು ಪ್ರತಿಭಟನೆ ಮಾಡುತ್ತಿದ್ದಾರೆ ಬಿಬಿಎಂಪಿ ನೌಕರರ ಕುಂದುಕೂರತೆಗಳನ್ನು ನಿಭಾಯಿಸಬೇಕು,ಸಚಿವರು, ಮುಖ್ಯ ಆಯುಕ್ತರು ಇದರ ಕುರಿತು ಮಾಹಿತಿ ನೀಡಲಾಗುತ್ತದೆ.
ನೌಕರರಿಗೆ ಸಹಾಯ ಮಾಡಬೇಕು ಎಂಬುದು ನಮ್ಮ ನಿಲುವು, ನೌಕರರಿಗೆ ಹುರದುಂಬಿಸಿ ಕೆಲಸ ಕಾರ್ಯ ಮಾಡಿಸುತ್ತೇವೆ.
ಪ್ರಾಮಾಣಿಕ ಪ್ರಯತ್ನದಿಂದ ನ್ಯಾಯ ಕೊಡಿಸುತ್ತೇನೆ ಎಂದು ಹೇಳಿದರು.
ಪೌರಾಡಳಿತ ನಿರ್ದೇಶಕರಾದ ಪ್ರಭುಲಿಂಗ ಕವಳಿಕಟ್ಟಿರವರು ಪೌರಾಡಳಿತ ಇಲಾಖೆ ಸಂಭಂದಪಡುವ 13ಮಹಾನಗರ ಪಾಲಿಕೆಯಲ್ಲಿ ಸಮಸ್ಯೆಗಳ,ಕಷ್ಟಗಳ ಕುರಿತು ಅರಿವಿದೆ, ಸರಿಪಡಿಸಲು ಸರ್ಕಾರ ಜೊತೆಯಲ್ಲಿ ಅಲೋಚನೆ ಮಾಡಿ, ಕ್ರಮ ಕೈಗೊಳಲಾಗುವುದು.
7ನೇ ವೇತನ ಆಯೋಗ, ವೃಂದ ನೇಮಕಾತಿ ಮಾರ್ಪಡು ಮಾಡಿ ಮುಂಬಡ್ತಿ ನೀಡಲು ತಿದ್ದುಪಡಿ ಮಾಡಲಾಗುವುದು.
ನಿಮ್ಮ ಬೇಡಿಕೆಗಳಲ್ಲಿ 5ಈಡೇರಿಕೆಯಾಗಿದೆ, ಹಣಕಾಸು ಇಲಾಖೆ ಅನುಮೋದನೆ ಕೋರಲಾಗಿದೆ.
ತಮ್ಮ ಬೇಡಿಕೆಗಳು ಕುರಿತು ಸರ್ಕಾರ ಚರ್ಚೆ ಸಮಾಲೋಚನೆ ಮಾಡುತ್ತಿದೆ ಎಂದು ಹೇಳಿದರು.
ರಾಜ್ಯಾಧ್ಯಕ್ಷರಾದ ಎ.ಅಮೃತ್ ರಾಜ್ ರವರು ಮಾತನಾಡಿ ಪಾಲಿಕೆ ನಮ್ಮ ಮಾತೃ ಸಂಸ್ಥೆ ನಮ್ಮ ಹೋರಾಟ ಅಧಿಕಾರಿಗಳ ವಿರುದ್ದ ಅಲ್ಲ. ಬಿಬಿಎಂಪಿ ನಮ್ಮ ಸಂಘವು 12 ಬೇಡಿಕೆಗಳಿಗೆ ಮುಖ್ಯ ಆಯುಕ್ತರು ಉತ್ತಮ ಸ್ಪಂದನೆ ನೀಡಿದ್ದಾರೆ ಮತ್ತು ಸಸ್ಪೆಂಡ್ ಅದ ನೌಕರರನ್ನು ಈಗಾಗಲೇ ವಾಪಸ್ಸು ಪಡೆದಿದ್ದಾರೆ.
ಹತ್ತು ಮಹಾನಗರ ಪಾಲಿಕೆ ಬೇಡಿಕೆಗಳ ಕುರಿತು ಸಚಿವರು, ಕಾರ್ಯದರ್ಶಿಗಳು ಪ್ರತಿಭಟನಾ ಸ್ಥಳಕ್ಕೆ ಬಂದಿಲ್ಲ, ಬೇಡಿಕೆಗಳು ಕುರಿತು ಮಾತನಾಡಿಲ್ಲ ಇದರಿಂದ ಪಾಲಿಕೆ ನೌಕರರು ಅಸಮಾಧಾನರಾಗಿದ್ದಾರೆ.
ಹತ್ತು ಮಹಾನಗರ ಪಾಲಿಕೆ ಸಮಸ್ಯೆಗಳು ಕುರಿತು ನಾಳೆಯಿಂದ ಹೋರಾಟ ಮುಂದುವರಯಲಿದೆ.
ಮಹಾನಗರ ಪಾಲಿಕೆ ಕಛೇರಿ ಮುಂಭಾಗದಲ್ಲಿ ಹೋರಾಟ ಮಾಡಲಿದ್ದೇವೆ.
ಗೌರವಾಧ್ಯಕ್ಷರಾದ ಎಸ್.ಹೆಚ್.ಗುರುಮೂರ್ತಿ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷರಾದ ರಮೇಶ್ ಸಂಗಾ,ರಾಜ್ಯ ಉಪಾಧ್ಯಕ್ಷರುಗಳಾದ ಜಿ.ವೆಂಕಟ್ ರಾಮ್, ವೇಣುಗೋಪಾಲ್ ಬಿ.ಎನ್. ಮತ್ತು ಪ್ರಧಾನ ಕಾರ್ಯದರ್ಶಿ ಟಿ.ಸಿ.ಬಸವರಾಜಯ್ಯ, ಖಜಾಂಚಿ ರುದ್ರೇಶ್ ಬಿ ಹಾಗೂ ರಾಜ್ಯ ಕಾರ್ಯದರ್ಶಿ ಪ್ರಹ್ಲಾದ್ ಕುಲಕರ್ಣಿ, ರಾಜ್ಯ ನಿರ್ದೇಶಕರುಗಳಾದ ಸಾಯಿಶಂಕರ್, ಜಗದೀಶ್ ಎಸ್, ಎ.ಜಿ.ಬಾಬು, ಶ್ರೀನಿವಾಸ್ ಕಟ್ಟಿ, ಬಾಬು ಪಿ, ನರಸಿಂಹ ಕೆ, ಶಾಂತಪ್ಪ ಮುಖೇಶಪ್ಪ ಪತ್ತಾರ, ರವೀಂದ್ರ ಶಿರಶ್ಯಾದ ಮತ್ತು 10ಮಹಾನಗರ ಪಾಲಿಕೆ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು
ಬಿಬಿಎಂಪಿ ಕಂದಾಯ, ಆರೋಗ್ಯ, ಇಂಜನಿಯರ್ ಮತ್ತು ಪೌರ ಕಾರ್ಮಿಕರ ಸಂಘಟನೆಗಳು, ರುದ್ರಭೂಮಿ ನೌಕರರು, ಐ.ಟಿ.ಮತ್ತು ಹೊರಗುತ್ತಿಗೆ ನೌಕರರು, ಆಡಳಿತ ಕಛೇರಿ ಅಧಿಕಾರಿ ಸಿಬ್ಬಂದಿಗಳು ಹಾಗೂ ಹುಬಳ್ಳಿ-ಧಾರವಾಡ, ತುಮಕೂರು, ಮಂಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ವಿಜಯಪುರ ಹಾಗೂ ಕಲಬುರಗಿ, ಬೆಳಗಾಂ, ಬಳ್ಳಾರಿ ಮಹಾನಗರ ಪಾಲಿಕೆ ಅಧಿಕಾರಿ, ನೌಕರರು ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.