ದಾವಣಗೆರೆ-ಜನವರಿ,:ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕೇರಳ ಗಡಿನಾಡ ಶಾಖೆಯ ೨ನೇ ವರ್ಷದ ವಾರ್ಷಿಕೋತ್ಸವ ಜನವರಿ ೨೦ನೇ ಶನಿವಾರ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕೊಂಡೆವೂರಿನ ಎಸ್.ಎಸ್.ಎನ್.ವಿ.ಪಿ. ಸಭಾಂಗಣದಲ್ಲಿ ಬೆಳಿಗ್ಗೆ ೯-೪೫ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಶಾಲಾ ಮಕ್ಕಳಿಗೆ ಪರಿಜ್ಞಾನ ಹೆಚ್ಚಿಸಲು ಅವರಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಸದುದ್ದೇಶದಿಂದ ಕಥಾಕಮ್ಮಟ, ಭಾಷಣಕಲೆ, ವ್ಯಕ್ತಿತ್ವ ವಿಕಸನ ಪೋಷಣಾ ಉಚಿತ ಶಿಬಿರ ಹಮ್ಮಿಕೊಂಡಿದ್ದು ದಿವ್ಯ ಸಾನಿದ್ಯವನ್ನು ಕೊಂಡೆವೂರಿನ ಶ್ರೀನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ವಹಿಸಿಕೊಳ್ಳಲಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ವ್ಯಂಗಚಿತ್ರ ಹಿರಿಯ ಕಲಾವಿದರಾದ ಪಿ.ಎನ್.ಮೂಡತ್ತಾಯ ನೆರವೇರಿಸಲಿದ್ದಾರೆ.
ಕುಂಬ್ಳೆಯ ಖ್ಯಾತ ಹಿರಿಯ ಕವಿಗಳು, ಸಾಹಿತಿಗಳಾದ ವಿ.ಬಿ. ಕುಳಮರ್ವ ಕಥಾಕಮ್ಮಟ ನಡೆಸಿಕೊಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷಿö್ಮÃ ಕಾರಂತ್ ವಹಿಸಿಕೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಕೇರಳದ ಗಡಿನಾಡಿನ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾದ ಡಾ.ಜಯಪ್ರಕಾಶ್ ತೊಟ್ಟೆತ್ತೋಡಿ ಆಗಮಿಸಲಿದ್ದು, ನೂರಾರು ಮಕ್ಕಳಿಗೆ ನಿರಂತರವಾಗಿ ಭಾಗವತ್ಗೀತೆಯ ತರಬೇತಿ, ಅಭಿಯಾನ ಮಾಡುತ್ತಿರುವ ಭಗವತ್ಗೀತೆಯ ತೃಜ್ಞದೂ ಕೇಂದ್ರ ವಿದ್ಯಾಲಯದ ಹಿರಿಯ ಶಿಕ್ಷಕರಾದ ಸುಬ್ರಹ್ಮಣ್ಯ ಭಟ್ಟರವರ ಸಾಧನೆಗಳನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಗುವುದು.
ಅಂದು ಅಪರಾಹ್ನ ೨.೩೦ಕ್ಕೆ ಶಿಬಿರದ ಸಮಾರೋಪ ನಡೆಯಲಿದ್ದು, ಈ ಶಿಬಿರದಲ್ಲಿ ಭಾಗವಿಹಿಸಿದ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಗುವುದು. ಶೈಕ್ಷಣಿಕ ಕಾಳಜಿಯ ಈ ಅಪರೂಪದ ಸಮಾರಂಭಕ್ಕೆ ಸರ್ವ ಕನ್ನಡ ಮನಸ್ದುಗಳ ಸಾರ್ವನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾರಂಭ ಯಶಸ್ವಿಗೊಳಿಸಬೇಕಾಗಿ ಕಲಾಕುಂಚ ಸರ್ವ ಸದಸ್ಯರು ವಿನಂತಿಸಿದ್ದಾರೆ.