ಮೂಡಲಗಿ:ಅ,4- ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿದ ಮಹರ್ಷಿ ಭಗೀರಥ ಮೂರ್ತಿಯ ಅನಾವರಣ ಹಾಗೂ ಉಪ್ಪಾರ ಸಮಾಜದವರಿಂದ ಸತ್ಕಾರ ಸಮಾರಂಭವು ಆಗಸ್ಟ್, 5ರಂದು ಬೆಳಿಗ್ಗೆ 10 ಗಂಟೆಗೆ ಸತ್ಯಭಾಮಾ ರುಣಿ ಬಾಳಪ್ಪ ಹಂದಿಗುಂದ ಕಲ್ಯಾಣ ಮಂಟಪ್ಪದಲ್ಲಿ ಆಯೋಜಿಸಲಾಗಿದೆ
ಎಂದು ಮೂಡಲಗಿ ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ರಾಮಣ್ಣ ಹಂದಿಗುಂದ ತಿಳಿಸಿದ್ದಾರೆ.
ಶನಿವಾರ ಸತ್ಯಭಾಮಾ ರುಕ್ಕಿಣಿ ಬಾಳಪ್ಪ ಹಂದಿಗುಂದ ಕಲ್ಯಾಣ
ಮಂಟಪ್ಪದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಆಮಂತ್ರಣ
ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಚಿತ್ರದುರ್ಗದ
ಹೊಸದುರ್ಗದ ಜಗದ್ಗುರು ಚಿನ್ಮೂಲಾದ್ರಿ ಭಗೀರಥ ಪೀಠದ ಶ್ರೀ
ಪುರುಷೋತ್ತಮಾನಂದಪುರಿ ಸ್ವಾಮಿಜಿಗಳು,ಮೂಡಲಗಿಯ
ಶಿವಬೋಧರಂಗ ಮಠದ ಪೀಠಾಧಿಪತಿಗಳಾದ ದತ್ತಾತ್ರೇಯಬೋಧ ಸ್ವಾಮಿಜಿಗಳು,ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀಶಿವಾನಂದ ಸ್ವಾಮಿಜಿಗಳು, ಬಾಗೋಜಿ ಕೊಪ್ಪದ ಡಾ.ಶಿವಲಿಂಗಮುರುಘರಾಜೇಂದ್ರ ಸ್ವಾಮಿಜಿಗಳು, ಕಟಕಭಾಂವಿಯ ಧರೇಶ್ವರ ಪುಣ್ಯಾಶ್ರಮದ ಅಭಿನವ
ಶ್ರೀಧರೇಶ್ವರಸ್ವಾಮೀಜಿಗಳು, ಉಪ್ಪಾರಹಟ್ಟಿಯ ಸಿದ್ದಾರೂಢ ಮಠದ ಶ್ರೀನಾಗಲಿಂಗೇಶ್ವರ ಸ್ವಾಮಿಜಿಗಳು ಸಾನಿಧ್ಯವಹಿಸುವರು,ಅರಭಾಂವಿ
ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು.
ಲೋಕೋಪಯೋಗಿ ಸಚಿವ ಸತೀಶಜಾರಕಿಹೊಳಿ ಉದ್ಘಾಟಿಸುವರು.ಗೋಕಾಕ ಶಾಸಕ ರಮೇಶ ಜಾರಕಿಹೊಳಿ,ಚಾಮರಾಜನಗರದ ಶಾಸಕ ಪುಟ್ಟರಂಗಶೆಟ್ಟಿವಿಪ ಸದಸ್ಯ ಲಖನ ಜಾರಕಿಹೊಳಿ,ಸರ್ವೋತ್ತಮ ಜಾರಕಿಹೊಳಿ,ರಾಮಣ್ಣ ಹಂದಿಗುoದ ಜ್ಯೋತಿಬೆಳಗಿಸುವರು, ಲೋಕಸಭಾ ಸದಸ್ಯರಾದ ಜಗಧೀಶ
ಶೆಟ್ಟರ ಹಾಗೂ ಪ್ರಿಯಾಂಕಾ ಜಾರಕಿಹೊಳಿ ಅವರನ್ನು
ಸನ್ಮಾನಿಸಲಾಗುವದು ಸಮಾರಂಭಕ್ಕೆ ಸಮಾಜದ ಹಾಗೂ ವಿವಿಧ
ಸಮಾಜದ ಮುಂಖಡರು,ಜಿಪo, ತಾಪಂ, ಪುರಸಭೆ, ಪಪಂ
ಸದಸ್ಯರು ಆಗಮಿಸುವರು. ಗುಡ್ಲಮಡ್ಡಿ ಶ್ರೀ ವೀರಭದ್ರೇಶ್ವರ
ಗುಡಿಯಿಂದ ಸಕಲ ವಾಧ್ಯ ಮೇಳದೊಂದಿಗೆ ನೂರಾರು
ಮಹಿಳೆಯರ ಕುಂಭಮೇಳ ಮೂರ್ತಿಯ ಮೇರವಣಿಗೆ
ಜರುವದು ನಂತರ ಮೂರ್ತಿ ಸ್ಥಾಪನೆ 11ಗಂಟೆಗೆ ಸಮಾರಂಭ
ಜರುವದು ಸುಮಾರು 7 ಸಾವಿರ ಜನಸಂಖ್ಯೆ ಸೇರುವದು ಎಂದು
ನ್ಯಾಯವಾದಿ ಲಕ್ಷ್ಮಣ ಅಡಿಹುಡಿ ತಿಳಿಸಿದ್ದಾರೆ, ಪತ್ರಿಕಾ ಗೋಷ್ಠಿಯಲ್ಲಿ ಈಶ್ವರ ಕಂಕಣವಾಡಿ, ಮಹಾದೇವ ಕಂಕಣವಾಡಿ, ಸುಭಾಸ ಗುಡ್ಯಾಗೋಳ, ಶಿವಪ್ಪ ಅಟ್ಟಿಮಟ್ಟಿ, ಅಜ್ಜಪ್ಪ ಕಂಕಣವಾಡಿ, ಮಹಾದೇವ ಕರಗಣ್ಣಿ, ಬರಮಪ್ಪ ಕಪ್ಪಲಗುದ್ದಿ,ಅಲ್ಲಪ್ಪ ಕಂಕಣವಾಡಿ,ಯಲ್ಲಪ್ಪ ಖಾನಟ್ಟಿ ಉಪಸ್ಥಿತರಿದ್ದರು.