ರಾಯಚೂರು,ಫೆ.೧೩- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ೨೦೨೪-೨೫ನೇ ಸಾಲಿನ ಸದಸ್ಯತ್ವ
ನವೀಕರಣ ಮತ್ತು ನೂತನ ಸದಸ್ಯತ್ವಕ್ಕಾಗಿ ಪತ್ರಕರ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ರಾಜ್ಯ ಘಟಕದ ಮಾರ್ಗಸೂಚಿಯಂತೆ ಸದಸ್ಯತ್ವ ನವೀಕರಣ ಮತ್ತು ಹೊಸ ಸದಸ್ಯತ್ವ
ನೀಡಲಾಗುವುದು. ನಿಬಂಧನೆಗಳ ವಿವರ ಜಿಲ್ಲಾ ಸಂಘದ ಕಚೇರಿಯಲ್ಲಿ ಪಡೆಯಬಹುದಾಗಿದೆ. ಸಂಘಕ್ಕೆ
ಸದಸ್ಯರಾಗ ಬಯಸುವ ಪತ್ರಕರ್ತರು ಫೆ.೧೨ರಿಂದ ಜಿಲ್ಲಾ ಹಾಗೂ ಆಯಾ ತಾಲೂಕಗಳ ಅಧ್ಯಕ್ಷರು,
ಪ್ರಧಾನ ಕಾರ್ಯದರ್ಶಿಗಳ ಬಳಿ ಅರ್ಜಿಗಳನ್ನು ಪಡೆಯಬಹುದಾಗಿದೆ. ಅರ್ಜಿ ಶುಲ್ಕ ೧೦ ರೂ. ಜೊತೆ ೫೦೦ ರೂ.
ಸದಸ್ಯತ್ವ ಶುಲ್ಕ ಪಡೆಯಲಾಗುವುದು. ಸಂಪಾದಕರಿ0ದ ಪಡೆದ ದೃಢೀಕರಣಪತ್ರ ಅರ್ಜಿಗೆ
ಕಡ್ಡಾಯವಾಗಿ ಲಗತ್ತಿಸಬೇಕು. ಫೆ.೨೨ ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನಂತರ ಬಂದ ಅರ್ಜಿಗಳನ್ನು
ಸ್ವೀಕರಿಸುವುದಿಲ್ಲ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ,
ಪ್ರಧಾನ ಕಾರ್ಯದರ್ಶಿ ಎಂ.ಪಾಷ ಹಟ್ಟಿ ಪ್ರಕಟಣೆಯಲ್ಲಿ