ವಿಜಯಪುರ:ದಿನಾಂಕ 21- 9- 2024ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯ ವಿವೇಕ ನಗರ ವಿಜಯಪುರದಲ್ಲಿ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ ವಿಜಯಪುರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಹೆಸರಾಯಿತು ಕರ್ನಾಟಕ -ಉಸಿರಾಯಿತು ಕನ್ನಡ ಕರ್ನಾಟಕ ಸಂಭ್ರಮ 50ರ ನಿಮಿತ್ಯ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮ ನಡೆಯಿತು .ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಚರಿತ್ರೆ ಕುರಿತು ದತ್ತಿ ದಾನಿಗಳಾದ ಶ್ರೀ ಸುರೇಶ ಸಿ ದೇಸಾಯಿ ಸಂಸ್ಥೆಯ ಅಧ್ಯಕ್ಷರು ಕಾರ್ಯಕ್ರಮವನ್ನು ಉದ್ಘಾಟಿಸಿದರು .ಶ್ರೀ ಆಸಿಂಪೀರ್ ವಾಲಿಕಾರ್ ಕನ್ನಡ ಸಾಹಿತ್ಯ ಪರಿಷತ್ ವಿಜಯಪುರ ಜಿಲ್ಲಾ ಅಧ್ಯಕ್ಷರು ಇವರು ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಾನ್ಯ ಶ್ರೀ ಸುರೇಶ್ ಸಿ ದೇಸಾಯಿ ಇವರ 70ನೇ ಜನ್ಮದಿನವನ್ನು ಆಚರಿಸಿ ಸನ್ಮಾನವನ್ನು ಮಾಡಿದರು.
.ದಾಸ ಸಾಹಿತ್ಯ ಚರಿತ್ರೆ ಕುರಿತು ದತ್ತಿ ದಾನಿಗಳಾದ ಶ್ರೀ ಶಿವಕುಮಾರ್ ಕೆ ಬಾಗಿ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ್ದರು . ಶ್ರೀಮತಿ ಇಂದಿರಾ ಬಿದರಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಚರಿತ್ರೆ ಕುರಿತು ಉಪನ್ಯಾಸ ನೀಡಿದರು. ಡಾ. ಆನಂದ ಕುಲಕರ್ಣಿ ದಾಸ ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು. ಬಸವರಾಜ್ ಕೋನರೆಡ್ಡಿ, ಮಾದೇವಿ ತೆಲಗಿ, ಚಂದ್ರಶೇಖರ್ ಮಲ್ಗಾನ ರಾಜೇಶ್ ಸಾಬ್ ಶಿವನಗುತ್ತಿ ಹಾಗೂ ಕನ್ನಡ ಅಭಿಮಾನಿಗಳು ಶಿಕ್ಷಕ ಸಿಬ್ಬಂದಿ ವರ್ಗ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿರಿದ್ದರು.