ಮಂಡ್ಯ ಹೊರವಲಯದ ಸುಂಡಹಳ್ಳಿ ಗ್ರಾಮದ ಬಳಿ ಕೇಸರಿ ಶಾಲು ಹಾಗೂ ಆರ್ ಎಸ್ ಎಸ್ -ಬಜರಂಗಧಳ ಬಾವುಟ ಹಿಡಿದಿದ್ದ ಯುವಕರ ಗುಂಪು ದಾರಿಹೋಕ ಮುಸ್ಲಿಂ ಯುವಕರನ್ನು ಅಡ್ಡಹಾಕಿ ,ಜೈಶ್ರೀರಾಮ್ ಘೋಷಣೆ ಹಾಕುವಂತೆ ಒತ್ತಡ ಹಾಗೂ ಬೆದರಿಕೆ ಒಡ್ಡಿರುವ ಕೋಮು ಕ್ರಿಮಿನಲ್ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಕರ್ನಾಟಕ ರಾಜ್ಯ ಸರ್ಕಾರ ವನ್ನು ಆಗ್ರಹಿಸುತ್ತದೆ.

ಶ್ರೀರಂಗಪಟ್ಟಣದ ಹನುಮ ಮಾಲೆ ಹೆಸರಿನಲ್ಲಿ ಪ್ರತಿ ವರ್ಷ ಕೋಮುವಾದಿ ಮನಸ್ಥಿತಿಯನ್ನು ಪೋಷಿಸಲಾಗುತ್ತಿದೆ. ಕಾನೂನು ಸುವ್ಯವಸ್ಥೆಗೆ ಹಾಗೂ ಶಾಂತಿ-ಸೌಹಾರ್ಧತೆಗೆ ಗಂಭೀರ ಧಕ್ಕೆ ತರುವ ಇಂತಹ ಮೆರವಣಿಗೆಗಳಿಗೆ ಅವಕಾಶ ನೀಡಿರುವುದು ಕಾಂಗ್ರೆಸ್ ಸರ್ಕಾರದ ಹೊಣೆಗೇಡಿತನಕ್ಕೆ ಹಿಡಿದ ಕನ್ನಡಿಯಾಗಿದೆ. 1991 ರ ಪೂಜಾ ಸ್ಥಳ ಕಾಯ್ದೆ ಅನುಸಾರ ಕ್ರಮ ಕೈಗೊಳ್ಳಬೇಕಾದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೋಮುವಾದಿ ಚಟುವಟಿಕೆಗಳನ್ನು ನಿಯಂತ್ರಿಸಲು ವಿಫಲವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಅಪಾದಿಸುತ್ತದೆ.

ಹನುಮ ಮಾಲೆ ಎಂಬುದು ಧಾರ್ಮಿಕ ಚಟುವಟಿಕೆ ಅಲ್ಲ ಎಂಬುದು ಬಹಳ ಸ್ಪಷ್ಟ. ಬಿಜೆಪಿ-ಆರ್ ಎಸ್ ಎಸ್ ನ ರಾಜಕೀಯ ಸಂಕುಚಿತ ದುರುದ್ದೇಶಕ್ಕಾಗಿ ನಡೆಯುತ್ತಿರುವ ಕೋಮುವಾದಿ ಚಟುವಟಿಕೆಯಾಗಿದೆ. ಇಂತಹ ಕೋಮುವಾದಿ ಚಟುವಟಿಕೆಗಳನ್ನು ರಾಜಕೀಯವಾಗಿ ಎದುರಿಸಬೇಕು ಮತ್ತು ಕೋಮು ಗಲಭೆ ಉಂಟು ಮಾಡುವ ಯಾವುದೇ ಪ್ರಯತ್ನವನ್ನು ಯಾವುದೇ ಹಿಂಜರಿಕೆ ಇಲ್ಲದೆ ಕಠಿಣ ಕಾನೂನು ಕ್ರಮದ ಮೂಲಕ ತಡೆಗಟ್ಟಬೇಕು. ಅಲ್ಪಸಂಖ್ಯಾತರ ಆತಂಕ ಮತ್ತು ಆಭದ್ರತೆಯನ್ನು ಮುಸ್ಲಿಂ ಮೂಲಭೂತವಾದಿ ಶಕ್ತಿಗಳು ದುರುಪಯೋಗ ಮಾಡಿಕೊಳ್ಳದಂತೆ ಸೂಕ್ತ ಜಾಗೃತಿ ಉಂಟು ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ(KPRS) ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಜಿಸಿ ಬಯ್ಯಾರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿ ಟಿ ಯಶವಂತ ಆಗ್ರಹಿಸಿದ್ದಾರೆ.


LEAVE A REPLY

Please enter your comment!
Please enter your name here