ವಿಜಯಪುರ:ವಿಜಯಪುರ ಬಿ.ಎಲ್.ಡಿ.ಇ. ಸಂಸ್ಥೆಯ ಸರ್ವ ಸದಸ್ಯರ ವಿಶೇಷ ಸಭೆಯ ಅಧ್ಯಕ್ಷತೆಯನ್ನು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಎಂ.ಬಿ.ಪಾಟೀಲ್ ರು ವಹಿಸಿಕೊಂಡು ಮಾತನಾಡಿದರು. ಇದುವರೆಗೆ ನಮ್ಮ ಸಂಸ್ಥೆಯನ್ನು ‘ಬಿಜಾಪುರ ಲಿಂಗಾಯತ ಡಿಸ್ಟ್ರಿಕ್ಟ್ ಎಜುಕೇಶನ್ ಅಸೋಸಿಯೇಷನ್ (BLDE) ಎಂದು ಕರೆಯಲಾಗುತ್ತಿತ್ತು. ಆದರೆ ಇನ್ನು ಮುಂದಿನ ದಿನಗಳಲ್ಲಿ ಭಾರತೀಯ ಲಿಂಗಾಯತ ಡೆವಲಪ್ಮೆಂಟ್ ಎಜುಕೇಷನಲ್ ಅಸೋಸಿಯೇಷನ್ ( BLDEA) ಎಂದು ಬದಲಾಯಿಸುವಂತೆ ನಿರ್ಣಯ ಕೈಗೊಳ್ಳಲಾಯಿತು ಎಂದು ಹೇಳಿದ್ದಾರೆ. ಬಿ.ಎಲ್.ಡಿ.ಇ.ಎ. ಈ ಹೆಸರಿನ ಬದಲಾವಣೆಯೊಂದಿಗೆ ನಮ್ಮ ಕಾರ್ಯವ್ಯಾಪ್ತಿ ಅಖಂಡ ವಿಜಯಪುರವನ್ನು ದಾಟಿ ದೇಶದೆಲ್ಲೆಡೆ ಪಸರಿಸಲು ಅನುಕೂಲವಾಗಲಿದೆ ಎಂದು ಸಭೆಯಲ್ಲಿ ಪ್ರಕಟಿಸಿದರು.

LEAVE A REPLY

Please enter your comment!
Please enter your name here