ಕರ್ನಾಟಕದ ಮತದಾರರನ್ನು ಅಣಕಿಸುತ್ತಿದೆ

ಯಡಿಯೂರಪ್ಪ ತನ್ನ ಮಗ B.Y. ರಾಘವೇಂದ್ರನನ್ನು
MP ಮಾಡಿ – ಕೇಂದ್ರದಲ್ಲಿ ಮಂತ್ರಿ ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ –
ಇನ್ನೊಬ್ಬ ಮಗ B.Y.ವಿಜಯೇಂದ್ರ ಮುಖ್ಯಮಂತ್ರಿ ಆಗಲು ವೇದಿಕೆ ಸಜ್ಜು ಮಾಡಿದ್ದಾರೆ –

ಕೆ.ಎಸ್.ಈಶ್ವರಪ್ಪ ತನ್ನ ಮಗ ಕಾಂತೇಶನಿಗೆ ಯಡಿಯೂರಪ್ಪ ಟಿಕೆಟ್ ಕೊಡಿಸಲಿಲ್ಲ-
ಶೋಭಾ ಕರಂದ್ಲಾಜೆಗೆ ಟಿಕೆಟ್ ಕೊಡಿಸಿಕೊಂಡಿದ್ದಾರೆ ಎಂದು ಬಂಡೆದ್ದಿದ್ದಾರೆ –

ರೇಣುಕಾಚಾರ್ಯ ದಾವಣಗೆರೆ ಬಿಜೆಪಿಯಲ್ಲಿ ಗಂಡಸರೇ ಇಲ್ವ ? ಸಿದ್ದೇಶ್ವರನ್ ದು ಆಯ್ತು ಈಗ ಅವನ ಹೆಂಡತಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಅಸಮಾಧಾನದ ಕೂಗು ಕೂಗುತ್ತಿದ್ದಾರೆ –

ದಾವಣಗೆರೆಯಲ್ಲಿ ಶಾಮನೂರು – ಸಿದ್ದೇಶ್ವರರ ಕುಟುಂಬದ ಗಂಡಸರ ರಾಜಕೀಯ ನೋಡಾಯ್ತು
ಈಗ ಅವರ ಕುಟುಂಬದ ಹೆಂಗಸರ ರಾಜಕೀಯ ನೋಡುವ ಭಾಗ್ಯ ದಾವಣಗೆರೆ ಜನತೆಗೆ –

ಇನ್ನೂ ಮುಖದ ಮೇಲೆ ಸರಿಯಾಗಿ ಮೀಸೆ ಮೂಡದ
ಸಾಗರ ಖಂಡ್ರೆ ಎಂಬ ಯುವಕನಿಗೆ ಅವರ ತಂದೆ ಮಂತ್ರಿ ಈಶ್ವರ ಖಂಡ್ರೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡು ಬರುವ ಭರವಸೆ ಕೊಟ್ಟಿದ್ದಾರೆ –

ಬೆಳಗಾವಿ ಯಜಮಾನರ – ಸಾಹುಕಾರರ ಕುಟುಂಬ ರಾಜಕೀಯದಲ್ಲಿ –
ಯಜಮಾನತಿ ಮಂತ್ರಿಣಿ ತನ್ನ ಸಹೋದರನಿಗೆ MLC
ಮಾಡಿದ ನಂತರ ಈಗ ಮಗನಿಗೂ ಟಿಕೆಟ್ ಕೊಡಿಸಿ MP ಮಾಡಲು ಹೊರಟಿದ್ದಾರೆ –
ಯಜಮಾನತಿ ಇಷ್ಟೆಲ್ಲಾ ಮಾಡುವಾಗ ,

ಯಜಮಾನರ ಸಾಹುಕಾರ್ ಕುಟುಂಬ ಸುಮ್ಮನಿರಲಾದೀತೇ ? ಅವರ ಕುಟುಂಬದ ಕುಡಿಯ ನವ ಹೆಣ್ಣುಮಗಳೊಬ್ಬಳನ್ನು ರಾಜಕೀಯಕ್ಕೆ ತಂದೇಬಿಟ್ಟರು – ಟಿಕೆಟ್ ಕೊಡಿಸಿ ಎಲೆಕ್ಷನ್ ಗೆ ನಿಲ್ಲಿಸೇಬಿಟ್ಟರು – ಸಹೋದರರೆಲ್ಲರೂ ಪಕ್ಷಗಳಲ್ಲಿದ್ದುಕೊಂಡೇ ಪಕ್ಷ ಮರೆತು ಪಕ್ಷಾತೀತವಾಗಿ ಅವರ ಕುಡಿಯ ಗೆಲುವಿಗೆ ಶ್ರಮಿಸುವ ಎಲ್ಲ ಭರವಸೆ ಇದೆ ! ಇದು ಬೆಳಗಾವಿ ರಾಜಕೀಯ.

ಬಾಗಲಕೋಟೆ ಮಂತ್ರಿ ಶಿವಾನಂದ ಪಾಟೀಲ್ ತನ್ನ
ಮಗಳಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿ ಬೀಗುತ್ತಿದ್ದರೆ –
ಶಾಸಕ ವಿಜಯಾನಂದ ಕಾಶಪ್ಪನವರ್ ತನ್ನ ಹೆಂಡತಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗದೇ ಹೆಂಡತಿ ಕಣ್ಣಲ್ಲಿ ನೀರು ತರಿಸಿದ್ದಾರೆ –

34 ವರ್ಷ ಪಕ್ಷ ಕಟ್ಟಿದ್ದೀನೀ ನನ್ನ ಅಳಿಯ ಚಿಕ್ಕಪೆದ್ದಣ್ಣನಿಗೆ ಟಿಕೆಟ್ ಕೊಡಿ ಎಂದು ಮಾಧ್ಯಮದ ಮುಂದೆ ಅವಲತ್ತುಕೊಂಡಿರುವ ಕೆ.ಎಚ್.ಮುನಿಯಪ್ಪನವರಿಗೆ ,
ಈ 34 ವರ್ಷದಲ್ಲಿ ತಾವೊಬ್ಬರೇ ಪಕ್ಷ ಕಟ್ಟಲು ಸಾಧ್ಯ ಇಲ್ಲ – ಇದಕ್ಕಾಗಿ ನೂರಾರು ಸಾವಿರಾರು ಜನ ಕಾರ್ಯಕರ್ತರ ಶ್ರಮ ಇರುತ್ತದೆ ಎಂಬ ಸತ್ಯ ಮರೆತುಹೋಗಿ – ಅವರ – ಅವರ ಅಳಿಯನ ಶ್ರಮ ಮಾತ್ರ ಕಾಣುತ್ತಿದೆ !

ಎಲ್ಲರ ಮಕ್ಕಳಿಗೂ ಟಿಕೆಟ್ ಕೊಟ್ಟಿದ್ದೀರೀ , ಇದೇ ಮಾನದಂಡ ಬಳಸಿ ನನ್ನ ಮಗ ಸುನೀಲ್ ಬೋಸನಿಗೂ ಟಿಕೆಟ್ ಕೊಡಿ ಇದು ಸಿದ್ದರಾಮಯ್ಯ ನವರ ಬಹುಕಾಲದ ಗೆಳೆಯ H.C.ಮಹದೇವಪ್ಪನವರ ಅಳಲು ಮತ್ತು ತರ್ಕ.

ಇನ್ನು ಕರ್ನಾಟಕದ ರಾಜಕೀಯದಲ್ಲಿ ಕುಟುಂಬ ರಾಜಕೀಯಕ್ಕೆ ಹೆಸರುವಾಸಿಯಾದ ಕುಟುಂಬ ಎಂದರೆ ಅದು ಹೆಚ್.ಡಿ.ದೇವೇಗೌಡರ ಕುಟುಂಬ –

ಈ ಚುನಾವಣೆಯಲ್ಲಿ :-
ಹೆಚ್.ಡಿ.ದೇವೇಗೌಡರ ಕುಟುಂಬದಿಂದ
ಕುಟುಂಬ ರಾಜಕೀಯದಲ್ಲಿ ಒಂದು ಹೊಚ್ಚ ಹೊಸ ಎಂಟ್ರಿ
ಮತ್ತು ಒಂದು ಹೊಚ್ಚ ಹೊಸ ಪ್ರಯೋಗ –

ಹೆಚ್. ಡಿ.ದೇವೇಗೌಡರ ಅಳಿಯ ಡಾಕ್ಟರ್ ಮಂಜುನಾಥ್ ರವರು
ರಾಜಕೀಯಕ್ಕೆ ಹೊಸ ಎಂಟ್ರಿ ಆಗಿರುವುದು
ಮತ್ತು ಹೊಸ ಪ್ರಯೋಗ ಮಾಡಿರುವುದು –
ಮಾವ ಹೆಚ್.ಡಿ.ದೇವೇಗೌಡರ ಜೆಡಿಎಸ್ ಪಕ್ಷ ಇದ್ದರೂ ,
ದೇವೇಗೌಡರ ಜೆಡಿಎಸ್ ಇಂದ ಡಾಕ್ಟರ್ ಮಂಜುನಾಥ್ ರವರು ಸ್ಫರ್ಧಿಸದೇ -ಬಿಜೆಪಿಯಿಂದ ಸ್ಪರ್ಧಿಸುತ್ತಿರುವುದು – ಇದು ಹೊಸ ಪ್ರಯೋಗ

ಕರ್ನಾಟಕದ ಜನ ಧನ್ಯರಾದರು -ರಾಜಕೀಯ ಪಕ್ಷಗಳ ಕಾರ್ಯಕರ್ತರು ಬದುಕಿಹೋದರು -ಕರ್ನಾಟಕದ ರಾಜಕಾರಣ ಪರಿಶುದ್ಧವಾಗಿರಬೇಕು ಕುಟುಂಬ ರಾಜಕೀಯದಿಂದ ಮುಕ್ತವಾಗಿರಬೇಕು

LEAVE A REPLY

Please enter your comment!
Please enter your name here