ವಿಜಯಪುರ:ವಿಜಯಪುರ ತಾಲೂಕಿನ ಹೊನಗನಹಳ್ಳಿ ಗ್ರಾಮವು ರಾಷ್ಟ್ರೀಯ ಹೆದ್ದಾರಿ218,ಹಾಗೂ ಗದಗ ಸೋಲಾಪುರ ರೈಲುಮಾರ್ಗಕ್ಕೆ ಹೊಂದಿಕೊಂಡಿರುವಗ್ರಾಮ.
ಗ್ರಾಮ ಚಿಕ್ಕದಾದಿದ್ದರೂ ಇತಿಹಾಸ ದೊಡ್ಡದಿದೆ.ಆದರೆ ಸರಿಯಾದ ಮಾಹಿತಿ ನೀಡಬೇಕಾದ ಹಿರಿಯರು ಈಗ ಇಲ್ಲದಿರುವುದರಿಂದ ಮಾಹಿತಿಯ ದಾಖಲೆ ಸಂಗ್ರಹಿಸುವುದು ಕಷ್ಟದ ಕೆಲಸವಾಗಿದೆ.ನಮಗೆ ಕೆಲವು ಹಿರಿಯರು ಹೇಳಿರುವಂತೆ ಈಗ್ರಾಮವು ವಿಜಯಪುರದ ಸುಲ್ತಾನ ಅಲಿ ಆದಿಲ್ ಶಾಹಿಯ ದಾನದರೂಪವಾಗಿ ಬಂದದ್ದು ಎಂದು ಹೇಳಲಾಗುತಿತ್ತು ಅದು ಎಷ್ಟರ ಮಟ್ಟಿಗೆ ನಿಜ ಎಂಬುದು ಸ್ಪಸ್ಟ ಚಿತ್ರಣ ಇಲ್ಲಾ.
ಅಲಿ ಆದಿಲ್ ಶಾಹಿಯ ದಾನದ ರೂಪದಲ್ಲಿ ಬಂದದ್ದು ಎನ್ನುವುದಕ್ಕೆ ನಾವು ತರ್ಕಿಸಿಕೊಳ್ಳಬೇಕಾದ ಅಂಶವೆಂದರೆ ಈ ಗ್ರಾಮದಲ್ಲಿ ಜಹಾಗೀರಕಿ ಇತ್ತು.ಈಗಲೂ ಜಹಗೀರ್ದಾರರು ಈ ಗ್ರಾಮದಲ್ಲಿ ಅತ್ಯಂತ ಸರಳ ಮತ್ತು ಗೌರವಾಣಿತವಾಗಿ ಗ್ರಾಮಸ್ಥರ ಪ್ರೀತಿಗೆ ಪಾತ್ರರಾಗಿದ್ದಾರೆ. ಜಹಾಗೀರ್ದಾರಕಿಯ ಉತ್ತುಂಗದಲ್ಲಿದ್ದಾಗ ಜಹಾಗಿರದಾರರು ತಮಗೆ ಸಹಾಯಕರನ್ನಾಗಿ ವ್ಯವಸಾಕ್ಕಾಗಿ,ಮನೆಕೆಲಸಕ್ಕಾಗಿ,ಗ್ರಾಮದ ಚಾಕರಿಗಾಗಿ ಹೀಗೆ ಎಲ್ಲವಿಧವಾದ ಕೆಲಸಕಾರ್ಯಗಳಿಗೆ ಸೇವೆ ಸಲ್ಲಿಸಲು ಕರೆತಂದು ಅವರಿಗೆ ತಮ್ಮ ಜಮೀನುಗಳನ್ನು ಕೊಟ್ಟು ಗ್ರಾಮದಲ್ಲಿ ಮಡಿವಾಳರು,ಗಾಣಿಗರು,ವಾಲಿಕಾರರು,ಬಜಂತ್ರಿಗಳು,ಮಠಪತಿ,ಹಿರೇಮಠ,ಕುರುಬರು,ನಾಯಕರು,ಬೆಸ್ತರು,ಹರಿಜನಕೇರಿ-ಮಾದರು(ಕ್ಷಮಿಸಬೇಕು ಇದು ಈ ಬರವಣಿಗೆಯಲ್ಲಿ ಬಳಸಬೇಕಾದ ಅನಿವಾರ್ಯತೆಯಪದ ಅಷ್ಟೆ)ಕುಲರ್ಣಿ,ಗೌಡ್ರು,ಬಡಗಿ ಹೀಗೆ ಮುಂತಾದ ಎಲ್ಲ ಕಸಬುದಾರರನ್ನು ತಮ್ಮ ಕೆಲಸಕಾರ್ಯಗಳಿಗೆ ಕರೆತಂದು ಅವರಿಗೆ ಜೀವನುಪಯೋಗಕ್ಕಾಗಿ ಜಮೀನುಗಳನ್ನು ನೀಡಿ ಅವರಿಗೆ ಆಶ್ರಯ ನೀಡಿದ್ದರು ಜನರಾಡುವ ಮಾತುಗಳೆನ್ನಲಾಗುತ್ತಿದೆ.

ಇದರ ಕುರಿತು ಸರಿಯಾದ ಮಾಹಿತಿಯೂ ನಮಗೆ ಲಭ್ಯವಿಲ್ಲಾ.
ಈ ಗ್ರಾಮದಲ್ಲಿ ಜಹಾಗೀರ್ದಾರರ ಕುಂಟುಂಬ ಬಿಟ್ಟರೆ ಬಿದರಿಯವರು ಈ ಗ್ರಾಮದ ಬಹುದೊಡ್ಡ ಜಮೀನುದಾರರ ಕುಟುಂಬಗಳು ಅವುಗಳೆಂದರೆ ಔಂದ ಸಂಸ್ಥಾನದ ಪ್ರಧಾನಮಂತ್ರಿ ಹಾಗೂ ಸಂಸದರಾಗಿದ್ದ ಆದರ್ಶ ರಾಜಕಾರಣಿ ರಾಮಪ್ಪ ಬಿದರಿಯವರು,ಬಾಲಪ್ಪ ಸಹುಕಾರ್ ಬಿದರಿಯವರು,ಅಪ್ಪಾಸಾಹೇಬ್ ಬಿದರಿಯವರು,ವೆಂಕಟಪ್ಪ ಬಿದರಿಯವರು,ಹೀಗೆ ಬಿದರಿಯವರ ಕುಟುಂಬಗಳು ಈ ಗ್ರಾಮದ ಬಹುತೇಕ ಸಮಾರು ಎಲ್ಲಾ ಜಾತಿವರ್ಗಗಳ ಬದುಕಿಗೆ ಆಶ್ರಯ ನೀಡಿದ ಆಶ್ರಯದಾತರೆಂದೇ ಹೇಳಬೇಕಾಗುತ್ತದೆ.ಬಿದರಿಯವರ ಮನೆಗಳ ಮುಂದೆ ಪ್ರತಿನಿತ್ಯ ಆಳು ಕಾಳುಗಳು ತುಂಬಿತುಳುಕುತಿದ್ದವು.ಗ್ರಾಮದ ಬಡವರಿಗೆ ಇವರ ಮನೆಯ ಮಜ್ಜಿಗೆಯೇ ಊಟಕ್ಕೆ ಪದಾರ್ಥ(ಪಲ್ಯ)ಇದ್ದಹಾಗೆಮಜ್ಜಿಗೆಗಾಗಿ ಪಾತ್ರೆಗಳನ್ನ ಹಿಡಿದುಕೊಂಡು ಬಡವರು ಬಿದರಿಯವರ ಮನೆಮುಂದೆ ಸಾಲುಗಟ್ಟಿ ನಿಲ್ಲುತಿದ್ದರು ಅದರಲ್ಲಿ ನಾನೂ ಕೂಡಾಒಬ್ಬನು ಎಂದು ಈ ಸಂದರ್ಭದಲ್ಲಿ ನೆನಪಾಗದೆ ಇರದು.
ಪ್ರತಿನಿತ್ಯ ಗ್ರಾಮದ ಬಹುತೇಕ ತಭತ್ತುಭಾಗ ಜನರ ಉದರ ತುಂಬಿಸಿ ಅವರ ಕಷ್ಟ ಸುಖಗಳಿಗೆ ಬಿದರಿಯವರ ಕುಟುಂಬಗಳೇ ಆಧಾರಸ್ಥಂಭಗಳಾಗಿದ್ದವು.
ಆದರ್ಶ ರಾಜಕಾರಣಿ ಶ್ರೀ ರಾಮಪ್ಪ ಬಿದರಿ(ಈ ಗಿನ ಸಚಿವ ಎಂ.ಬಿ.ಪಾಟೀಲರ ಪತ್ನಿಯ ತಂದೆಯ ಅಪ್ಪ ಅಂದರೆ ಅಜ್ಜ)ಈ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಶಾಸ್ವತ ಕೆಲಸಮಾಡಿಸಿದ್ದಾರೆ.ಅವರ ಕಾಲದಲ್ಲಿ ಈಗ್ರಾಮದಲ್ಲಿ ಪಶುವೈದ್ಯಕೀಯ ಆಸ್ಪತ್ರೆ, ಪಂಚಾಯತ್ ಕಟ್ಟಡ,ಏಳನೆಯ ತರಗತಿಯವರೆಗೆ ಸರ್ಕಾರಿಶಾಲೆ,ರೈತಸಹಕಾರಿಸಂಘ,ರೈಲು ನಿಲುಗಡೆಗಾಗಿ ಹೊನಗನಹಳ್ಳಿ ಹಾಲ್ಟಿಂಗ್ ರೈಲು ನಿಲ್ದಾಣ ವಾಯ್ತು ಸುಮಾರು ಈ ರಸ್ತೆಯಲ್ಲಿ ಓಡಾಡುವ ಹತ್ತು ರೈಲುಗಳಲ್ಲಿ ಎಂಟು ರೈಲುಗಳು ಈ ನಿಲ್ದಾಣದಲ್ಲಿ ನಿಲುಗಡೆ ಹೊಂದಿದ್ದವು ಈಗ ಅದು ಕನಸಿನಂತಾಗಿದೆ.ಶ್ರೀ ರಾಮಪ್ಪಬಿದರಿಯವರ ಆಪ್ತವಲಯದವಾಗಿದ್ದ ಮಾಜಿ ಮುಖ್ಯಮಂತ್ರಿಗಳಾದ ದಿ.ಬಿಡಿ.ಜತ್ತಿಯವರು,ಎಸ್.ನಿಜಲಿಂಗಪ್ಪನವರು,ಅಂದಿನ ಭಾರತದ ಪ್ರಧಾನಮಂತ್ರಿ ಜವಾಹರಲಾಲ್ ನೇಹರುಜಿ ಅವರಜೊತೆಯಲ್ಲಿ ನೆಹರುರವರ ಪುತ್ರಿ ಪ್ರಿಯದರ್ಶಿನಿ (ಇಂದಿರಾಗಾಂಧಿ)ಮುಂತಾದ ಘಟಾನುಘಟಿ ನಾಯಕರುಗಳು ಈ ಗ್ರಾಕ್ಕೆ ಬಂದಿದ್ದರಂತೆ.ಗ್ರಾಮದಲ್ಲಿ ಹಬ್ಬದ ವಾತಾವರಣ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದ್ದವಂತೆ ನನ್ನ ಸಹೋದರ ಮಾವನ ಪತ್ನಿ ಶ್ರೀಮತಿ ಭೀಮವ್ವ ಒಡೆಯರ್ ಚಿಕ್ಕವರಿದ್ದರಂತೆ ಆ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಿದ್ದರಂತೆ ನಮ್ಮ ತಾಯಿಯವರು ಹೇಳುತಿದ್ದರು.ಗ್ರಾಮದ ಮಧ್ಯಭಾಗದಲ್ಲಿ ಜಹಾಗೀರ್ದಾರರ ಚಾವಡಿಯ ಮುಂದೆ ಒಂದು ಭವ್ಯ ಮಂಟಪತರದ ಕಟ್ಟೆಯಲ್ಲಿ ಈ ಕಾರ್ಯಕ್ರಮ ಜರುಗಿತಂತೆ.ಇವತ್ತ ಅಂಥ ಐತಿಹಾಸಿಕಸ್ಥಳ ಸ್ಮಾರಕ ಮಾಡಲಾಗದೆ ಉಳ್ಳವರ ಅತಿಕ್ರಮಕ್ಕೆ ಒಳಗಾಗಿ ನಾಮಾವಶೇಷವಾಗಿಹೋಗಿದೆ.
ಅದೇರೀತಿ ಶ್ರೀ ಬಾಲಪ್ಪ ಬಿದರಿಯವರು ಗಾಂಭೀರ್ಯ,ನೇರ,ನಿಷ್ಟೂರವಾದಿಯಾಗಿದ್ದರು.ಗ್ರಾಮದ ಸಂಪೂರ್ಣ ಜನಸಮುದಾಯಗಳನ್ನು ಸಮಾನತೆಯಿಂದ ಕಂಡು ಯಾವುದೇ ರಾಜಕೀಯಮಾಡದೆ ರೈತಾಪಿ ವರ್ಗದ ಜೊತೆಜೊತೆಯಾಗಿ ವ್ಯವಸಾಯಮಾಡಿಸುತ್ತ ನೂರಾರು ಎಕರೆ ಜಮೀನುಗಳ ಉಸ್ತುವಾರಿ ಮಾಡುತ್ತ ಜನಪರವಾಗಿದ್ದರು.ಏಳನೇತರಗತಿಯ ಬೋರ್ಡ್ ಪರೀಕ್ಷೆಯ ಕೇಂದ್ರವಾಗಿದ್ದ ಹೊನಗನಹಳ್ಳಿಯಲ್ಲಿ ಸುಮಾರು ನಾಲ್ಕಾರು ಗ್ರಾಮಗಳ ಶಾಲೆಯ ಮಕ್ಕಳು ಪರೀಕ್ಷೆ ಬರೆಯಲು ಈ ಗ್ರಾಮಕ್ಕೆ ಬರುತಿದ್ದರು.ಸುಮಾರು ನೂರಾರು ವಿದ್ಯಾರ್ಥಿಗಳಿಗೆ, ಪೋಷಕರಿಗೆ,ಶಿಕ್ಷಕರುಗಳಿಗೆ ಪರಿಕ್ಷೆ ಸುರುವಾಗಿ ಮುಗಿಯುವವರೆಗೆ ಎಲ್ಲರಿಗೂ ಸಂಪೂರ್ಣ ಊಟ,ವಸತಿ,ತಿಂಡಿ ಎಲ್ಲಾ ವ್ಯವಸ್ಥೆಯನ್ನು ಶ್ರೀ ಬಾಲಪ್ಪ ಸಹುಕಾರ್ ಬಿದರಿಯವರೇ ಏರ್ಪಡಿಸುತಿದ್ದರು.ಗ್ರಾಮಕ್ಕೆ ಪರಸ್ಥಳದ ಯಾವುದೇ ಕೆಲಸಕ್ಕೆ ಬಂದವರಿಗೆ ಅತಿಥಿಸತ್ಕಾರ ಮಾಡುವ ದಾಸೋಹದಂತಿತ್ತು ಆ ಮನೆ.ಹಾಗೆನೆ ಸಿಟ್ಟು ಇದ್ದಲ್ಲಿ ರೊಟ್ಟಿ ಇರುತ್ತೆ ಎನ್ನುವ ಹಾಗೆ ತಪ್ಪು ಕಂಡುಬಂದರೆ ಹಿಂಜರಿಯದೇ ತಕ್ಕು ಬುದ್ದಿಕಲಿಸಲೂ ಹಿಂಜರಿಯುತ್ತಿರಲಿಲ್ಲಾ.
ಅದೆ ರೀತಿಯಲ್ಲಿ ಫಂಡರಿಪುರದ ದಿಂಡಿಯಾತ್ರಿಗಳು ಆಗಿನಬಳ್ಳಾರಿಜಿಲ್ಲೆ ಈಗ ವಿಜಯನಗರ ಜಿಲ್ಲೆಯ ಹರಪ್ಪನ ಹಳ್ಳಿಯ ಪಾಂಡುರಂಗ ಭಕ್ತರು ಪಾದಯಾತ್ರೆ ಮುಖಾಂತರ ಫಂಡರಿಪುರಕ್ಕೆ ಹೋಗುವಾಗ ಹೊನಗನಹಳ್ಳಿ ಗ್ರಾಮಕ್ಕೆ ಪಾದಯಾತ್ರೆ(ದಿಂಡಿ)ಬರುವಷ್ಟರಲ್ಲಿ ಸೂರ್ಯಾಸ್ತವಾಗುತಿತ್ತು.ಆ ದಿಂಡಿಯಾತ್ರಿಗಳು ಈ ಗ್ರಾಮದಲ್ಲಿ ರಾತ್ರಿ ಇದ್ದು ಬೆಳಿಗ್ಗೆ ತಮ್ಮ ದಿಂಡಿಯಾತ್ರಿಯನ್ನು ಫಂಡರಿಪುರದತ್ತು ಸಾಗುತಿತ್ತು.ಇದನ್ನು ಗಮನಿಸಿದ ಬಿದರಿ ಬಂಧುಗಳು ಆ ದಿಂಡಿ ಯಾತ್ರಾರ್ಥಿಗಳಿಗೆ ಊಟ ವಸತಿ ವ್ಯವಸ್ಥೆಯನ್ನು ಕಲ್ಪಿಸುತಿದ್ದರು.ಮೊದಮೊದಲು ಹತ್ತಾರು ಜನರ ಸಂಖ್ಯೆಯಲ್ಲಿ ಬರುತಿದ್ದ ದಿಂಡಿಯಾತ್ರೆಯ ಸಂಖ್ಯೆಯು ಐವತ್ತು, ನೂರು,ಇನ್ನೂರು,ಮುನ್ನೂರು ಐದನೂರು ರಂತೆ ಹೆಚ್ಚುತ್ತಲೇ ಸಾವಿರದಾಟುತ್ತಾ ಭಕ್ತರ ಸಂಖ್ಯೆಯು ಹೆಚ್ಚುತ್ತಲೇಬಂತು.ಆದರೆ ಬಿದರಿಯವರ ಕುಟುಂಬಸ್ಥರು ಗ್ರಾಮದ ರೈತರ,ಯುವಕರ,ಮಹಿಳೆಯರ ಸೇವಾಗನುಗುಣವಾಗಿ ಸಹಕಾರಪಡೆದು ಸಾವಿರಾರೂ ಪಂಡುರಂಗನ ಭಕ್ತರ ಊಟ ವಸತಿಯನ್ನು ಶ್ರೀ ಬಾಲಪ್ಪ ಸಾಹುಕಾರ್ ಬಿದರಿಯವರ ಮಕ್ಕಾದ ಶ್ರೀ ಗೋವಿಂದಪ್ಪ ಬಿದರಿ,ವೆಂಕಣ್ಣ ಬಿದರಿ,ಮತ್ತು ಇವರ ಮಕ್ಕಳಾದ ಸಚಿನ್,ಸೇರಿದಂತೆ ಕುಟುಂಬದ ಎಲ್ಲಾ ಮಹಿಳೆಯರು ಯುವಕರು,ಹಿರಿಯರು ಸೇರಿಕೊಂಡು ಹಿರಿಯರು ನಡೆಸಿಕೊಂಡು ಬಂದಿರುವ ದಿಂಡಿಯಾತ್ರಾರ್ಥಿಗಳಿಗೆ ಅತಿಥಿ ಉಪಚಾರ ಮುಂದುವರೆಸಿಕೊಂಡು ಬಂದಿದ್ದಾರೆ.ಈ ದಿಂಡಿಯಾತ್ರೆಯ ಸಾವಿರಾರು ಭಕ್ತರಿಗೆ ಬಿದರಿಯವರ ಕುಟುಂಬ ಸಲ್ಲಿಸುತ್ತಿರುವ ಅತಥಿ ಸತ್ಕಾರ ಕಾರ್ಯದಲ್ಲಿ ಸಹಾಯಕರಾಗಿ ಗ್ರಾಮದ ಬಹುತೇಕ ಎಲ್ಲ ಜಾತಿ,ಧರ್ಮಗಳ ಜನರ ಸಹಕಾರವನ್ನು ಬಿದರಿ ಕುಟುಂಭದವರು ಸ್ಮರಿಸುತ್ತಿರುವುದು ಅವರ ದೊಡ್ಡ ಮನೆತನದ ದೊಡ್ಡ ಗುಣವೆಂದೇ ಹೇಳಬೇಕಾಗುತ್ತದೆ.
ಈ ದಿಂಡಿಯಾತ್ರೆಯ ಐವತ್ತನೇ ವರ್ಷಾಚರಣೆ ಸಂದರ್ಭದಲ್ಲಿ ಬಿದರಿಕುಟುಂಬದವರು ಗ್ರಾಸ್ತರಿಗೂ ಸೇರಿದಂತೆ ಯಾತ್ರಾರ್ಥಿಗಳಿಗೆ ವಿಶೇಷವಾಗಿ ಗ್ರಾಮದೊಳಗೆ ಸ್ವಾಗತಿಸಿಕೊಂಡು ಸೇವೆ ಸಲ್ಲಿಸಿದ ಎಲ್ಲಾ ಹಿರಿಯ ಜೀವಿಗಳ ಮನಸ್ಸುಗಳನ್ನು ಸ್ಮರಣೆ ಮಾಡಿಕೊಳ್ಳುವುದರ ಮುಖಾಂತರ ಮತ್ತೆ ತಮ್ಮ ದೊಡ್ಡ ತನವನ್ನು ಮೆರೆದಿದ್ದಾರೆ ಬಿದರಿ ಕುಟುಂಬಕ್ಕೆ ಹೃದಯಪೂರ್ವಕವಾಗಿ ಈ ಸಂದರ್ಭದಲ್ಲಿ ಗ್ರಾಮಸ್ತರ ಪರವಾಗಿ ಅಭಿನಂದನೆ ಸಲ್ಲಿಸುತಿದ್ದೇನೆ.

LEAVE A REPLY

Please enter your comment!
Please enter your name here