ವಿಜಯಪುರ, ಆಗಸ್ಟ್ 29 – ಜಲ ನಗರದ ಶ್ರೀ ಬಿ.ಎಂ. ಪಾಟೀಲ್ ಪಬ್ಲಿಕ್ ಶಾಲೆಯಲ್ಲಿ (ICSE) ರಾಷ್ಟ್ರೀಯ ಕ್ರೀಡಾ ದಿನವನ್ನು ಉತ್ಸಾಹದಿಂದ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಬ್ದುಲ್ ಹಮೀದ್ ಎ. ಜಹಾಗೀರದಾರರು ಭಾಗವಹಿಸಿದ್ದರು. ಪ್ರಾಚಾರ್ಯರಾದ ದರ್ಶನ ಹುನಗುಂದ ರವರು, ಪ್ರಾಥಮಿಕ ವಿಭಾಗದ ಶಿಕ್ಷಣ ಸಂಯೋಜಕ ಸಂಗಮೇಶ್ ಪಟ್ಟಣಶೆಟ್ಟಿ ಯವರು, ಹಾಗೂ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಲುಕ್ಮಾನ್ ಮನಿಯಾರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವು ಲುಕ್ಮಾನ್ ಮನಿಯಾರ್ ರವರು ಮೇಜರ್ ಧ್ಯಾನ್ ಚಂದ್ ಅವರ ಜೀವನ ಮತ್ತು ಸಾಧನೆಗಳ ಕುರಿತು ವಿವರಿಸಿದೊಂದಿಗೆ ಆರಂಭವಾಯಿತು.
ಪ್ರಮುಖ ಅತಿಥಿಗಳಾದ ಅಬ್ದುಲ್ ಹಮೀದ್ ಎ. ಜಹಾಗೀರದಾರ ಅವರು ಮಾತನಾಡಿ ವಿದ್ಯಾರ್ಥಿಗಳ ಅಭಿವೃದ್ಧಿಯಲ್ಲಿ ಕ್ರೀಡೆಯ ಮಹತ್ವವನ್ನು ಮತ್ತು ಕ್ರೀಡಾ ಕ್ಷೇತ್ರದ ಮೂಲಕ ಸರ್ಕಾರಿ ಉದ್ಯೋಗಗಳಲ್ಲಿ ಲಭ್ಯವಿರುವ ವಿವಿಧ ಅವಕಾಶಗಳನ್ನು ಬಳಸಿಕೊಂಡು ಶಾಲಾ ಮಟ್ಟದಲ್ಲಿ ಕ್ರೀಡೆಗಳನ್ನು ಹಮ್ಮಿಕೊಂಡು ಮಕ್ಕಳಿಗೂ ಪ್ರೋತ್ಸಾಹಿಸಿ ಎಂಬ ಸ್ಫೂರ್ತಿದಾಯಕ ಭಾಷಣವನ್ನು ಮಾಡಿದರು.
ಕಾರ್ಯಕ್ರಮದ ಕೊನೆಗೆ, ದೈಹಿಕ ಶಿಕ್ಷಣ ವಿಭಾಗವು ಶಾಲೆಯ ಆವರಣದಲ್ಲಿ ಮಿನಿ ಮ್ಯಾರಥಾನ್ ಅನ್ನು ಆಯೋಜಿಸಿತ್ತು, ಇದರಿಂದ ಕ್ರೀಡೆಯ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕೆಂಬ ಉದ್ದೇಶ ಇತ್ತು. ಈ ಕಾರ್ಯಕ್ರಮವು ಭರ್ಜರಿ ಯಶಸ್ಸನ್ನು ಸಾಧಿಸಿದ್ದು, ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರಜ್ಞೆಯನ್ನು ಮತ್ತು ಉತ್ಸಾಹವನ್ನು ಬೆಳಸಿತು. ಇದರ ಜೊತೆಗೆ ಸಾಯಂಕಾಲ ಎಲ್ಲ ಶಿಕ್ಷಕ ಬಳಗಕ್ಕೂ ಗುಂಪು ಆಟಗಳ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತ ಗುಂಪಿಗೆ ಬಹುಮಾನ ವಿತರಿಸಿ ಸಂಭ್ರಮಿಸಲಾಯಿತು. ಒಟ್ಟಾರೆ ಇಂದಿನ ಕ್ರೀಡಾ ದಿನದಂದು ಎಲ್ಲರಲ್ಲಿಯೂ ಕ್ರೀಡೆಯ ಮಹತ್ವವನ್ನು ವಿವಿಧ ಚಟುವಟಿಕೆಗಳ ಮೂಲಕ ತಿಳಿಸಿದ ದೈಹಿಕ ವಿಭಾಗದ ಲುಕ್ಮಾನ್ ಮನಿಯಾರ್ ರವರು, ಸಂಗಪ್ಪ ಅಲಮೇಲ್ ರವರು, ಶ್ರೀಮತಿ ಅಕ್ಷತಾ ಕುಂದನ್ಗೋಳ್ ರವರು ಸೇರಿದಂತೆ ಈ ಎಲ್ಲ ಕ್ರೀಡಾ ಬಳಗದ ಕೆಲಸ ಮೆಚ್ಚುವಂತಿತ್ತು .
“ಸದೃಢ ಶರೀರದಲ್ಲಿ ಸದೃಢ ಮನಸ್ಸು ಇರುತ್ತದೆ” ಎಂಬ ನೀತಿಯನ್ನು ಸಾಕಾರಗೊಳಿಸಿದಂತಿತ್ತು ಇಂದಿನ ಶಾಲೆಯ ಕ್ರೀಡಾಂಗಣ!ಎಂದು ಶಿಕ್ಷಕಿ ಹಾಗೂ ಸಾಹಿತಿ ಶ್ರೀಮತಿ ಇಂದಿರಾ ಬಿದರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.