ಶ್ರೀ ಭಕ್ತ ಕನಕದಾಸರ ಜಯಂತಿಯು ದಿನಾಂಕ 18-11-2024ರಂದು
ಕೆ ಆರ್ ಪೇಟೆ:ತಾಲ್ಲೂಕು ಆಡಳಿತ ವತಿಯಿಂದ ಶಾಸಕರು ಹೆಚ್ ಟಿ ಮಂಜು ಅವರ ನೇತೃತ್ವದಲ್ಲಿ ಇದೇ ತಿಂಗಳು 18ನೇ ತಾರೀಖು ದಾಸರಲ್ಲಿ ಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯೋತ್ಸವವು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಆವರಣದಲ್ಲಿ ನಡೆಯಲಿದ್ದು ತಾಲ್ಲೂಕಿನ ಎಲ್ಲ ಸಮುದಾಯದ ಬಂದವರು ಅಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮಾಜಿ ಜಿ.ಪಂ.ಸದಸ್ಯರಾದ ಕೋಡಿಮಾರನಹಳ್ಳಿ ದೇವರಾಜು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ರಮೇಶ್, ಕುರುಬ ಸಮಾಜ ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ್,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಎಲ್ ಕೆ ಮಂಜುನಾಥ್ ತಾ.ಪಂ.ಮಾಜಿ ಸದಸ್ಯ ಶ್ಯಾಮಣ್ಣ, ಸಣ್ಣನಿಂಗೇಗೌಡ,ಪುರಸಭಾ ಮಾಜಿ ಸದಸ್ಯ ವಿನೋದ್,ಕಾಳಿದಾಸ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಾಳೇಗೌಡ, ಪತ್ರಕರ್ತ ಚಂದ್ರು,ಮಹೇಶ್, ಶ್ರೀನಿವಾಸ್, ಮನು,ಮಂಜುನಾಥ್,ಮಹೇಶ್,ಗಂಜಿಗೆರೆ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here