ವಿಜಯಪುರ: ನಗರದ ಜಲ ನಗರದಲ್ಲಿರುವ ಶ್ರೀ ಬಿ.ಎಂ ಪಾಟೀಲ್ ಪಬ್ಲಿಕ್ ಶಾಲೆಯಲ್ಲಿ ದಿನಾಂಕ 01-11- 2024 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಪ್ರಾಚಾರ್ಯರಾದ ಶ್ರೀ ದರ್ಶನ್ ಹುನಗುಂದ. ಸಂಯೋಜಕರಾದ ಶ್ರೀಮತಿ.ಫರಹಾದೇಬಾ. ಜಾಹಾಗೀರದಾರ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜಿಸಲ್ಲಿಸಿ ನಾಡಗೀತೆಯನ್ನು ಹಾಡಿ ಕಾರ್ಯಕ್ರಮವನ್ನು ಸುಂದರಗೊಳಿಸಲಾಯಿತು.
ಇದರ ಜೊತೆಗೆ ಈ ಶುಭ ದಿನದಂದು ಜನಿಸಿದಂತಹ ನಮ್ಮ ಸಂಸ್ಥೆಯ ಅತಿ ಮುಖ್ಯ ರೂವಾರಿಗಳಾದ ಶ್ರೀಯುತ ಶ್ರೀ ಬಿ.ಎಮ್. ಪಾಟೀಲರ ಹುಟ್ಟಿದ ಪುಣ್ಯ ದಿನ! ಅವರ ಸ್ಮರಣೆಯನ್ನು ಮಾಡಿ, ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ, ಅವರನ್ನು ಸ್ಮರಿಸಿಕೊಳ್ಳುತ್ತಾ ಇಂತಹ ಹಿರಿಯ ಪ್ರತಿಭೆಗಳು ನಮ್ಮ ವಿಜಯಪುರಕ್ಕೆ ಸಿಕ್ಕಿದ್ದು ನಮ್ಮೆಲ್ಲರ ಪುಣ್ಯ ಅವರು ಮಾಡಿದಂತಹ ಕೆಲಸ ಅಪಾರವಾದದ್ದು ಶಿಕ್ಷಣ ಕ್ಷೇತ್ರ, ರಾಜಕೀಯ ಕ್ಷೇತ್ರ, ವೈದ್ಯಕೀಯ ಕ್ಷೇತ್ರ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕೆಲಸಗಳನ್ನು ಮಾಡಿ ತಮ್ಮ ಸೇವೆಯನ್ನು ಸಲ್ಲಿಸಿ ಸಾಕಷ್ಟು ಪ್ರತಿಭೆಗಳಿಗೆ ಅವಕಾಶಗಳನ್ನು ನೀಡುತ್ತಾ ಬಿ.ಎಲ್.ಡಿ.ಈ. ಸಂಸ್ಥೆಯನ್ನು ಆಕಾಶದ ಎತ್ತರಕ್ಕೆ ತೆಗೆದುಕೊಂಡು ಹೋಗುವಲ್ಲಿ ಬಹಳ ಶ್ರಮಪಟ್ಟವರು. ಅವರು ಕಟ್ಟಿದ ಈ ಶಿಕ್ಷಣವೆಂಬ ಹೆಮ್ಮರದ ನೆರಳಿನಲ್ಲಿ ಕೆಲಸ ಮಾಡುವ ನಾವುಗಳೆಲ್ಲ ಪುಣ್ಯವಂತರು ಎಂದು ಅವರನ್ನು ನೆನೆಸಿಕೊಳ್ಳುತ್ತಾ ಪ್ರಾಚಾರರು ಮಾತನಾಡಿದರು. ಜೊತೆಗೆ ಕನ್ನಡ ನಾಡಿನ ಬಗ್ಗೆ ಹೆಮ್ಮ ಇರಲೆಂದು ಕರೆ ನೀಡಿದರು. ವಂದನೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.