ಹುಬ್ಬಳ್ಳಿ: ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘ ಮತ್ತು ಹುಬ್ಬಳ್ಳಿ ಆಟೋ ರಿಕ್ಷಾ ಮಾಲಿಕ ಹಾಗೂ ಚಾಲಕರ ಸಂಘದವತಿಯಿಂದ ಹುಬ್ಬಳ್ಳಿಯ ಮಧುರ ಕಾಲೋನಿಯ ದೇವಿ ಬನ್ನಿ ಮಹಾಕಾಳಿ ಆಟೋರಿಕ್ಷಾ ಸಂಘ ಮತ್ತು ನಿಲ್ದಾಣದ ಅಧ್ಯಕ್ಷರು ಮಹೇಶ್ ಮಾಳಗಿ ಅವರ ಅಧ್ಯಕ್ಷತೆಯಲ್ಲಿ ಉಚಿತ ಸಮಾಹಿಕ ಮದುವೆಯನ್ನು ಮಾಡಲಾಯಿತು.
ನೆರೆಹೊರೆಯವರ ಭಕ್ತಾದಿಗಳು ಮತ್ತು ಹುಬ್ಬಳ್ಳಿಯ ಅನೇಕ ಉದ್ಯಮಿದಾರರ ಸಹಾಯ ಸಹಕಾರದಿಂದ ಬಡ ಕಾರ್ಮಿಕರ ಮಕ್ಕಳಿಗೆ ರೈತ ಮಕ್ಕಳಿಗೆ ಮತ್ತು ಆಟೋರಿಕ್ಷಾ ಮಕ್ಕಳಿಗೆ ಉಚಿತ ಸಾಮಾಹಿಕ ಮದುವೆ ಶುಭ ಕಾರ್ಯಕ್ರಮವನ್ನು ಇಲ್ಲಿಯ ದೇವಿ ಬನ್ನಿ ಮಹಾಕಾಳಿ ಆಟೋರಿಕ್ಷಾ ಸಂಘದ ಸ್ಥಾನ ದಲ್ಲಿ ನೆರವರಿಸಲಾಯಿತು ಈ ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಶ್ರೀ ಶ್ರೀ ಬಸವ ಲಿಂಗ ಮಹಾಸ್ವಾಮಿಗಳು ದಾವುದ್ ಅಲಿ ಶೇಕ್ ಮತ್ತು ಉತ್ತರ ಕರ್ನಾಟಕದ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಶೇಖರಯ್ಯ ಮಠಪತಿ ಯವರು ಮತ್ತು ಆಟೋರಿಕ್ಷಾದ ನೂರಾರು ಪದಾಧಿಕಾರಿಗಳು ಉಪಸ್ಥಿತಿಯಲ್ಲಿ ಸಮೋಹಿಕ ವಿವಾಹ ನೆರವೇರಿಸಿ ನೂತನ ದಂಪತಿಗಳಿಗೆ ಶುಭಹಾರೈಸಲಾಯಿತು.