ತುಮಕೂರು;ಕರ್ನಾಟಕ ಸರ್ಕಾರದ ಗೃಹ ಮಂತ್ರಿಗಳಾದ ಶ್ರೀ ಡಾಕ್ಟರ್ ಜಿ.ಪರಮೇಶ್ವರ್ ರವರು ದಿನಾಂಕ;02-09-2024 ರಂದು ಬೆಳಿಗ್ಗೆ 10,ಗಂಟೆಗೆ ತಿಪಟೂರನಲ್ಲಿ ಬಿ.ಹೆಚ್.ರಸ್ತೆಯಲ್ಲಿರುವ ಎಸ್.ಎನ್.ಎಸ್.ಕನ್ವೆನ್ಷನ್ ಹಾಲ್ ನಲ್ಲಿ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ ನವದೇಹಲಿ ಯ 78,ನೇ ರಾಷ್ಟ್ರೀಯ ಸಮಾವೇಶ ಮತ್ತು ತೆಂಗು ಉತ್ಪನ್ನಗಳ ವಸ್ತು ಪ್ರದರ್ಶನ ಉದ್ಘಾಟನೆ ನೆರವೇರಿಸುವರು. ಇದೆ ಸಮಯದಲ್ಲಿ ವಿಶ್ವ ದಾಖಲೆ ಮಾಡಿರುವ ಶ್ರೀ ಹೆಚ್.ಕೆ.ಸತೀಶ್ ರವರಿಂದ 75ನೇ ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ ಬೃಹತ್ ಅಂಚೆಚೀಟಿ ಮತ್ತು ನಾಣ್ಯ ಪ್ರದರ್ಶನ ಏರ್ಪಡಿಸಲಾಗಿದೆ. ತಿಪಟೂರಿನ ಶಾಸಕರಾದ ಶ್ರೀ ಕೆ.ಷಡಕ್ಷರಿಯವರು ಅಂಚೆ ಚೀಟಿ,ನಾಣ್ಯಗಳ ವಸ್ತು ಪ್ರದರ್ಶನ ಉದ್ಘಾಟಿಸಿ ಘನ ಉಪಸ್ಥಿತ ವಹಿಸುವರು.ಈ ಕಾರ್ಯಕ್ರಮವು ಭಾರತೀಯ ಕರ್ಯನಿರತ ಪತ್ರಕರ್ತರ ಒಕ್ಕೂಟ ನವದೇಹಲಿಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಬಿ.ವಿ.ಮಲ್ಲಿಕಾರ್ಜುನಯ್ಯನವರುÀ ಅಧ್ಯಕ್ಷತೆ ವಹಿಸುವರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶ್ರೀ ಶಿವಾನಂದ ತಗಡೂರು ರವರಿಂದ “ಕಲ್ಪಶ್ರೀ” ಸ್ಮರಣ ಸಂಚಿಕೆ ಬಿಡುಗಡೆಗೊಳ್ಳುವುದು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಶ್ರೀ ತಿಪಟೂರು ಕೃಷ್ಣ ರವರುಪ್ರಾಸ್ತಾವಿಕ ನುಗಳನ್ನಾಡುವರು.ಮುಖ್ಯ ಅತಿಥಿಗಳಾಗಿ ಚಿಕ್ಕನಾಯಕನಹಳ್ಳಿ ಶಾಸಕರಾದ ಶ್ರೀ ಸಿ.ಎನ್.ಸುರೇಶ್ ಬಾಬುರವರು,ತುರುವೆಕೆರೆ ಶಾಸಕರಾದ ಶ್ರೀ ಎಂ.ಟಿ.ಕೃಷ್ಣಪ್ಪನವರು,ಕಲಾಕೃತಿ ಅಧ್ಯಕ್ಷರಾದ ಶ್ರೀ ಡಾಕ್ಟರ್ ಜಿ.ಎಸ್,ಶ್ರೀಧರ್ ರವರು,ಐ.ಎಫ.ಡಬ್ಲ್ಯೂ.ಜೆ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀ ಹೇಮಂತ್ ತಿವಾರಿಯವರು,ಐ.ಎಫ.ಡಬ್ಲ್ಯೂ.ಜೆ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಪರಮಾನಂದ ಪಾಂಡೆಯವರು.ಐ.ಎಫ.ಡಬ್ಲ್ಯೂ.ಜೆ ರಾಷ್ಟ್ರೀಯ ಹೆಚ್ಚುವರು ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಮದನ್ ಗೌಡರವರು, ಐ.ಎಫ.ಡಬ್ಲ್ಯೂ.ಜೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯವರಾದ ಶ್ರೀ ಡಿ.ಎಂ.ಸತೀಶ್ ರವರು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಜಿ.ಸಿ.ಲೋಕೇಶ್ ರವರು,ಕ.ಕಾ.ನಿ.ಪ.ಸಂಘ ತುಮಕೂರು ಜಿಲ್ಲಾ ಅಧ್ಯಕ್ಷರಾದ ಶ್ರೀ ಚಿ,ನಿ,ಪುರುಷೋತ್ತಮ್ ರವರು,ಕ.ಕಾ.ನಿ.ಪ.ಸಂಘ ತಿಪಟೂರು ತಾಲೂಕು ಅಧ್ತಕ್ಷರಾದ ಶ್ರೀ ಪ್ರಶಾಂತ್ ಕರಿಕೆರೆಯವರು ಭಾಗವಹಿಸುವರು ಈ ಕಾರ್ಯಕ್ರಮವನ್ನು ಪತ್ರಕರ್ತರಾದ ಶ್ರೀ ಹಿರೇಹಳ್ಳಿ ದೇವರಾಜ್ ರವರು ನಿರೂಪನೆ ಮಡುವರು, ಕಲಾಕೃತಿ ಪ್ರಧಾನ ಕಾರ್ಯದರ್ಶಿ ಶ್ರೀ ಜ್ಯೋತಿ ಗಣೇಶ್ ಸ್ವಾಗತಿಸುವರು ಪತ್ರಕರ್ತರದ ಶ್ರೀ ಅಲ್ಬೂರ್ ಶಿವರಾಜ್ ರವರು ವಂದನಾರ್ಪಣೆ ಮಡುವರು.
ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ ನವದೇಹಲಿಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಬಿ.ವಿ.ಮಲ್ಲಿಕಾರ್ಜುನಯ್ಯನವರ ಅಧ್ಯಕ್ಷತೆಯಲ್ಲಿ ದಿನಾಂಕ;02-09-2024ರಂದು ಸೋಮವಾರ ಬೆಳಿಗ್ಗೆ 12ಗಂಟೆಗೆ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ 78ನೇ ರಾಷ್ಟ್ರೀಯಮಂಡಳಿಯ ಸಮಾವೇಶ ನಡೆಯಲಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಶ್ರೀ ಶಿವಾನಂದ ತಗಡೂರ್ ರವರು ಆಶಯ ನುಡಿಗಳನ್ನಾಡಲಿದ್ದಾರೆ. ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ ನವದೇಹಲಿಯ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀ ಹೇಮಂತ್ ತಿವಾರಿ ಯವರು ಹಾಗೂ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಪರಮಾನಂದ ಪಾಂಡೆಯವರು ವಿಷಯ ಮಂಡನೆ ಮಾಡಲಿದ್ದಾರೆ.ನಂತರ “ಕೃತಕ ಬುದ್ಧಿಮತ್ತೆ ಮತ್ತು ಸಣ್ಣ-ಮದ್ಯಮ ಪತ್ರಿಕೆಗಳ ಮೇಲೆ ಅದರ ಪರಿನಾಮ” ಕುರಿತು ಮದ್ಯಾಹ್ನ 2-30ರಿಂದ3-30ರವರೆಗೆ ವಿಚಾರ ಸಂಕಿರಣ ನಡೆಯಲಿದೆ.ಈ ವಿಚಾರ ಸಂಕಿರಣದ ಉದ್ಘಾಟನೆ ನೆರವೇರಿಸಲಿರುವವರು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಶ್ರೀ ಕೆ.ವಿ.ಪ್ರಭಾಕರ್ ರವರು,ಮಾಧ್ಯಮ ಅಖಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಆಯೆಶಾ ಖಾನಂ ರವರು ಅಧ್ಯಕ್ಷತೆ ವಹಿಸಲಿರುವರು.ಕನ್ನಡಪ್ರಭ-ಸುವರ್ಣ ನ್ಯೂಸ್ ಪ್ರಧಾನ ಸಂಪಾದಕರಾದ ಶ್ರೀ ರವಿ ಹೆಗಡೆಯವರು ವಿಷಯ ಮಂಡನೆ ಮಾಡಲಿರುವರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಜಿ.ಸಿ.ಲೋಕೇಶ್ ರವರ ಉಪಸ್ಥಿತರಿರುವರು.ಇಂಡಿಯನ್ ಎಕ್ಸ್ ಪ್ರೆಸ್ ಬೆಂಗಳೂರು ವರದಿಗಾರರಾದ ಶ್ರೀ ಹಿರೆಹಳ್ಳಿ ದೇವರಾಜ್ ಮತ್ತು ಹಿರಿಯ ಪತ್ರಕರ್ತರಾದ ಶ್ರೀ ಶೇಷಚಂದ್ರಿಕರವರು,ಈಶ್ವರ್ ದೈತೋಟ್ ರವರು ಪ್ರತಿಕ್ರಿಯಿಸುವರು.ಈ ಗೋಷ್ಠಿ ಕಾರ್ಯಕ್ರಮವನ್ನು ತಿಪಟೂರಿನ ಪತ್ರಕರ್ತರಾದ ಶ್ರೀ ಭಾನುಪ್ರಕಾಶ್ ರವರು ನಿರೂಪಣೆ ಮಾಡುವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಿಪಟೂರಿನ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಕರಿಕೆರೆಯವರು ಸ್ವಾಗತಿಸುವರು ಮತ್ತುತಿಪಟೂರಿನ ಕಲಾಕೃತಿಯ ಎ.ಟಿ.ಪ್ರಸಾದ್ ವಂದನಾರ್ಪಣೆ ಮಾಡುವರು.
ಮದ್ಯಾಹ್ನ 3-30ರಿಂದ 4-30ರವರೆಗೆ”ತಿಪಟೂರು ಉಂಡೆ ಕೊಬ್ಬರಿ ಮಾರುಕಟ್ಟೆ ಸಮಸ್ಯೆ ಮತ್ತು ಪರಿಹಾರ ಮಾರ್ಗಗಳು ವಿಷಯ ಕುರಿತು ವಿಚಾರ ಸಂಕಿರಣವು ಶಿವಮೊಗ್ಗದ ರೈತ ಮುಖಂಡರಾದ ಶ್ರೀ ಕೆ.ಟಿ.ಗಂಗಾಧರ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಈ ವಿಚಾರ ಸಂಕಿರಣವನ್ನು ತೋಟಗಾರಿಕೆ ಇಲಾಖೆ ಲಾಲ್ಬಾಗ್ ನಿರ್ದೇಶಕರಾದ ಶ್ರೀ ಡಿ.ಎನ್.ರಮೇಶ್ ರವರು ಉದ್ಘಾಟಿಸಲಿರುವರು.ತೆಂಗು ಬೆಳೆಗಾರರಾದ ಶ್ರೀ ಎಂ.ನಾಗೇಶ್ ಬಿಳಗಿರಿ ಪಾಳ್ಯ ರವರು ವಿಷಯ ಮಂಡಿಸಲಿದ್ದಾರೆ.ತೆಂಗು ಅಭಿವೃದ್ಧಿ ಮಂಡಳಿಯ ವ್ಯಸ್ಥಾಪಕ ನಿರ್ಧೇಶಕರಾದ ಶ್ರೀ ಹನುಮಣತೇಗೌಡರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ಧೇಶಕರಾದ ಶ್ರೀ ಶಿವಾನಂದ ಕಾಪಶಿ ಐಎಎಸ್,ರವರು,ತೋಟಗಾರಿಕೆ ಇಲಾಖೆ ಲಾಲ್ ಬಾಗ್ ಜಂಟಿನಿರ್ದೇಶಕರಾದ ಶ್ರೀ ಕದ್ರೇಗೌಡರು,ತೋಟಗಾರಿಕೆ ಇಲಾಖೆ ತುಮಕೂರು ಉಪನಿರ್ದೇಶಕರಾದ ಶ್ರೀಮತಿಬಿ.ಸಿ.ಶಾರದಮ್ಮನವರು,ಕೃಷಿ ಸಂಶೋಧನಾ ಕೇಂದ್ರ ಕೊನೆಹಳ್ಳಿ ಮುಖ್ಯಸ್ಥರಾದ ಶ್ರೀಗೋವಿಣದೇಗೌಡರು,ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ತಿಪqಟೂರ ಕಾರ್ಯದರ್ಶಿಗಳಾದ ಶ್ರೀನ್ಯಾಮ ಗೌಡರು, ಪ್ರತಿಕ್ರಿಯೆ ವ್ಯಕ್ತಪಡಿಸುವರು.ಬೆಲೆಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿಯವರು ನಿರೂಪಣೆ ಮಾಡುವರು ತೆಂಗು ಬೆಳೆಗಾರರಸಂಘದ ಶ್ರೀ ಡಾ.ಪಿ.ಬಿ.ದೇವರಾಜು ರವರು ಸ್ವಾಗತಿಸುವರು ವಂದನಾರ್ಪಣೆಯನ್ನು ಕಲಾಕೃತಿಯ ಶ್ರೀ ಎಂ.ಆರ್.ನಿರಂಜನಮೂರ್ತಿಯವರು ನೆರವೇರಿಸುವರು ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯಮಂಡಳಿಯ ಸದಸ್ಯರಾದ ಶ್ರೀ ಟಿ.ಎನ್.ಮಧುಕರ್ ಉಪಸ್ಥಿತರಿರುವರು.
ಸಂಜೆ 5-30ಕ್ಕೆ ಸಮಾರೋಪ ಸಮಾರಂಭವನ್ನು ಕರ್ನಾಟಕ ಸರ್ಕಾರದ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಸನ್ಮಾನ್ಯ ಶ್ರೀ ಕೆ.ಹೆಚ್.ಮುನಿಯಪ್ಪನವರು ನೆರವೇರಿಸುವರು.ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಬಿ.ವಿ.ಮಲ್ಲಿಕಾರ್ಜುನಯ್ಯನವರು ಅಧ್ಯಕ್ಷತೆ ವಹಿಸುವರು.ಕಲಾಕೃತಿಯ ಅಧ್ಯಕ್ಷರಾದ ಶ್ರೀಡಾಕ್ಟರ್ ಜಿ.ಎಸ್.ಶ್ರೀಧರ್ ರವರ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಗಳಾಗಿ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣನವರು,ತಿಪಟೂರು ಶಾಸಕರಾದ ಕೆ.ಷಡಕ್ಷರಿಯವರು,ಜಿಲ್ಲಾಧಿಕಾರಿಗಳಾದಶ್ರೀಮತಿ ಶೂಭ ಕಲ್ಯಾಣ್ ರವರು,ಮುಖ್ಯ ಕಾರ್ಯನಿರ್ವಾಹನಧಿಕಾರಿ ಶ್ರೀ ಜಿ.ಪ್ರಭಹು ರವರು,ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಶ್ರೀ ಕೆ.ವಿ.ಅಶೋಕ್ ರವರು,ಕೈಗಾರಿಕೊದ್ಯಮಿಯಾದ ಶ್ರೀಜಿ.ಎಸ್.ಶಿವಪ್ರಸಾದ್ ರವರು,ಅಕ್ಷಯ ಕಲ್ಪ ಪ್ರೈ.ಲಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಶಿಧರ್ ರವರು,ಎಸ್.ಎನ್.ಎಸ್,ಎಜೆನ್ಸಿ ಮಾಲಿಕರಾದ ಶ್ರೀ ಟಿ.ಎನ್.ಶಿವಕುಮಾರ್ ರವರು ಭಾಗವಹಿಸುವರು.
ಕ.ಕಾ.ನಿ.ಪ ಸಂಘದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಪುಂಡಲೀಕ್ ಭೀ ಬಾಳೋಜಿಯವರು,ಕ.ಕಾ.ನಿ.ಪ ಸಂಘದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಅಜ್ಜಮಾಡ್ ರಮೇಶ್ ಕುಟ್ಟಪ್ಪನವರು,ಕ.ಕಾ.ನಿ.ಪ ಸಂಘದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಭವಾನಿಸಿಂಗ್ ಠಾಕೂರ್ ರವರು,ಕ.ಕಾ.ನಿ.ಪ ಸಂಘದ ರಾಜ್ಯ ಕಾರ್ಯದರ್ಶಿಯವರಾದ ಮತ್ತಿಕೆರೆ ಜಯರಾಮ್ ರವರು, ಕ.ಕಾ.ನಿ.ಪ ಸಂಘದ ರಾಜ್ಯ ಕಾರ್ಯದರ್ಶಿಯವರಾದ ಸೋಮಶೇಖರ್ ಕೆರಗೋಡ್ ರವರು,ಕ.ಕಾ.ನಿ.ಪ ಸಂಘದ ರಾಜ್ಯ ಕಾರ್ಯದರ್ಶಿಯವರಾದ ನಿಂಗಪ್ಪ ಚಾವಡಿಯವರು,ಕ.ಕಾ.ನಿ.ಪ ಸಂಘದ ರಾಜ್ಯ ಖಜಾಂಚಿಯವರಾದ ಶ್ರೀ ವಾಸುದೇವ್ ಹೊಳ್ಳ ರವರು,ಕ.ಕಾ.ನಿ.ಪ ಸಂಘದ ರಾಜ್ಯ ಪದಾಧಿಕಾರಿಗಳು ಹಾಗೂ ಸದಸ್ಯರುಗಳ ಗೌರವ ಉಪಸ್ಥಿತರಿರುವರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶ್ರೀ ಚಿ.ನಿ.ಪುರುಷೋತ್ತಮ್,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ರಘುರಾಮ್,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಸಮಿತಿಯ ಹಾಗೂ ರಾಜ್ಯ ಸಮಿತಿಯ ಪದಾಧಿಕಾರಿಗಳು ಸದಸ್ಯರುಗಳು,ಮತ್ತು ರಾಷ್ಟ್ರೀಯ ಮಂಡಳಿ ಸದಸ್ಯರಾದ ಶ್ರೀ ಶಾಂತರಾಜು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಿಪಟೂರು ತಲೂಕ್ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಕರಿಕೆರೆ,ಪ್ರಧಾನ ಕಾರ್ಯದರ್ಶಿ ಶ್ರೀ ಡಿ.ಕುಮಾರ್, ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಿಪಟೂರು ತಲೂಕ್ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರುಗಳು ಸಹಕಾರದಿಂದ ಅಚ್ಚು ಕಟ್ಟಾಗಿ ಕಲಾಕೃತಿ ತಿಪಟೂರು ರವರ ಪ್ರಧಾನ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಸಮಿತಿ,ತುಮಕೂರು ಜಿಲ್ಲಾ ಸಮಿತಿ ಮತ್ತು ತಿಪಟೂರು ತಾಲೂಕ್ ಸಮಿತಿಗಳ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕಾರ್ಯಕ್ರಮದ ಪ್ರಧಾನ ಸಂಚಾಲಕರಾದ ಶ್ರೀ ತಿಪಟೂರು ಕೃಷ್ಣರವರು ಹಾಗೂ ಸಹ ಸಂಚಾಲಕರಾದ ಶ್ರೀ ಆಲ್ಬೂರು ಶಿವರಾಜು ರವರು ವಿನಂತಿಸಿದ್ದಾರೆ ಎಂದು ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘ ನವದೇಹಲಿಯ ರಾಷ್ಟ್ರೀಯ ಮಂಡಳಿಯ ಸದಸ್ಯರಾದ ಶ್ರೀ ಎಸ್.ಕೆ.ಒಡೆಯರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.