ವಿಜಯಪುರ:ವಿಜಯಪುರ ತಾಲೂಕಿನ ಹೊನಗನಹಳ್ಳಿ ಗ್ರಾಮವು ಶೃಂಗಾರಗೊಂಡು ಗ್ರಾಮಸ್ಥರ ಅತ್ಯುತ್ಸಾಹದ ಓಡಾಟ ಕಾರ್ಯಚಟುವಟಿಕೆಗಳು ಬಹಳ ಆತ್ಮತೃಪ್ತಿಯ ಚಟುವಟಿಕೆಗಳು ಸಾಗಿದ್ದವು.ನನಗೂ ಕೂಡಾ ಆ ಕಾರ್ಯಕ್ರಮಕ್ಕೆ ಅಹ್ವಾನ ಇದ್ದಿದ್ದರಿಂದ ಒಲ್ಲದ ಮನಸ್ಸಿದ್ದರೂ ಸಹ ನನಗೆ ಅತ್ಯಂತ ಆತ್ಮೀಯ ಮತ್ತು ನನ್ನ ಏಳ್ಗೆಗೆ ಸದಾ ಶುಭಹಾರೈಸುತ್ತಾ ಬಂದಿರುವ ನನ್ನ ಹಿರಿಯ ಸಹೋದರಿಯ ಸಮಾನರ ಕರೆಯನ್ನು ನಾನು ತಿರಸ್ಕರಿಸಲಾಗದೇ ಸ್ವಲ್ಪ ತಡವಾಗಿಯೇ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ.ಯಾವುದೇ ಕಾರ್ಯಕ್ರಮದ ಸಭಿಕರ ಕೊನೆಯ ಸಾಲು ಅಥವಾ ಮೂರನೆ ಸಾಲಿನಲ್ಲಿ ಕುಳಿತು ಸಮಾರಂಭ ನೋಡುವ ನನಗೆ ವೇದಿಕೆಗೆ ಕರೆದು ಸ್ವಾಗದ ಮಾಡುವಂತೆ ಕೇಳಿಕೊಂಡಾಗ ಅನಿವಾರ್ಯವಾಗಿ ವೇದಿಕೆಗೆ ಹೋಗಿ ಅಪರ ತಪರಾ ಸ್ವಾಗತ ಮಾಡಿದೆ.ಸಹೋದರಿ ಶ್ರೀ ಮತಿ ವಿಜಯಲಕ್ಷ್ಮಿ ಜಿ ಬಿದರಿಯವರು ಚಲ್ಲಿದರು ಮಲ್ಲಿಗೆಯಾ..ಗೀತೆಯ ಪ್ರಾರ್ಥನೆ ಮಾಡಿದರು.

ಈಗ ಮುಖ್ಯ ವಿಷಯಕ್ಕೆ ಬರುವುದಾದರೆ ಶ್ರೀ ರಾಚಪ್ಪಗೌಡ ಬಿರಾದಾರ

ಇವರು ಪಂಡರಾಪುರದ ವಿಠಲ ರುಕ್ಮಿಣಿಯವರ ಪರಮ ಭಕ್ತರೂ ಕೂಡ ಆಗಿದ್ದರು ಇವರು ಹಾಲಮತ ಸಮಾಜದ ಕಂಬಳಿ ವ್ಯಾಪಾರಿಯಾಗಿದ್ದರು. ತಮ್ಮಕಂಬಳಿ ವ್ಯಾಪಾರ ವೃತ್ತಿಮಾಡುತ್ತ ಅಂದಿನ ಬಳ್ಳಾರಿ ಜಿಲ್ಲೆ ನಂತರ ದಾವಣಗೆರೆ ಜಿಲ್ಲೆ ಈಗ ನೂತನ ವಿಜಯ ನಗರ ಜಿಲ್ಲೆಯ ತಾಲೂಕು ಕೇಂದ್ರವಾದ ಹರಪ್ಪನಹಳ್ಳಿಗೆ ಹೋದಾಗ ಅಲ್ಲಿ ಪಂಡರಾಪುರ ವಿಠಲನ ಪರಮ ಭಕ್ತರಾದ ಶ್ರೀ ಸಂತ ಸಂತೂರಾಮ್ ಬಾಬಾ ಸ್ಪಟಿಕೆ ಮಹಾರಾಜ ರ ಪರಿಚಯವಾಗುತ್ತದೆ.ಈ ಸಂತ ಸಂತೂರಾಮ್ ಬಾಬಾ ಸ್ಪಟಿಕೆ ಯವರು ಪ್ರತಿ ವರ್ಷ ತಮ್ಮ ಅನುಯಾಯಿಗಳಾದ ವಿಠಲನ ಭಕ್ತ ಸಮೂಹದೊಂದಿಗೆ ಭಜನೆಮಾಡುತ್ತ ಪಾದಯಾತ್ರೆಯ ಮುಖಾಂತರ ಹರಪನಹಳ್ಳಿಯಿಂದ ಮಹಾರಾಷ್ಟ್ರದ ಪಂಡರಾಪುರದವರೆದಗೆ ಪಾದ(ದಿಂಡಿ)ಯಾತ್ರೆ ಮಾಡುತ್ತಿರುತ್ತಾರೆ.

ದಾರಿ ಮಧ್ಯದ ಕೆಲವು ಗ್ರಾಮ ಹಾಗೂ ಪಟ್ಟಣ ಗಳಲ್ಲಿ ಈ ದಿಂಡಿಯಾತ್ರೆಯ ವಿಠಲನ ಭಕ್ತರು ಸೂರ್ಯಾಸ್ತ ನಂತರ ತಲುಪಿದಲ್ಲಿ ವಸತಿ ಮಾಡಿ ಮತ್ತೆ ಮರುದಿವಸ ತಮ್ಮ ದಿಂಡಿಯಾತ್ರೆಯನ್ನು ಮುಂದು ವರಿಸುತ್ತಾರೆ.ಈ ಸಂದರ್ಭದಲ್ಲಿ ಸೂರ್ಯಾಸ್ತದ ಸಮಯದಲ್ಲಿ ತಲುಪಿದ ಗ್ರಾಮಗಳ ಗ್ರಾಮಸ್ತರು ಈ ದಿಂಡಿಯಾತ್ರೆಯ ಭಕ್ತವೃಂದಕ್ಕೆ ತಮ್ಮ ಕೈಲಾದಷ್ಟು ಆಹಾರ,ನೀರು,ವಸತಿ,ಔಷದೋಪಚಾರದ ಸೇವೆ ಸಲ್ಲಿಸಿ ಸಂತೃಪ್ತಭಾವ ಹೊಂದುತ್ತಾರೆ.ಅದೇ ರೀತಿ ವಿಠಲನ ಪರಮ ಭಕ್ತರಾಗಿದ್ದ ಈ ಕಂಬಳಿ ವ್ಯಾಪಾರಿ ಹಾಲುಮತದ ರಾಚಪ್ಪಗೌಡ ಬಿರಾದಾರ್ ಅವರಿಗೂ ಮತ್ತು ಪಂಡರಪುರ ವಿಠಲನ ಪರಮಭಕ್ತರಾದ ಸಂತೂರಾಮ್ ಬಾಬಾರ ಪರಿಚಯವಾಗಿ ಈ ದಿಂಡಿಯಾತ್ರೆಯ ಭಕ್ತರಿಗೆ ಹೊನಗನಹಳ್ಳಿ ಗ್ರಾಮದಲ್ಲಿ ತಮ್ಮ ಮನೆಯಲ್ಲಿಯೇ ಅತಿಥಿ ಸತ್ಕಾರ ಮಾಡ್ತಾ ಬರ್ತಾರೆ. ಹಾಗೇ ಇದು ಪ್ರತಿವರ್ಷ ನಡೆಯುತ್ತಾ ದಿಂಡಿಯಾತ್ರೆಯ ಭಕ್ತರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಬರ್ತದೆ ಇದರಿಂದ ರಾಚಪ್ಪಗೌಡರು ಸಲ್ಲಿಸುತ್ತಿರುವ ಅತಿಥಿಸತ್ಕಾರ ಕಾರ್ಯಕ್ಕೆ ಗ್ರಾಮದ ಇತರರೂ ಸೇವಾಮನೋಭಾವದಿಂದ ಸಹಕಾರ ನೀಡುಲು ಉತ್ಸುಕರಾಗಿ ಸೇವೆ ಸಲ್ಲಿಸುತ್ತಾ ಬರುತ್ತಾರೆ .

ವರ್ಷಗಳು ಉರುಳಿದಂತೆ ದಿಂಡಿಯಾತ್ರೆಯ ಭಕ್ತರ ಸಂಖ್ಯೆಯು ಹೆಚ್ಚುತ್ತಾ ಬಂದಂತೆ ಈ ಚಿಕ್ಕಗ್ರಾಮದಲ್ಲಿ ಸಾವಿರಾರು ಯಾತ್ರಿಯ ಭಕ್ತರಿಗೆ ಅಲ್ಪಸ್ವಲ್ಪ ಅಸ್ತವ್ಯಸ್ತತೆಗಳಾದರೂ ಯಾತ್ರಿಯ ಭಕ್ತಸಮೂಹವು ಅದನ್ನು ತೃಪ್ತಿಯಿಂದಲೇ ಸ್ವೀಕರಿಸಿ ಅತಿಥಿ ಸತ್ಕಾರ ಕಾರ್ಯನಿರ್ವಹಿಸುವರಿಗೆ ಹೆಚ್ಚಿನ ಉತ್ತೇಜನ ನೀಡಿ ಶುಭ ಹಾರೈಸುತ್ತಾ ಬರುತ್ತಾರೆ. ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾದಾಗ ಈ ಗ್ರಾಮದ ಬಹುದೊಡ್ಡ ಕುಟುಂಬವಾದ ಬಿದರಿಯವರು. ಕೈಗೆ ತೆಗೆದುಕೊಂಡು ಈ ಬಿದರಿಯವರ ಕುಟುಂಬದೊಂದಿಗೆ ರಾಗಾ ಎಂಬ ಮನೆತನದವರ ನೆಂಟಸ್ತಿಕೆ ಆಗುತ್ತದೆ.ಬಿದರಿ ಬಾಲಪ್ಪ ಮತ್ತು ತುಂಗವ್ವ ದಂಪತಿಗಳು ತಮ್ಮ ಮಗಳನ್ನು ರಾಘಾರವರ ಕುಟುಂಬದವರಿಗೆ ಕೊಟ್ಟು ಮದುವೆ ಮಾಡುತ್ತಾರೆ. ಮದುವೆಯಾದ ಕೆಲವರ್ಷಗಳ ನಂತರ ರಾಘಾ ಕುಟುಂಬದವರು ಈ ಹೊನಗನಹಳ್ಳಿಗೆ ಬಂದು ನೆಂಟರಾದ ಬಿದರಿಯವರ ಮನೆಯಲ್ಲೇ ನೆಲೆಸುತ್ತಾರೆ ರಾಘಾ ಅವರ ಕುಟುಂಬದ ಹಿರಿಯರಾದ ಗೋಪಾಳಪ್ಪ ರಾಘಾ ಇವರು ಸಮಾಜಸೇವಾಮುಖಿಯಾಗಿ ಗ್ರಾಮದ ಜನರ ಮಧ್ಯ ಬೆರೆತು ಜನರ ಕಷ್ಟಕಾರ್ಪಣ್ಯಗಳಿಗೆ ಸಹಾಯ ಹಸ್ತ ಚಾಚುತ್ತಾ ಜನಾನುರಾಗಿಯಾಗಿರುತ್ತಾರೆ.ಅವರು ಈ ರಾಚಪ್ಪ ಗೌಡರು ಸಲ್ಲಿಸುತ್ತಿರುವ ದಿಂಡಿಯಾತ್ರಿಗಳ ಅತಿಥಿ ಸತ್ಕಾರ ಕಾರ್ಯಗಳಿಗೆ ಕೈ ಜೋಡಿಸಿಸುತ್ತಾರೆ.ವಯೋಸಹಜ ರಾಚಪ್ಪಗೌಡರ ನಿಧನದ ನಂತರ ಬಿದರಿಯವರ ನೆಂಟರಾದ ಗೋಪಾಳಪ್ಪ ಬಿದರಿಯವರು ಕೆಲ ವರ್ಷಗಳಕಾಲ ಮುಂದುವರಿಸುತ್ತಾರೆ.ಆದರೆ ಅವರ ಪುತ್ರ ಅಪಘಾತದಲ್ಲಿ ನಿಧನರಾಗುತ್ತಾರೆ ಆ ಪುತ್ರ ಶೋಕದಲ್ಲಿ ಗೋಪಾಲಪ್ಪನವರ ಆರೋಗ್ಯವೂ ಹದಗೆಟ್ಟು ಅವರೂ ಕೂಡಾ ಇಹಲೋಕ ತ್ಯಜಿಸುತ್ತಾರೆ.ಇದರಿಂದ ಬಿದರಿಯವರ ಕುಟುಂಬಕ್ಕೆ ಸಾಕಷ್ಟು ನೋವಾದರೂ ಕೂಡಾ ಸಾವರಿಸಿಕೊಂಡು ಪ್ರತಿ ವರ್ಷ ಬರುವ ದಿಂಡಿ ಯಾತ್ರಿಗಳಿಗೆ ಅತಿಥಿ ಸತ್ಕಾರ ಕಾರ್ಯವನ್ನು ಕೊನೆಗೊಳಿಸಬಾರದೆಂದು ತೀರ್ಮಾನಿಸಿ ಬಿದರಿಯವರ ಕುಟುಂಬದ ಸದಸ್ಯರು ತೀರ್ಮಾನಿಸಿ ಮುಂದುವರಿಸಿಕಡು ಬರುತಿದ್ದಾರೆ.

ಇದರ ಮಧ್ಯ ಪರಮಪಾಡುರಂಗನ ಭಕ್ತರಾದ ಹೊನಗನಹಳ್ಳಿಯ ಶ್ರೀ ರಾಚಪ್ಪ ಗೌಡರೂ ಗೋಪಾಲಪ್ಪ ರಾಘಾ ರವರು ಕಾಲವಾದಂತೆ ಹರಪ್ಪನ ಹಳ್ಳಿಯಿಂದ ಭಕ್ತರ ಸಮೂಹದೊಂದಿಗೆ ಪಂಡರಪುರಕ್ಕೆ ದಿಂಡಿಯಾತ್ರೆ ಬರುತಿದ್ದ ಸಂತ ಶ್ರೀ ಸಂತೂರಾಮ್ ಬಾಬಾರವರೂ ಕಾಲವಾಗ್ತಾರೆ.ಆ ಕುಟುಂಬದವರೂ ಕೂಡಾ ಈ ಹರಪ್ಪನಹಳ್ಳಿಯಿಂದ ಹೊರಡುವ ದಿಂಡಿಯಾತ್ರೆಯನ್ನು ಯಾವುದೇ ಕಾರಣಕ್ಕೂ ಕೊನೆಗೊಳಿಸಬಾರದೆಂದು ತೀರ್ಮಾನಿಸಿ ಸಂತ ಶ್ರೀ ಸಂತೂರಾಮ್ ಬಾಬಾ ಸ್ಪಟಿಕೆಯವರ ಪುತ್ರರಾದ ಸಂತ ಶ್ರೀ ಜ್ಞಾನೇಶ್ವರ ಮಹಾರಾಜರು ಈ ದಿಂಡಿಯಾತ್ರೆಯನ್ನು ಮುಂದುವರೆಸಿಕೊಂಡು ಹೊರಟಿದ್ದಾರೆ. ಸಂತ ಶ್ರೀ ಜ್ಞಾನೇಶ್ವರ ಮಹಾರಾಜರೂ ಸಹ ಪಂಡರಪುರ ವಿಠಲನ ಭಕ್ತವೃಂದದೊಂದಿಗೆ ಪ್ರತಿವರ್ಷ ಸಾವಿರಾರು ಭಕ್ತರೊಂದಿಗೆ ದಿಂಡಿಯಾತ್ರೆ ಹೊರಡುತ್ತಾರೆ.ಇದು ನಿರಂತರ ಪ್ರತಿವರ್ಷ ನಡೆಯುವ ದಿಂಡಿಯಾತ್ರೆಯ ಭಕ್ತರಿಗೆ ಅತಿಥಿ ಸತ್ಕಾರ ಕಾರ್ಯವನ್ನೂ ಬಿದರಿ ಕುಂಟುಂಬವು ಮುಂದುವರಿಸಿಕೊಂಡು ಬಂದಿದ್ದರಿಂದ ಇದು ಐವತ್ತನೆಯ ವರ್ಷ ಅಂದರೆ ತನ್ನ ಸುವರ್ಣ ಮಹೋತ್ಸವ ಕಾರ್ಯವನ್ನು ಬಿದರಿ ಕುಟುಂಬದ ಹಿರಿಯ ಚೇತನ ಶತಾಯುಷಿ ಶ್ರೀ ಮತಿ ತುಂಗವ್ವ ಬಾಲಪ್ಪ ಬಿದರಿಯವರ

ಹಿರಿಯ ಮಗ ಶ್ರೀ ಗೋವಿಂದಪ್ಪ ಮತ್ತು ಶ್ರೀಮತಿ ವಿಜಯಲಕ್ಷ್ಮಿ ಬಿದರಿಯವರ ಪುತ್ರ ಹೊನಗನಹಳ್ಳಿಯ ಭರವಸೆಯ ಯುವ ನಾಯಕ ಶ್ರೀ ಸಚಿನ್ ರವರು ವಯಸ್ಸು ಚಿಕ್ಕದಾಗಿದ್ದರೂ ಹೃದಯ ಸಿರಿವಂತಿಕೆಯನ್ನು ಹೊಂದಿರುವದು ಅವರ

ಕಾರ್ಯವೈಖರಿಯಿಂದ ಅರ್ಥಮಾಡಿಕೊಳ್ಳಬಹುದು.
ಶ್ರೀ ಸಚಿನ್ ಬಿದರಿಯವರ ಸುವರ್ಣದಂಥ ಗುಣವು ಇವತ್ತು ದಿನಾಂಕ:04-11-2024,ರಂದು ಈದಿಂಡಿಯಾತ್ರೆಯ ಸುವರ್ಣ ಮಹೋತ್ಸವ ಆಚರಿಸುವುದರ ಮೂಲಕ ಮತ್ತೊಮ್ಮೆ ಹೊನಗನಹಳ್ಳಿಯ ಭರವಸೆಯ ಯುವನಾಯಕನೆಂಬ ಆಶೆಯನ್ನು ಗ್ರಾಮಸ್ಥರಲ್ಲಿ ಮೂಡಿಸಿದೆ.
ಪ್ರತಿವರ್ಷದಂತೆ ಅವರು ಯಾತ್ರಿಗಳಿಗೆ ಊಟ ವಸತಿ ಉಪಚಾರಮಾಡಿ ಕಳಿಸಬಹುದಾಗಿತ್ತು ಆದರೆ ಸಚಿನ್ ತನ್ನ ಹಿರಿತನದ ಕುರುಹು ಆಗಿ ಈ ಸೇವೆ ಸಲ್ಲಿಸುತ್ತಿರುವವರು ಬರೀ ಬಿದರಿ ಕುಟುಂಬ ಮುಂಚೂಣಿಯಲ್ಲಿದ್ದರೂ ಸಹ ಬಿದರಿಯವರ ಇಂಥಾ ಕಾರ್ಯಚಟುವಟಿಕೆಗಳನ್ನು ಮಾಡಲು ಒಬ್ಬರಿಂದ ಸಾಧ್ಯವಿಲ್ಲಾ ಗ್ರಾಮದ ಹಿರಿಯ ತಲೆಗಳು ಅದೆಷ್ಟು ಸತ್ಯ, ನಿಷ್ಠೆ, ಪ್ರಾಮಾಣಿಕತೆಯಿಂದ ಹಗಲಿರುಳು ಬಿದರಿ ಕುಟುಂಬದ ವಳಿತಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿ ಬಿದರಿಯವರ ಕುಟುಂಬದ ಜೊತೆ ಕೈ ಜೋಡಿಸಿದ ಹಿರಿಯರನ್ನು ಸ್ಮರಿಸಿಕೊಂಡು ಅವರ ಕುಟುಂಬದ ಸದಸ್ಯರನ್ನು ಕರೆದು ಸಾವಿರಾರು ಸಂತರ ನಡುವೆ ಶ್ರೀ ರಾಮಣ್ಣ ಪಾಯಣ್ಣಿ ಹಾಗೂ ಕಟ್ಟಿಗೆ ಒಡೆಯವುವ ದಲಿತ ಮರಿಯಪ್ಪನನ್ನೂ ಸೇರಿದಂತೆ ಪಾತ್ರೆ ತೊಳೆಯುವ, ಕಸಗೂಡಿಸುವವರ,ಅಡುಗೆ ಮಾಡುವವರು,ಅಡುಗೆ ಬಡಿಸುವವರ,ನೀರು ಮುಂತಾದ ಅನೇಕ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡು ನಿಸ್ವಾರ್ಥ ಸೇವೆಸಲ್ಲಿಸಿದ ಕುಟುಂಬಗಳನ್ನು ಕರೆದು ಅವರ ಕುಟುಂಬ ಹಾಗೂ ಸಂತ ಮಹಾರಾಜರಿಂದ ಉಡುಗೊರೆ ನೀಡಿ ಆಶಿರ್ವದಿಸಿದ್ದು ಹೊನಗನಹಳ್ಳಿ ಗ್ರಾಮದ ಸುವರ್ಣ ಕಾಲದ ಸುಸಮಯವಾಗಿತ್ತು.ಅದರಲ್ಲಿ ಹೂವಿನಿಂದ ನಾರಿಗೂ ಸ್ವರ್ಗವೆಂಬಂತೆ ನನ್ನ ತಾಯಿಯವರ ಪ್ರಾಮಾಣಿಕ ಸೇವೆಯ ಫಲದಿಂದಾಗಿ ನನ್ನೂರಲ್ಲಿ ನನಗೂ ಹಿರಿಯರಿಂದ ಸನ್ಮಾನಿಸಿ ಆಶಿರ್ವದಿಸಿದ್ದೂ ನನ್ನ ಹಿರಿಯರ ಪುಣ್ಯವೆಂದು ಭಾವಿಸುವೆ.

ಈ ಎಲ್ಲಾ ಕಾರ್ಯಕ್ರಮಕ್ಕೂ ಮುಂಚೆ ಗ್ರಾಮದ ಸುಮಂಗಲೆಯರು,ಡೊಳ್ಳು ವಾದ್ಯ,ಕಹಳೆ, ಬಾಜಾಬಜಂತ್ರಿಗಳ ಮೂಲಕ ದಿಂಡಿಯಾತ್ರಿಯನ್ನು ಸ್ವಾಗತಿಸಿಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಬಿದರಿಯವರ ವಾಡೆಗೆ ಕರೆತರಲಾಯಿತು.ಈ ಕಾರ್ಯಕ್ರಮವನ್ನು ಬಸು ಗಾಣಿಗೇರ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರು.ಗ್ರಾಮಪಂಚಾಯತ್ ಸದಸ್ಯರು ಹಾಗೂ ಅಧ್ಯಕ್ಷರೂ ಆಗಿದ್ದ ನಚಿಕೇತ್ ಅಶೋಕ ಬಿದರಿಯವರು ಕಾರ್ಯಕ್ರಮ ಎಲ್ಲಿಯೂ ಲೋಪವಾಗದಂತೆ ನಿಘಾವಹಿಸಿದ್ದರು. ಪ್ರಮುಖವಾಗಿ ಈ ಕಾರ್ಯಕ್ರಮದ ಯಶಸ್ವಿಯಾಗಿ ನಡೆಯಲು ಸಹೋದರಿ ಶಿಕ್ಷಕಿ ಹಾಗೂ ಸಾಹಿತಿಯೂ ಆದಂತಹ ಶ್ರೀಮತಿ: ಇಂದಿರಾ ಶಶಿಧರ್ ಬಿದರಿಯವರ ಜಾಣತನದ ಕಾರ್ಯನಿರ್ವಹಣೆ ಮತ್ತು ಅವರ ಸಲಹೆ ಸೂಚನೆಗಳಿಂದ ಕಾರ್ಯಕ್ರಮವು ಮೆರೆಗು ಪಡೆಯಿತು.ಅಲ್ಲದೆ ಸಹೋದರಿ ಇಂದಿರಾ ಬಿದರಿಯವರು ನುಡಿದ ಪ್ರಾಸ್ತಾವಿಕ ನುಡಿಗಳು ಕುರುಡನಿಗೂ ಕಣ್ಣು ತರಿಸಿದಂತಿತ್ತು. ಅಷ್ಟು ಅಚ್ಚುಕಟ್ಟಾಗಿ ಅವರು ವಯಸ್ಸಲ್ಲಿ ಚಿಕ್ಕವರಿದ್ದರೂ ಸಹ ಗ್ರಾಮದ ಹಿರಿಯ ಇಹಲೋಕ ತ್ಯಜಿಸಿದವರ ಬಗ್ಗೆಯೂ ಮಾಹಿತಿ ಕಲೆಹಾಕಿ ಆ ಮಹಾ ನಿಸ್ವಾರ್ಥ ಸೇವಕರ ಕಾರ್ಯಗಳನ್ನು ಸಭಿಕರ ಮುಂದೆ ಪ್ರಸ್ತಾಪಿಸಿದಾಗ ಎಲೆಮರೆಯ ಕಾಯಿಯಂತೆ ದುಡಿದು ಇಹಲೋಕ ತ್ಯಜಿಸಿದವರ ಆತ್ಮಕ್ಕೆ ನಿಜವಾದ ಶ್ರದ್ಧಾಂಜಲಿಯನ್ನು ಸಹೋದರಿ ಅರ್ಪಿಸಿದಂತಾಯಿತು. ಅದರ ಜೊತೆಗೆ ಈಗಿನ ಯುವ ಪೀಳಿಗೆಗಳಿಗೂ ಹಿರಿಯರ ಬಗ್ಗೆ ಗೌರವ ಮತ್ತು ಅವರಂತೆ ನಾವೂ ನಡೆದುಕೊಳ್ಳಬೇಕೆಂಬ ಸೂಕ್ತ ಸಂದೇಶವನ್ನೂ ಶ್ರೀಮತಿ ಇಂದಿರಾರವರು ಮೂಡಿಸಿದರು.ಈ ಸಂದರ್ಭದಲ್ಲಿ ಸವನಹಳ್ಳಿ ಮತ್ತು ಹೊನಗನಹಳ್ಳಿ ಗ್ರಾಮದಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗದಂತೆ ಈ ಎರಡೂ ಗ್ರಾಮಗಳು ಸುರಕ್ಷಿತವಾಗಿ ಸುಭಿಕ್ಷೆಯಿಂದ ಇರಲೆಂದು ಆಶೀರ್ವದಿಸಿರಿ ಎಂದು ಸಂತರಲ್ಲಿ ಕೈಮುಗಿದು ಬೇಡಿಕೊಂಡಾಗ ಆ ತಾಯಿಯ ಗ್ರಾಮದ ಮೇಲೆನ ಕಾಳಜಿ ಎದ್ದು ತೋರಿತು.

ಈ ಕಾರ್ಯಕ್ರಮದಲ್ಲಿ ಇಡೀ ಹೊನಗನಹಳ್ಳಿ ಮತ್ತು ಸವನಹಳ್ಳಿಯ ಸಮಸ್ತ ಬಾಂಧವರು ಭಾಗವಹಿಸಿದ್ದರಿಂದ ಹೆಸರುಗಳು ಸಾವಿರಾರು ಹೇಳಬೇಕಾಗ್ತದೆ ದಯವಿಟ್ಟು ಅನ್ಯತಾ ಭಾವಿಸಬೇಡಿ ಗ್ರಾಮದ ಪ್ರತಿಯೊಬ್ಬರ ಹೆಸರೂ ಇದರಲ್ಲಿದೆ ಎಂದು ಭಾವಿಸಿರಿ.ಇದೇ ರೀತಿ ಎರಡೂ ಗ್ರಾಮಗಳಲ್ಲಿ ಸಾರ್ವಜನಿಕ ಕಾರ್ಯಚಟುವಟಿಕೆಗಳು ಎಗ್ಗಿಲ್ಲದೇ ನಡೆಯಲಿ ಎಲ್ಲರೂ ನಿಸ್ವಾರ್ಥ ಸೇವೆ ಸಹಕಾರ ನೀಡಿ ಗ್ರಾಮದ ಹೆಸರನ್ನು ಉತ್ತುಂಗಕ್ಕೆ ಕರೆದೊಯ್ಯಿರಿ ಗ್ರಾಮಗಳ ಯಾವುದೇ ಕಾರ್ಯಚಟುವಟಿಕೆಗಳನ್ನು ಮಾಡುವಾಗ ಎರಡನ್ನು ಬಿಡಿ. ಒಂದನೆಯದು ಜಾತಿಧರ್ಮ,ಎರಡನೆಯದು ಪಕ್ಷ. ಇವುಗಳನ್ನು ಪಕ್ಕಕ್ಕೆ ಇಟ್ಟು ಕೆಲಸಮಾಡಿದರೆ ಸರ್ವ ಪುರಸ್ಕಾರಗಳೂ ನಿಮಗೆ ಲಭಿಸುತ್ತವೆ. ಭಾವನೆಗಳು ಶುದ್ಧವಾಗಿರಲಿ.

ಹಾಗೆ ಕಾರ್ಯಕ್ರಮದ ಪೂಜ್ಯ ಸ್ಥಾನವನ್ನು ಅಲಂಕರಿಸಿದ ಮಹಾರಾಜರು ಆಶೀರ್ವಚನ ನೀಡುತ್ತಾ ಎಲ್ಲ ದಾನಗಳಲ್ಲಿ ಅನ್ನ ಧಾನ ಶ್ರೇಷ್ಠ ಅದನ್ನು ಇಲ್ಲಿವರೆಗೆ ನಡೆಸಿಕೊಂಡು ಬಂದ ಎರಡು ಹಳ್ಳಿ ಬಾಂಧವರಿಗೆ ಇನ್ನಷ್ಟು ವಿಠಲನು ಶಕ್ತಿ ನೀಡಲಿ ಯೆಂದು ಹಾರೈಸಿ ಆಶೀರ್ವಾದ ನೀಡಿದರು ಕೊನೆಯದಾಗಿ ಶ್ರೀಮತಿ: ದೀಪಿಕಾ. ನಾಗರಾಜ್ ಬಿದರಿ. ವಂದನಾರ್ಪಣೆ ಮಾಡಿದರು ಕಾರ್ಯಕ್ರಮ ಮನಮುಟ್ಟುವಂತಿತ್ತು.
ಜೈ ಮಂಗಮ್ಮಾ ದೇವಿ.

LEAVE A REPLY

Please enter your comment!
Please enter your name here