ದಾವಣಗೆರೆ:ದಾವಣಗೆರೆಯ ಮಹಾನಗರಪಾಲಿಕೆಯ 33(ಮೂವತ್ಮೂರ)ನೇವಾರ್ಡಿನಲ್ಲಿರುವ ಸಾರ್ವಜನಿಕ ಪಾರ್ಕಿನ ಪಕ್ಕದಲ್ಲಿ ಅಂದಾಜು 20*80ಅಡಿ ಜಾಗವನ್ನು ಪಾರ್ಕಿಗೆ ಬರುವ ನಾಗರೀಕರ ವಾಹನ ನಿಲ್ದಾಣಕ್ಕೆ ಮೀಸಲಿದ್ದ ಖಾಲಿ ಜಾಗವನ್ನು ಇಲ್ಲಿಯ ಪ್ರಭಾವಿ ಒಡೆತನಕ್ಕೆ ಸೇರಿದ ಖಾಸಗೀ ಶಿಕ್ಷಣ ಸಂಸ್ಥೆಯು ಅಕ್ರಮವಾಗಿ ಗೇಟ್ ಅಳವಡಿಸಿ ಸಾರ್ವಜನಿಕ ಜಾಗವನ್ನು ಅಕ್ರಮಿಸಿಕೊಂಡು ಸಾರ್ವಜನಿಕರಿಗೆ ಅನಾನುಕೂಲಮಾಡಿದ್ದನ್ನು ಸ್ಥಳಿಯರು ಸಹಾಯವಾಣಿ ಪತ್ರಿಕೆಯ ಗಮನಕ್ಕೆ ತಂದಾಗ ಪತ್ರಿಕೆಯಲ್ಲಿ ಈ ಸುದ್ದಿಯನ್ನು ಪ್ರಕಟಿಸಿತು.

ಸಾರ್ವಜನಿಕರ ಪರವಾಗಿ ದ್ವನಿ ಎತ್ತಿದ ಎಲ್.ಐ.ಸಿ.ಯ ನಿವೃತ್ತ ಅಧಿಕಾರಿ ರುದ್ರೇಸ್ ರವರು ಪತ್ರಿಕೆಯ ಸಲಹೆಯ ಮೇರೆಗೆ ಪಾಲಿಕೆಯ ಆಯುಕ್ತರಿಗೆ ಮನವಿಸಲ್ಲಿಸಿದ್ದರು.
ಮಹಾನಗರಪಾಲಿಕೆಯ ಆಯುಕ್ತರಾದ ರೇಣುಕಾ ಮೇಡಮ್ ರವರು ವಸ್ತು ನಿಷ್ಟೆ ಕೂಲಂಕುಷವಾಗಿ ಪರಿಶೀಲಿಸಿ ಆಕ್ರಮವಾಗಿ ಅಳವಡಿಸಿದ ಗೇಟ್ ನ್ನು ಇಂದು ಪಾಲಿಕೆಯ ಸಿಬ್ಬಂದಿಯಿಂದ ತೆರವು ಗೊಳಿಸಿ ಸರ್ಕಾರದ ಜಾಗದ ಕಬಳಿಕೆಯನ್ನು ತಡೆದು ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

ಆಯುಕ್ತರಿಗೂ ಹಾಗೂ ಪಾಲಿಕೆಯ ಇತರೆ ಎಲ್ಲಾ ಸಿಬ್ಬಂದಿಗಳಿಗೂ ಈ ಭಾಗದ ಸಾರ್ವಜನಿಕರಪರವಾಗಿ ರುದ್ರೇಶ್ ಹಾಗೂ ಪತ್ರಿಕೆ ಬಳಗ ಅಭಿನಂದನೆ ಸಲ್ಲಿಸಿದ್ದಾರೆ.