‌ರಾಯಚೂರು: ವಾಹನಗಳಿಗೆ ಜಿ.ಪಿ.ಎಸ್. ಪ್ಯಾನಿಕ್ ಬಟನ್ ಅಳಪಡಿಸಲು ಮಾಡಲಾದ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭನೆ ಮೂಲಕ ರಾಯಚೂರ ಸಾರಿಗೆ ಅಧಿಕಾರಿಗೆ ಕರ್ನಾಟಕ ಚಾಲಕರ ಒಕ್ಕೂಟ (ರಿ) ರಾಯಚೂರು ಜಿಲ್ಲೆ ವತಿಯಿಂದ ಮನವಿ ಅರ್ಪಿಸಲಾಯಿತು.

ವಾಹನಗಳಿಗೆ ಜಿ.ಪಿ.ಎಸ್. ಪ್ಯಾನಿಕ್ ಬಟನ್ ಆಳವಡಿಸಲು ಸರ್ಕಾರದ ಆದೇಶವಾಗಿದ್ದು, ಆದರೆ ಸಾರಿಗೆ ಇಲಾಖೆಯಲ್ಲಿ ವಾಹನಗಳ ಎಫ್.ಸಿ. ಮಾಡಲು ಹೋದಾಗ ಜಿ.ಪಿ.ಎಸ್. & ಪ್ಯಾನಿಕ್ ಬಟನ್ ಅಳವಡಿಸಲು ರೂ. 14700/- ಶುಲ್ಕ ತೆಗೆದುಕೊಳ್ಳುತ್ತಿದ್ದು, ಮತ್ತು ಪಾಸಿಂಗ್ ಮಾಡಲು ರೂ. 4000/- ಒಟ್ಟು ರೂ. 18700/- ತೆಗೆದುಕೊಳ್ಳುತ್ತಿದ್ದು, ಮತ್ತು ಬಾಡಿಗೆ ವಾಹನದಲ್ಲಿ ಯಾರಾದರೂ ಪ್ರಯಾಣಿಕರ ಮಕ್ಕಳು ಪ್ಯಾನಿಕ್ ಬಟನ್ ಒತ್ತಿದರೆ ಅದಕ್ಕೆ ಕೂಡಾ ದಂಡ ವಿಧಿಸಲಾಗಿದೆ. ಇದನ್ನು ಕೂಡಾ ರದ್ದುಪಡಿಸಬೇಕು. ವರ್ಷಕ್ಕೆ ಶುಲ್ಕ ಭರಿಸುವಂತೆ ಆದೇಶವಾಗಿದ್ದು, ಇದರಿಂದ ಬಡ ಚಾಲಕರಿಗೆ ಆರ್ಥಿಕ ಹೊರೆಯಾಗುತ್ತಿದ್ದು, ಇದೊಂದು ಅವೈಜ್ಞಾನಿಕ ಆದೇಶವಾಗಿದ್ದು, ಬಡ ವಾಹನ ಚಾಲಕರಿಗೆ ಬಹಳ ತೊಂದರೆಯಾಗಿ, ಹಣಕಾಸಿನ ಅಡಚಣೆ ಉಂಟಾಗುತ್ತದೆ. ಒಂದು ವೇಳೆ ಜಿ.ಪಿ.ಎಸ್. ಪ್ಯಾನಿಕ್ ಬಟನ್ ಅಳವಡಿಸುವುದಾದರೆ ನಮ್ಮ ವಾಹನಗಳಿಗೆ 5 ರಾಜ್ಯದ ಪರ್ಮಿಟ್ ನೀಡಿದರೆ ಇದಕ್ಕೆ ನಮ್ಮ ಒಪ್ಪಿಗೆ ಇರುತ್ತದೆ.

ಆದರೆ ಸರಕಾರಿ ಬಸ್‌ಗಳಿಗೆ ಯಾವುದೆ ಜಿ.ಪಿ.ಎಸ್. & ಪ್ಯಾನಿಕ್ ಬಟನ್ ಇಲ್ಲದೇ ಜಿ.ಪಿ.ಎಸ್. ಮಾಡುತ್ತಿದ್ದು, ಆದರೆ ನಮ್ಮ ವಾಹನಗಳ ಮಾತ್ರ ಯಾಕೆ ಈ ಆದೇಶ ಮಾಡಿದ್ದೀರಿ, ಇದು ಒಂದು ಕಣ್ಣಿಗೆ ಬೆಣ್ಣೆ ಮತ್ತು ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚಿದಂತಾಗಿದ್ದು, ಸರಕಾರಿ ಬಸ್‌ಗಳು ಕೂಡಾ ಪ್ರಯಾಣಿಕರನ್ನು ಕರೆದುಕೊಂಡು ಅಂತರಾಜ್ಯಕ್ಕೆ ಹೋಗುವುದಿಲ್ಲವೇ? ಎಲ್ಲರಿಗೂ ಸಮನಾಗಿ ನೋಡಬೇಕು. ಹಾಗೂ ಕರ್ನಾಟಕ ಚಾಲಕರ ಒಕ್ಕೂಟ (ರಿ) ದ ಪದಾಧಿಕಾರಿಗಳು ಕಛೇರಿಗೆ ಹೋದರೆ ಡಿ.ಎಲ್. ಹೆವಿ ಬ್ಯಾಡನ್ನು ಸರ್ಕಾರದ ಶುಲ್ಕದಲ್ಲಿ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಬೇಕು ಏಕೆಂದರೆ, ಬೋಕರ್‌ಗಳಿಂದ ಹೆಚ್ಚಿನ ವಸೂಲಿ ಮಾಡುತ್ತಿದ್ದು, ಬಡ ಚಾಲಕರಿಗೆ ತೊಂದರೆ ಆಗುತ್ತದೆ.

ಆದ ಕಾರಣ ಈ ಕೂಡಲೇ ನಮ್ಮ ಮನವಿಗೆ ಸ್ಪಂದಿಸಿ ಬಡ ವಾಹನ ಚಾಲಕರಿಗೆ ಅನುಕೂಲ ಮಾಡಿಕೊಡುವಂತೆ ತಮ್ಮಗೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದರು.

LEAVE A REPLY

Please enter your comment!
Please enter your name here