ದಾವಣಗೆರೆ , 13 ಜೂನ್ 2025: ದಾವಣಗೆರೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗದ ವತಿಯಿಂದ ಆಯೋಜಿಸಿದ್ದ ‘ಸಾಫ್ಟ್ವೇರ್ ಆಧಾರಿತ ಕೌಶಲ್ಯಗಳ’ ಪರಿಚಯ ಕಾರ್ಯಕ್ರಮವು ಕಾಲೇಜಿನ ವಾಣಿಜ್ಯ ವಿಭಾಗದ ಸಭಾಂಗಣದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಡಾ. ವೆಂಕಟೇಶ್ ಬಾಬು ಎಸ್., ಎಂ.ಬಿ.ಎ. ಕೋರ್ಸ್ ಸಂಯೋಜಕರು, ಸ್ವಾಗತ ಭಾಷಣ ನೀಡಿ ಕಾರ್ಯಕ್ರಮದ ಉದ್ದೇಶವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಪದವಿಯೊಂದಿಗೆ ಪ್ರತಿ ಸೇಮೆಸ್ಟರಿಗೊಂದು ಸರ್ಟಿಫಿಕೇಟ್ ಪ್ರೋಗ್ರಾಮ್ ಗಳನ್ನು ಕಲಿತರೆ ನಿಮ್ಮ ಉದ್ಯೋಗ ಕೌಶಲ್ಯಗಳನ್ನು ಗಟ್ಟಿ ಗೊಳಿಸಿ ಕಾರ್ಪೊರೇಟ ಜಗತ್ತನ್ನು ಆಳಬಹುದು ಅದಕ್ಕಾಗಿ ವಿದ್ಯಾರ್ಥಿಗಳು ಆಸಕ್ತಿವಹಿಸಿ ಕಲಿಯುವುದು ಅತ್ಯವಶ್ಯಕವಾಗಿದೆ ಎಂದರು

ಮುಖ್ಯ ಅತಿಥಿಯಾಗಿ ಡಾ. ಇಗ್ನಾಶಿಯಸ್ ಬಿ., ಪ್ರಾಚಾರ್ಯರು, ಆರ್ ವಿ ಕಾಲೇಜು, ಬೆಂಗಳೂರು, ಅವರು ಈ ಕಾರ್ಯಕ್ರಮದ ಉಪಯುಕ್ತತೆಯ ಕುರಿತು ವಿಶ್ಲೇಷಣೆ ಮಾಡಿದರು.

“ಈದಿನದ ಸ್ಪರ್ಧಾತ್ಮಕ ಉದ್ಯೋಗ ಕ್ಷೇತ್ರದಲ್ಲಿ ಸಾಫ್ಟ್‌ವೇರ್ ಆಧಾರಿತ ನಿರ್ವಹಣಾ ಕೌಶಲಗಳು ಅತ್ಯಗತ್ಯವಾಗಿವೆ. SAP ತರಬೇಿಯಂತಹ ಪ್ರಮಾಣಪತ್ರ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಉದ್ಯೋಗ ಸಾಧ್ಯತೆಗಳನ್ನು ಹೆಚ್ಚಿಸುವುದಲ್ಲದೇ, ಮೌಲಿಕ ತಾಂತ್ರಿಕ ಜ್ಞಾನ, ದತ್ತಾಂಶ ವಿಶ್ಲೇಷಣೆ, ನಿರ್ಧಾರಾತ್ಮಕ ಚಿಂತನ ಶೈಲಿ ಹಾಗೂ ಕಾರ್ಯನಿರ್ವಹಣಾ ಶಕ್ತಿ ಅಭಿವೃದ್ಧಿ ಮಾಡುತ್ತದೆ.”

ಅವರು MBA ಮತ್ತು M.Com ವಿದ್ಯಾರ್ಥಿಗಳ ಮೇಲೆ ಗಮನಹರಿಸಿ, ಈ ತರಬೇತಿಯು ಪದವಿಯ ನಂತರ ಕಾಂಪಿಟೆಂಟ್ ಕಾರ್ಪೊರೇಟ್ ಪ್ರೊಫೆಷನಲ್ಸ್ ಆಗಲು ನೆರವಾಗುವ ಬಗೆಯಲ್ಲಿಯೂ ಮಾತನಾಡಿದರು. ಈ ತರಬೇತಿಯು ಉದ್ಯೋಗದ ಅವಶ್ಯಕತೆಗಳಿಗೆ ತಕ್ಕಂತೆ ವಿದ್ಯಾರ್ಥಿಗಳಲ್ಲಿ ERP (Enterprise Resource Planning) ತಂಡದಲ್ಲಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ, ಹಾಗೂ ಜಾಗತಿಕ ಮಟ್ಟದ ಉದ್ಯೋಗ ಅವಕಾಶಗಳನ್ನು ಕಲ್ಪಿಸಬಹುದಾದ ತಾಂತ್ರಿಕ ಬೆಳವಣಿಗೆ ತರಬೇತಿಗಳನ್ನು ಒದಗಿಸುತ್ತದೆ ಎಂಬುದನ್ನು ಉಲ್ಲೇಖಿಸಿದರು.

ಕಾರ್ಯಕ್ರಮದಲ್ಲಿ ಪ್ರಭಾರಿ ಪ್ರಾಚಾರ್ಯರಾದ ಪ್ರೊ. ಸುನೀತ ಕೆ ಬೀ ಅವರು ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ಶಾಸ್ತ್ರ ವಿಭಾಗದ ಪ್ರೊ ನಾಗರಾಜ್ ಆರ್ ಸಿ, ಪ್ರೊಬ್ರಾ
ರಾಜ್ ಮೋಹನ್, ಪ್ರೊ ಯಶೋಧ, ಪ್ರೊ ಶಂಭುಲಿಂಗ ನಲ್ಲನವರ್ ಪ್ರೊ. ವಿನಾಯಕ ಬಿ., ಪ್ರೊ. ಪ್ರಭಾಕರ್ ಟಿ., ಪ್ರೊ. ನಾಗರಾಜ್ ಎಚ್., ಪ್ರೊ. ಪ್ರತಿಭಾ ಎಂ.ಡಿ., ಪ್ರೊ. ರಾಧಾ ಬಿ. ಇವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕುಮಾರಿ ಪ್ರಿಯ ಹೆಚ್ ಕೆ ಅವರು ನಿರೂಪಿಸಿದರೆ ಕುಮಾರಿ ಪಾವನಿ ಮತ್ತು ಅಕ್ಷತಾ ಪ್ರಾರ್ಥಿಸಿದರು ಕೊನೆಯಲ್ಲಿ ಡಾ ವೆಂಕಟೇಶ್ ಬಾಬು ವಂದಿಸಿದರು.

LEAVE A REPLY

Please enter your comment!
Please enter your name here