ಬೆಂಗಳೂರು:ಅಖಿಲ ಕರ್ನಾಟಕ ಡಾ”ರಾಜ್ ಕುಮಾರ್
ಸೇನಾ ಸಮಿತಿ (ರಿ) ರಾಜಾಜಿನಗರ,ಬೆಂಗಳೂರು.
ವತಿಯಿಂದ ಡಾ”ರಾಜಕುಮಾರ್ ನಾಮಫಲಕಕ್ಕೆ ಪೂಜೆ
27/01/1994 ರಲ್ಲಿ 80 ಅಡಿ ರಸ್ತೆಗೆ ಡಾ”ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಿ ಇಂದಿಗೆ 3 ದಶಕಗಳು ತುಂಬಿ 31ನೇ ವರ್ಷಕ್ಕೆ ಬಂದ ಹಿನ್ನೆಲೆಯಲ್ಲಿ 27/01/2025 ಈ ಮೇಲ್ಕಂಡ ಸಂಘದ ವತಿಯಿಂದ ರಾಜಾಜಿನಗರ ಪ್ರವೇಶ ದ್ವಾರದಲ್ಲಿ ಡಾ”ರಾಜಕುಮಾರ್ ರಸ್ತೆ ಎಂಬ ನಾಮಫಲಕಕ್ಕೆ ಬಾಳೆ ಕಂಬ ಕಟ್ಟಿ, ಹೂವಿನಹಾರ ಹಾಕಿ ನಂತರ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು ಈ ಕಾರ್ಯಕ್ರಮದಲ್ಲಿ ಮೇಲ್ಕಂಡ ಸಂಘದ ಅಧ್ಯಕ್ಷರಾದ – ಹೆಚ್ ಎಸ್ ಕುಮಾರಸ್ವಾಮಿ, ಪದಾಧಿಕಾರಿಗಳಾದ – ಲಿಂಗರಾಜು, ಕನ್ನಡ ದಿನೇಶ್, ವಿಜ್ಞೇಶ್ ಕುಮಾರ್, ಅಪ್ಪು, ಸತೀಶ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.