ಒಂದು ಕಡೆ ವಂದೇ ಭಾರತ್ 40 % ಸೀಟ್ ಮಾತ್ರ ತುಂಬಿ ಓಡ್ತಾ ಇದ್ರೆ ಮತ್ತೊಂದೆಡೆ ಸಾಮಾನ್ಯ ರೈಲುಗಳು ತುಂಬಿ ತುಳುಕುತ್ತಾ ಇವೆ! ರಿಸಿರ್ವೇಶನ್ ವೇಟಿಂಗ್ ಲಿಸ್ಟ ನಲ್ಲಿ ಇದೆ!
ವಂದೇ ಭಾರತ್ ಭಾರತದ ಸಾಮಾನ್ಯ ಜನತೆಗೆ ಕೈಗೆಟಕುವ ದರದಲ್ಲಿ ಲಭ್ಯವಿಲ್ಲ. ನಮ್ಮಂತ ಮಧ್ಯಮ ವರ್ಗದವರು ಒಂದು ಸಲ ಹೇಗಿದೆ ವಂದೇ ಭಾರತ್ ರೈಲು ಅಂತ ಅನುಭವ ಪಡೆಯಲು ಓಡಾಡಬಹುದು. ಇದು ಮೇಲ್ಮಧ್ಯಮ ವರ್ಗ ಮತ್ತು ಶ್ರಿಮಂತರಿಗೆ ಮಾತ್ರ ಹೊಂದಿಕೆಯಾಗುತ್ತದೆ. ಭಾರತದ ಜನಸಂಖ್ಯೆಗೆ ಲಭ್ಯವಿರುವ ಸ್ಲೀಪರ್ ಕ್ಲಾಸ್ ರೈಲುಗಳು ತುಂಬಾ ಕಡಿಮೆ ಇದ್ದುದರಿಂದ, ಯಾವಾಗಲೂ ಸ್ಲೀಪರ್ ಟ್ರೇನ್ ಹೆಚ್ಚು ಭರ್ತಿಯಾಗಿರುತ್ತದೆ ಮತ್ತು ಬುಕಿಂಗ್ ವೆಯಿಟಿಂಗ್ ಲಿಸ್ಟ್ ಯಾವಾಗಲೂ ಹೆಚ್ಚಿರುತ್ತದೆ. ಹೆಚ್ಚಿನ ಟಿಕೆಟ್ ದರದೊಂದಿಗೆ ಈ ಹೈ ಕ್ಲಾಸ್ ರೈಲುಗಳನ್ನು(ವಂದೇ ಭಾರತ್) ಪರಿಚಯಿಸುವುದರಲ್ಲಿ ತಪ್ಪೇನಿಲ್ಲ., ಆದರೆ ಅದೇ ಸಮಯದಲ್ಲಿ ಸಾಮಾನ್ಯ ವರ್ಗಕ್ಕೆ ಅನುಕೂಲವಾಗಲು ಓಡುವ ಸ್ಲೀಪರ್ ಕ್ಲಾಸ್ ರೈಲುಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ.(ಕಲ್ಯಾಣ್ ಕುಮಾರ್ ನವಲೆ)