ಬೆಂಗಳೂರು:ಬಿಜೆಪಿ ನಾಯಕರು ಹಾಗೂ ವಿಧಾನ ಪರಿಷತ್ ‌ಮಾಜಿ ಸದಸ್ಯರಾದ ಶ್ರೀ ಸಿ.ಪಿ.ಯೋಗೇಶ್ವರ್ ರವರು ಇಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು. ಕಾಂಗ್ರೆಸ್‌ ಪಕ್ಷದಿಂದಲೇ ರಾಜಕೀಯ ಆರಂಭಿಸಿದ ಸಿಪಿ ಯೋಗೇಶ್ವರ್ ಅವರು ಮರಳಿ ಗೂಡಿಗೆ ಆಗಮಿಸಿದ್ದು ಪಕ್ಷದ  ಬಲ ಹೆಚ್ಚಿಸಿದ್ದು, ಅವರಿಗೆ ಶುಭವಾಗಲಿ ಎಂದು ಉಪ ಮುಖ್ಯಮಂತ್ರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹರಸಿದರು.

ಇದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಮಾಡಿ ಶುಭಾಶಯ ಪಡೆದು ಕೆಪಿಸಿಸಿ ಕಚೇರಿಗೆ ಮಾಜಿ ಸಂಸದ ಡಿಕೆ.ಸುರೇಶ್ ರವರದಿಗೆ ಆಗಮಿಸಿದರು.

ಒಗ್ಗಟ್ಟಿನಲ್ಲಿ ಬಲವಿದೆ ನಾವೆಲ್ಲರೂ ಸಮಗ್ರ ಅಭಿವೃದ್ಧಿಮಾಡುವ ಮೂಲಕ ಚನ್ನಪಟ್ಟಣವನ್ನು ‘ಚಿನ್ನದ ಪಟ್ಟಣ’ವನ್ನಾಗಿಸಬೇಕೆಂಬ ಉಪ ಮುಖ್ಯಮಂತ್ರಿಗಳ ಆಶಯವನ್ನು ಈಡೇರಿಸಲು ನಾವೆಲ್ಲರೂ ಕೈಜೋಡಿಸೋಣ ಎಂದು ಮಾಜಿಸಚಿವ ಬಿಜೆಪಿತೊರೆದು ಕಾಂಗ್ರೆಸ್ ಸೇರಿದ ಸಿ.ಪಿ.ಯೋಗೇಶ್ವರ್ ಈ ಸಂದರ್ಭದಲ್ಲಿ ಹೇಳಿದರು.

LEAVE A REPLY

Please enter your comment!
Please enter your name here