ವಿಜಯಪುರ:ಭಾರತೀಯ ಜನತಾಪಕ್ಷದ ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲರು ನೈಜ ಹಿಂದೂವಾದಿನೂ ಅಲ್ಲಾ ದೇಶಭಕ್ತನೂ ಅಲ್ಲಾ.ಹಿಂದುತ್ವ ಮತ್ತು ದೇಶಪ್ರೇಮದ ಡೋಂಗಿತ್ವವನ್ನು ತನ್ನ ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಪ್ರರ್ಧನಮಾಡಿ ನೈಜ ದೇಶಪ್ರೇಮಿಗಳಿಗೆ ಮತ್ತು ಹಿಂದುಗಳಿಗೆ ದ್ರೋಹಬಗೆದು ಅಧಿಕಾರದ ಸ್ಥಾನ ಭದ್ರಗೊಳಿಸಿಕೊಳ್ಳಲು ನಟಿಸುವ ಅತ್ಯುತ್ತಮ ನಟ ಎಂದರೆ ತಪ್ಪಾಗಲಾರದು ಎಂದು ಕಾಂಗ್ರೆಸ್ ಮುಖಂಡ ಸೋಮನಾಥ ಕಳ್ಳಿಮನಿಯವರು ಯತ್ನಾಳ ವಿರುದ್ಧ ವಾಗ್ದಾಳಿ ಮಾಡಿದರು.
ಸಭೆ ಸಮಾರಂಭಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳ ನೀಡಿ ಸಮಾಜದಲ್ಲಿ ನೆಲೆಸಿರುವ ಸೌಹಾರ್ದತೆಗೆ ಧಕ್ಕೆ ತಂದು ಶಾಂತಿಭಂಗಕ್ಕೆ ಯತ್ನಿಸುವುದೇ ಯತ್ನಾಳರ ಕಾಯಕವಾಗಿದೆ.
ಮುಧೋಳದಲ್ಲಿ ಗಣೇಶ್ ವಿಸರ್ಜನೆ ಸಂದರ್ಭದಲ್ಲಿ ಸೌಹಾರ್ಧತೆಗೆ ಧಕ್ಕೆ ಬರುವಂತೆ ಮಾಡಲು ಯತ್ನಾಳರ ಪ್ರಚೋದನೆ ಕಾರಣ ಎಂದು ಹೇಳಿದರು.
ಯತ್ನಾಳ ತಾನೊಬ್ಬ ದೇಶಭಕ್ತ ಹಿಂದುತ್ವವಾದಿಯೆಂದು ಹೇಳುತ್ತಾ ಕೆಲವರಿಂದ ಚಪ್ಪಾಳೆ ಗಿಟ್ಟಿಸಿಕೊಳ್ತಾರೆ.ಹಿಂದುತ್ವ,ದೇಶದಹೆಸರಲ್ಲಿ ಸೌಹಾರ್ಧತೆ ಕದಡಲು ಬಡ,ಹಿಂದುಳಿದ,ಶ್ರಮಿಕರ ಮಕ್ಕಳನ್ನ ಮುಂದೆ ಬಿಟ್ಟು ಪ್ರಚೋದಿಸುವ ಇವರು ತಮ್ಮ ಮನೆಯ ಮಕ್ಕಳನ್ನ,ಕುಟುಂಬದ ಸದಸ್ಯರನ್ನ ಯಾಕೆ ಮುಂದೆ ಬಿಟ್ಟು ಅವರನ್ನು ಪ್ರಚೋದಿಸುವುದಿಲ್ಲಾ?ಅವರ ಕುಟುಂಬದವರು ಐಶಾಮಿಯಾಗಿರಬೇಕು ಕಂಡವರ ಮಕ್ಕಳಿಗೆ ಪ್ರಚೋದನೆನೀಡಿ ಬೀದಿಗೆ ತರುವುದೇ ಯತ್ನಾಳರ ಸಾಧನೆಯಾಗಿದೆ ಎಂದು ಹರಿಹಾಯ್ದರು.ವಿಜಯಪುರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಕಳ್ಳಿಮನಿಯವರು ಶಾಸಕ ಬಸವನಗೌಡ ಪಾಟೀಲರ ಪ್ರಚೋದನಕಾರಿ ಮಾತುಗಳಿಗೆ ಮರುಳಾಗಿ ಯುವಜನರು ತಮ್ಮ ಭವಿಷ್ಯಹಾಳುಮಾಡಿಕೊಳ್ಳಬಾರದೆಂದು ಯುವಜನತೆಗೆ ಕಿವಿಮಾತು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here