ದಾವಣಗೆರೆ ಫೆ 23:ಒಂದೇಡೇ ಮಳೆ ಕೈಕೊಟ್ಟು ಮೆಕ್ಕೆಜೋಳ ರಾಗಿ ಜೋಳ ಶೇಂಗಾ ಹತ್ತಿ ಒಣಗಿ ದನಕರುಗಳಿಗೆ ಮೇವು ಇಲ್ಲದ ಸ್ಥಿತಿ, ನಿರ್ಮಾಣವಾಗಿದೆ. ಭಧ್ರೆ ಒಡಲು ಬರಿದಾಗಿ
ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ.
ಕೊಳವೆ ಬಾವಿ ಹಳ್ಳ ಕೊಳ್ಳ ಹೊಲ ಗದ್ದೆ ಪೈರು ಪಚ್ಚೆ ಹಸಿರು
ಮಾಯಾ ಅವರಿಸಿ ಬಿಟ್ಟಿದೆ.

ಇರುವ ಲಭ್ಯತೆ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ
ತಿಂಗಳಲ್ಲಿ 12 ದಿನಗಳಂತೆ ನೀರು ಸರಬರಾಜು ಮಾಡಿ
ಕೈತೊಳೆದು, ಇಷ್ಟೇ ನಮ್ ಕೈಯಲ್ಲಿ ಮಾಡುವುದು ಎಂದು
ಭದ್ರಾ ಕಾಡ ಸಮಿತಿ ಗೈರು ಹಾಜರಿ ಯಲ್ಲಿ ತಾತ್ಕಾಲಿಕ ಕಮಿಟಿ ದಾವಣಗೆರೆ ಭಾಗದ ರೈತರಿಗೆ ಹೇಗೋ ನೀರು ಸರಬರಾಜು ಮಾಡುತ್ತಿದ್ದು ಕುಕ್ಕುವಾಡ ಸೆಕ್ಷನ್ ನಲ್ಲಿ ಇನ್ನೂ ಕೊನೆ ಭಾಗದಲ್ಲಿ
ನೀರು ತಲೆ ಹಾಕಿ ಹಾಕಿಲ್ಲ.

ಈ ಹಿನ್ನೆಲೆಯಲ್ಲಿ ರೈತರು ಕಾರಿಗನೂರು ಕ್ರಾಸ್ ಬಳಿ ರಸ್ತೆ ತಡೆದು ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿ ಆಕ್ರೋಶ ವ್ಯಕ್ತಪಡಿಸಿದರು ನಂತರ ಮಧ್ಯಾಹ್ನ ಜಿಲ್ಲಾಧಿಕಾರಿ ವೆಂಕಟೇಶ್ ರೈತ ಮುಖಂಡ ತೇಜಸ್ವಿ ಪಟೇಲ್ ಕೊಳೇನಹಳ್ಳಿ ಸತೀಶ್,ಮತ್ತಿ ಹನುಮಂತಪ್ಪ, ಕುಕ್ಕುವಾಡ ಮಂಜಪ್ಪ ಕಾರಿಗನೂರು ಮಂಜುನಾಥ್ ಪಟೇಲ್,
ನಂಧ್ಯಪ್ಪ, ವೀರಭದ್ರಪ್ಪ, ಸೇರಿದಂತೆ ಸುತ್ತಲಿನ ಹಳ್ಳಿಗಳ ಕೊನೆ ಭಾಗದ ರೈತರು ಪಾಲ್ಗೊಂಡಿದ್ದರು.

ಸಭೆಯಲ್ಲಿ ಕೊನೆ ಭಾಗದ ರೈತರಿಗೇ ನೀರೊದಗಿಸುವ ಆಕ್ರಮ ಪಂಪ್ ಸೆಟ್ ತೆರವು ಕಾರ್ಯಾಚರಣೆ ಆರಂಭವಾಗಿದೆ, ಡ್ಯಾಂನಲ್ಲಿ ಮೊದಲು ಕುಡಿಯುವ ನೀರು ಮೈಲಾರ ಜಾತ್ರೆ, ಡೆಡ್ ಸ್ಟೋರೇಜ್ ಈ ಬಗ್ಗೆ ಕುಲಂಕುಷ ಸರ್ಕಾರದ ಜೊತೆ ಮಾತುಕತೆ ನಡೆಸಿ ಟೈಲೇಂಡ್ ಭಾಗದ ರೈತರಿಗೆ ನೀರು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಧರು

LEAVE A REPLY

Please enter your comment!
Please enter your name here