ಬೆಂಗಳೂರು:ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಕೆಲ ಅಧಿಕಾರಿಗಳು ಮತ್ತು ಮಂತ್ರಿಗಳು ಸರ್ಕಾರ ತಗೆದುಕೊಂಡ ನಿರ್ಣಯಗಳ ವಿರುದ್ಧವಾಗಿ ಮತ್ತು ತಮ್ಮ ಮೂಗಿನ ನೇರಕ್ಕೆ ಕೆಲಸಮಾಡುವರೇನೋ ಎಂಬ ಭಾವಣೆಗಳು ಸಾರ್ವಜನಿಕರ ಮನದಲ್ಲಿ ಹಲವು ಬಾರಿ ಬಂದು ಹೋಗಿದ್ದಂತೂ ನಿಜ.
ಅದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಲೋಕೋಪಯೋಗಿ ಇಲಾಖೆ ಮತ್ತು ಬೆಂಗಳೂರು ನೀರುಸರಬರಾಜು ಹಾಗೂ ಒಳಚರಂಡಿ ಮಂಡಳಿಯು ಕರೆದಿರುವ ಕಾಮಗಾರಿಗಳ ಟೆಂಡರ್ ನೋಟಿಫಿಕೀಷನ್ ನೋಡಿದಾಗಲಂತೂ ನೂರಕ್ಕೆ ನೂರರಷ್ಟು ನಿಜ ಎನಿಸಿರುವುದು ಸತ್ಯ.
ಕರ್ನಾಟಕ ರಾಜ್ಯ ಸರ್ಕಾರ ತಗೆದು ನಿರ್ಣಯದಂತೆ ಗೆಜೆಟ್ ನಲ್ಲಿ ಪ್ರಕಟಿಸಿರುವಂತೆ ಒಂದು ಕೋಟಿ ರೂಪಾಯಿಗಳ ಒಳಗಿನ ಗುತ್ತಿಗೆ ಕಾಮಗಾರಿಗಳಲ್ಲಿ ಎಸ್. ಸಿ,ಎಸ್.ಟಿ,ಹಾಗೂ 2A,ವರ್ಗಳಿಗೆ ಮೀಸಲಾತಿ ಪ್ರಕಟಿಸಿದರೂ ಸಹ ಕೆಲ ಅಧಿಕಾರಿಗಳು ಈ ವರ್ಗಗಳಿಗೆ ಗುತ್ತಿಗೆ ಕಾಮಗಾರಿಗಳು ಸಿಗದಂತೆ ಒಳಸಂಚು ರೂಪಿಸಿಕೊಂಡು ಒಂದು ಕೋಟಿ ರೂಗಳ ಒಳಗಿನ ಕಾಮಗಾರಿಗಳನ್ನು ಇನ್ನಷ್ಟು ಕಾಮಗಾರಿಗಳನ್ನು ಅದರೊಂದಿಗೆ ಕಂಬಾಂಯ್ಡ್ ಮಾಡಿ ಕೋಟಿಗೂ ಅಧಿಕ ಮೊತ್ತವೆಂಬಂತೆ ಟೆಂಡರ್ ಸಿದ್ದಪಡಿಸಿ ಎಸ್.ಸಿ.ಎಸ್.ಟಿ ಹಾಗೂ 2Aವರ್ಗ ಗಳ ಗುತ್ತಿಗೆದಾರರಿಗೆ ಸಿಗಬೇಕಾದ ಟೆಂಡರ್ ಕಾಮಗಾರಿಗಳಲ್ಲಿ ವಂಚಿಸುತ್ತಾನೇ ಬಂದಿದ್ದರು.ಇದೆಲ್ಲಾ ಗೊತ್ತಿದ್ದೂ ಅಥವಾ ಗೊತ್ತಾಗದೆಯೋ ಸಂಬಂದಿಸಿದ ಮಂತ್ರಿಗಳೂ ಕೂಡಾ ಮೌನವಹಿಸಿರುತಿದ್ದರು.
ಆದರೆ ಇಂಥಹ ವಿಚಾರಗಳ ಕುರಿತು ಕೆಲವು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆದು ಹಲವು ವೇದಿಕೆಗಳಲ್ಲಿಯೂ ಕೂಡಾ ಈ ಅಧಿಕಾರಿಗಳ ಮತ್ತು ಮಂತ್ರಿಗಳ ಜಾಣ ಕುರುಡುತನದಬಗ್ಗೆ ಅಕ್ರೋಷಗಳು ಬಹಿರಂಗವಾಗಿ ಯೇ ವ್ಯಕ್ತವಾಗಿವೆ.
ಆದರೆ ಇವು ಯಾವವೂ ತಮಗೆ ಸಂದವಿಲ್ಲವೇನೋ ಎಂಬ ಅತೀ ಜಾಣ್ಮೆಯ ನಡಿಗೆಯಿಂದ ಈ ಏನು ಎಸ್.ಸಿ.ಎಸ್.ಟಿ ಹಾಗೂ 2A ವರ್ಗಗಳ ವಿರೋಧಿನೀತಿ ಅನುಸರಿಸುತ್ತಿರುವ ಕೆಲ ಅಧಿಕಾರಿಗಳು ಜನಪ್ರತಿನಿಧಿಗಳು ಮಂತ್ರಿಗಳು ತಮ್ಮ ವಿರೋಧಿನೀತಿಯನ್ನು ಬಹಿರಂಗಪಡಿಸದೆ ಒಳಮನಸ್ಸಿನಿಂದ ವ್ಯವಸ್ಥಿತವಾಗಿ ಈ ವರ್ಗಗಳಿ ಸಿಗಬೇಕಾದ ಮೀಸಲಾತಿಯನ್ನು ತಪ್ಪಿಸುತ್ತಲೇ ಬಂದಿದ್ದಾರೆ.
ಈಗ ಅದರ ಮುಂದುವರಿದ ಭಾಗವಾಗಿ ಕಣ್ಣುವರೆಸುವ ತಂತ್ರವೆಂಬಂತೆ ಲೋಕೋಪಯೋಗಿ ಇಲಾಖೆ ಮತ್ತು ಬೆಂಗಳೂರು ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಗಳ ಕಾಮಗಾರಿಯ ಟೆಂಡರ್ ಗಳನ್ನು ಕರೆದಿವೆ.ಅವು ಕೇವಲ ಎಸ್.ಸಿ.ಎಸ್.ಟಿ ಗುತ್ತಿಗೆದಾರರ ಕಣ್ಣುವರೆಸುವ ತಂತ್ರವೆಂಬಂತೆ ಭಾಸವಾಗುತ್ತಿದೆ.ನೈಜತೆಯಿಂದ ಸರ್ಕಾರದ ನಿರ್ಣಯದ ಗೆಜೆಟ್ ನೋಟಿಫಿಕೇಷನ್ ನಂತೆ ಟಡರ್ ಕರೆಯಬೇಕಾಗಿದ್ದರೆ ಇದರಲ್ಲಿಯೂ ಕೂಡಾ ಎಸ್.ಸಿ.ಎಸ್.ಟಿ ಹಾಗೂ 2A,ಗಳ ಗುತ್ತಿಗೆದಾರರನ್ನು ಒಳಪಡಿಸಬೇಕಿತ್ತು.ಅದರಲ್ಲಿ ಮಲತಾಯಿಧೋರಣೆ ತೋರಿ ಕಣ್ಣಿಗೆ ಸುಣ್ಣ ಎರಚುವ ತಂತ್ರ ಹೂಡಿದೆ.ಇದನ್ನು ಗಮನಿಸಿಯೋ ಅಥವಾ ಗಮನಿಸದೆಯೋ ಸುಮ್ಮನಿರುವ ಮಂತ್ರಿಗಳು ಅಧಿಕಾರದಲ್ಲಿರಲು ನಾಲಾಯಕರೆಂದೇ ಹೇಳಬೇಕಾಗ್ತದೆ.ಸರ್ಕಾರದ ಘೋಷಣೆ ಕೇವಲ ಸರ್ವರಿಗೂಸಮಾನ ಎನ್ನುವುದು ಭೃಷ್ಟ ಕುತಂತ್ರ ರಾಜಕಾರಣಿ ಮತ್ತು ಅವರ ಬಾಲಬಡಕ ಅಧಿಕಾರಿಗಳಿಗೆ ಮಾತ್ರ ಅನಿಸುತ್ತದೆ.ಆದ್ದರಿಂದ ಸರ್ಕಾರ ತನ್ನ ನಿಲುವಿಗೆ ಬದ್ಧವಾಗಿದ್ದರೆ 2A,ಗುತ್ತಿಗೆದಾರರಿಗೂ ಅವಕಾಶಮಾಡಿಕೊಡಿ ಇಲ್ಲದಿದ್ದರೆ ತಕ್ಷಣವೇ ಈ ಟೆಂಡರ್ಗಳನ್ನು ರದ್ದು ಪಡಿಸಿ ಸಮಾನ ಮೀಸಲಾತಿಗನುಗುಣವಾಗಿ ಮರು ಟೆಂಡರ್ ಕರೆಯಬೇಕೆಂದು ಈ ಮೂಲಕ ಹೇಳಬಯಸಲಾಗಿದೆ. ಸಂಪಾದಕ

LEAVE A REPLY

Please enter your comment!
Please enter your name here