ಬೆಂಗಳೂರು: ಕರ್ನಾಟಕದ ಮೇರುನಟರಲ್ಲೊಬ್ಬರಾದ ಕರುಣಾಮಯಿ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ರವರ ಅಭಿಮಾನಿಗಳಾದ ರುದ್ರದೇವ ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಡೈರಿಸರ್ಕಲ್ ರಾಜ್ಯ ಅಧ್ಯಕ್ಷರಾದ ಬಿಬಿಎಂಪಿ ಶ್ರೀ ವೆಂಕಟರಾಮು ಆರ್.(ರಾಮಣ್ಣ)ನವರು ಇಂದು ಬೆಳಿಗ್ಗೆ ಆರು ಗಂಟೆಯ ಸಮಯದಲ್ಲಿ ಡಾಕ್ಟರ್ ವಿಷ್ಣುವರ್ಧನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ವಿಲ್ಸನ್ ಗಾರ್ಡನ್ ಹೊಂಬೇಗೌಡ ವಾರ್ಡಲ್ಲಿ ಕಾರ್ಯನಿವರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಹಣ್ಣು,ಬ್ರೆಡ್ ವಿತರಿಸುವ ಮೂಲಕ ಮೇರುನಟ ಡಾಕ್ಟರ್ ವಿಷ್ಣುವರ್ಧನ್ ರವರ ಹದಿನೈದನೆಯ ಪುಣ್ಯಸ್ಮರಣೆ ಮಾಡಿದರು.

ಇವರೊಂದಿಗೆ ಬಿಬಿಎಂಪಿ ಯ ಜ್ಯೂನಿಯರ್ ಹೆಲ್ತ್ ಇನ್ಸ್ಪೆಕ್ಟರ್
ರಾಮಕುಮಾರ್ ರವರು ವಿಷ್ಣು ಅಭಿಮಾನಿ ಶೇಖರ್ ಹಾಗೂ ಬಿಬಿಎಂಪಿ ಲಿಂಕ್ ವರ್ಕರ್ಸ್ ಗಳಾದ ಭವಾನಿ ಮತ್ತು ವಸಂತಮ್ಮನವರು ಸಾತ್ ನೀಡಿದರು.
ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯರಾದ ಶ್ರೀ ಎಸ್ ಕೆ.ಒಡೆಯರ್, ರಾಮಣ್ಣನವರ ಸಹೋದರ ಕಾರ್ತಿಕ್ ಸೇರಿದಂತೆ ಅನೇಕ ವಿಷ್ಣುವರ್ಧನ್ ಅಭಿಮಾನಿಗಳು ಭಾಗವಹಿಸಿ ಕಾರ್ಯವನ್ನು ನೆರವೇರಿಸಿದರು..