ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಪ್ರತಿವರ್ಷವೂ ಕೂಡಾ ರಾಜ್ಯದ ಪತ್ರಕರ್ತರು ಮಾಧ್ಯಮಗಳ ಹಲವು ವಿಭಾಗಗಳಲ್ಲಿ ಕರ್ತವ್ಯ ನಿಭಾಯಿಸುತ್ತಿರುವವರನ್ನು ಗುರುತಿಸಿ ದತ್ತಿನಿಧಿ ಪ್ರಶಸ್ತಿ ಗಳನ್ನು ನೀಡಿ ವೃತ್ತಿಬಾಂಧವರನ್ನು ಪುರಸ್ಕರಿಸಿ ಪ್ರೋತ್ಸಾಹಿಸಲಾಗುತ್ತಿದೆ.ಈ ದತ್ತಿ ನಿಧಿ ಪ್ರಶಸ್ತಿಗಳು ಸಂವಿಧಾನ ಶಿಲ್ಪಿ ಡಾಕ್ಟರ್ ಭೀಮರಾವ್ ಅಂಬೇಡ್ಕರ್ ರವರಿಂದ ಹಿಡಿದು ನಾಡಿನ ಹೆಸರಾಂತ ಹಿರಿಯ ಪತ್ರಕರ್ತರ ಹೆಸರುಗಳಲ್ಲಿ ದತ್ತಿನಿಧಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
  ದಿನಾಂಕ:09-03-2025,ರಂದು ಕೊಪ್ಪಳದಲ್ಲಿ ನಡೆಯಲಿರುವ ಈ ದತ್ತಿ ನಿಧಿ ಪ್ರಶಸ್ತಿಗೆ ಭಾಜನರ ವಿವರ ಇಂತಿದೆ.
     ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ:
ಸುಬ್ಬು ಹೊಲೆಯಾರ್

ಡಿ.ವಿ.ಜಿ.ಪ್ರಶಸ್ತಿ :
ರಾಘವೇಂದ್ರ ಗಣಪತಿ, ವಿಜಯವಾಣಿ

ಎಚ್. ಎಸ್. ದೊರೆಸ್ವಾಮಿ ಪ್ರಶಸ್ತಿ: ಯು.ಜಿ.ಭಟ್, ಉದಯವಾಣಿ, ಹೊನ್ನಾವರ.

ಎಸ್.ವಿ. ಜಯಶೀಲರಾವ್ ಪ್ರಶಸ್ತಿ: ಅನು ಶಾಂತರಾಜು, ಹಿರಿಯ ಪೋಟೋ ಜರ್ನಲಿಸ್ಟ್, ತುಮಕೂರು

ಪಾಟೀಲ್ ಪುಟ್ಟಪ್ಪ(ಪಾಪು) ಪ್ರಶಸ್ತಿ: ಸುಭಾಷ್ ಹೂಗಾರ, ಹಿರಿಯ ಪತ್ರಕರ್ತರು.

ಗೊಮ್ಮಟ ಮಾಧ್ಯಮ ಪ್ರಶಸ್ತಿ: ಎಂ.ಆರ್.ಸತ್ಯನಾರಾಯಣ, ಮೈಸೂರು.

ಸಿ.ಆರ್.ಕೃಷ್ಣರಾವ್ ಪ್ರಶಸ್ತಿ: ಉಗಮ ಶ್ರೀನಿವಾಸ್, ಕನ್ನಡಪ್ರಭ

ಶ್ರೀಮತಿ ಯಶೋದಮ್ಮ ಜಿ. ನಾರಾಯಣ ಪ್ರಶಸ್ತಿ: ಮಂಜುಶ್ರೀ ಎಂ ಕಡಕೊಳ, ಪ್ರಜಾವಾಣಿ.

ಬದರಿನಾಥ ಹೊಂಬಾಳೆ ಪ್ರಶಸ್ತಿ : ಗಂಗಹನುಮಯ್ಯ, ಅಮೃತವಾಣಿ, ತುಮಕೂರು

ಡಾ.ಎಂ.ಎಂ.ಕಲ್ಬುರ್ಗಿ ಪ್ರಶಸ್ತಿ: ಡಾ.ಸಿದ್ಧನಗೌಡ ಪಾಟೀಲ್, ಸಂಪಾದಕರು, ಹೊಸತು

ಕಿಡಿಶೇಷಪ್ಪ ಪ್ರಶಸ್ತಿ: ಮು.ವೆಂಕಟೇಶಯ್ಯ, ಸಿಂಹ ಬೆಂಗಳೂರು

*ರವಿ ಬೆಳಗೆರೆ ಪ್ರಶಸ್ತಿ:

ಎಂ.ಕೆ.ಹೆಗಡೆ, ಹಿರಿಯ ಪತ್ರಕರ್ತರು, ಬೆಳಗಾವಿ*

ಪಿ.ಆರ್. ರಾಮಯ್ಯ ಸ್ಮಾರಕ ಪ್ರಶಸ್ತಿ: ಎಂ.ಯೂಸುಫ್ ಪಟೇಲ್, ಹಿರಿಯ ಪತ್ರಕರ್ತರು.

ಹೆಚ್.ಕೆ. ವೀರಣ್ಣಗೌಡ ಸ್ಮಾರಕ ಪ್ರಶಸ್ತಿ: ಬಸವರಾಜ ಹೆಗ್ಗಡೆ, ಸಂಜೆ ಮಿತ್ರ, ಮಂಡ್ಯ

ರಾಜಶೇಖರ ಕೋಟಿ ಪ್ರಶಸ್ತಿ:
ಕೆ.ಕೆ.ಬೋಪಣ್ಣ, ಆಂದೋಲನ, ಕೊಡಗು

ಪಿ.ರಾಮಯ್ಯ ಪ್ರಶಸ್ತಿ: ಎಸ್.ಟಿ.ರವಿಕುಮಾರ್, ಸ್ಟಾರ್ ಆಪ್ ಮೈಸೂರು.

ಮಾ. ರಾಮಮೂರ್ತಿ ಸ್ಮಾರಕ ಪ್ರಶಸ್ತಿ: ತಾ.ನಂ. ಕುಮಾರಸ್ವಾಮಿ, ಆನೆಕಲ್

ಮಹದೇವ ಪ್ರಕಾಶ್ ಪ್ರಶಸ್ತಿ: ಪ್ರಭುಲಿಂಗ ನಿಲೂರೆ, ವಿಜಯ ಕರ್ನಾಟಕ, ಕಲಬುರ್ಗಿ

ಶಿವಮೊಗ್ಗ ಮಿಂಚು ಶ್ರೀನಿವಾಸ ಪ್ರಶಸ್ತಿ: ಚಂದ್ರಶೇಖರ ಶೃಂಗೇರಿ, ಶಿವಮೊಗ್ಗ

ಎಚ್.ಎಸ್. ರಂಗಸ್ವಾಮಿ ಪ್ರಶಸ್ತಿ: ಗಿರೀಶ್ ಉಮ್ರಾಯಿ, ಶಿವಮೊಗ್ಗ

ಎಂ.ನಾಗೇಂದ್ರ ರಾವ್ ಪ್ರಶಸ್ತಿ: ಕೆ.ಬಿ.ಜಗದೀಶ್, ಸಂಜೆವಾಣಿ, ಕೋಲಾರ

ಶ್ರೀಮತಿ ಗಿರಿಜಮ್ಮ, ರುದ್ರಪ್ಪ ತಾಳಿಕೋಟಿ ಪ್ರಶಸ್ತಿ: ಕವಿತ, ಸಂಯುಕ್ತ ಕರ್ನಾಟಕ

ಅಪ್ಪಾಜಿಗೌಡ (ಸಿನಿ)ಪ್ರಶಸ್ತಿ: ಗಣೇಶ್ ಕಾಸರಗೋಡು, ಹಿರಿಯ ಪತ್ರಕರ್ತರು

ಮೂಡಣ, ಹಾವೇರಿ ಪ್ರಶಸ್ತಿ: ಎಂ.ಚಿರಂಜೀವಿ, ಹಿರಿಯ ಪತ್ರಕರ್ತರು, ಹಾವೇರಿ

ಕೆಯುಡಬ್ಲ್ಯೂಜೆ ವಿಶೇಷ ಪ್ರಶಸ್ತಿಗಳು:

ರಂಗನಾಥ್ ಎಸ್ ಭಾರದ್ವಾಜ್- ಟಿವಿ9
ರಮಾಕಾಂತ್-ಟಿವಿ5
ಶ್ರೀನಿವಾಸ್-ಬೆಂಗಳೂರು.
ಬಿ.ಪಿಳ್ಳರಾಜು- ಬೆಂಗಳೂರು ಗ್ರಾಮಾಂತರ.
ಬಾಸ್ಕರ ರೈ ಕಟ್ಟ-ಮಂಗಳೂರು
ಗುರುಶಾಂತ.ಎನ್. -ಬಳ್ಳಾರಿ
ಎಸ್.ಎಂ.ಮನೋಹರ-
ಹೊಸಪೇಟೆ, ವಿಜಯನಗರ.
ಸಿ.ಬಿ.ಸುಬೇದಾರ್- ನರಗುಂದ, ಗದಗ.
   ಮುಂತಾದವರು ಸ್ವೀಕರಿಸಲಿದ್ದಾರೆ. ಈ ಸಮಾರಂಭವು
  ಕೊಪ್ಪಳ ನಗರದ ಕಟಾರೆ ಕಲ್ಯಾಣ ಮಂಟಪದಲ್ಲಿ  ಇದೆ ದಿ .9 ರಂದು ಭಾನುವಾರ ಮಧ್ಯಾಹ್ನ 1 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಾನಿಧ್ಯವನ್ನು ವಹಿಸಲಿದ್ದಾರೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ  ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು.

ಹಿರಿಯರ ನೆನಪಿನಂಗಳದಲ್ಲಿ ಪುಸ್ತಕ ಬಿಡುಗಡೆಯನ್ನು ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಅವರು ನೆರವೇರಿಸುತ್ತಾರೆ.  ಅಭಿನಂದನಾ ನುಡಿಗಳನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್ ಅವರು ನುಡಿಯಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷ ಶಿವಾನಂದ ವಹಿಸಿಕೊಳ್ಳಲಿದ್ದಾರೆ. 

ಕಾರ್ಯಕ್ರಮದಲ್ಲಿ ಹನುಮಂತ ಹಳ್ಳಿಕೇರಿ ಜಿಲ್ಲಾಧ್ಯಕ್ಷರು  ಕೊಪ್ಪಳ ಜಿಲ್ಲಾ ಘಟಕ ಇವರು ಮೊದಲ ನುಡಿಗಳನ್ನು ಆಡಲಿದ್ದಾರೆ.  ಜೊತೆಗೆ ಪುಸ್ತಕದ ಕುರಿತು ಮಾಧ್ಯಮ ತಜ್ಞ ಬಹುರೂಪಿ ಬುಕ್ ಹೌಸ್ನ ಜಿ.ಎನ್. ಮೋಹನ್ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಕೆ. ರವಿ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಘವೇಂದ್ರ ಹಿಟ್ನಾಳ್, ಸಂಸದ ರಾಜಶೇಖರ, ನಗರಸಭೆ ಅಧ್ಯಕ್ಷ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ ಗುಪ್ತ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿಯ ಪ್ರಧಾನಕಾರ್ಯದರ್ಶಿ ಶ್ರೀ ಜಿಸಿ.ಲೋಕೇಶ್ ರವರು ಹಾಗೂ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿರುವರು ಎಂದು kuwjರಾಜ್ಯ ಅಧ್ಯಕ್ಷರಾದ ಶ್ರೀ ಶಿವಾನಂದ ತಗಡೂರ್ ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here