ದಾವಣಗೆರೆ:2024ಫೆಬ್ರವರಿ3&4,ರಂದು ಎರಡು ದಿವಸ ದಾವಣಗೆರೆಯಲ್ಲಿ ನಡೆಯಲಿರುವ 38ನೇ ಪತ್ರಕರ್ತರ ರಾಜ್ಯ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿರುವರು.ಆದ್ದರಿಂದ ದಾವಣಗೆರೆ ಜಿಲ್ಲೆಯಾದನಂತರ ಇದೇಮೊದಲಬಾರಿ ನಡೆಯುತ್ತಿರುವುದರಿಂದ ಎಲ್ಲಾ ಪತ್ರಕರ್ತರು ಸಮ್ಮೇಳನವನ್ನು ಯಶಸ್ವಿಯಾಗಿನಡೆಸಬೇಕೆಂದು ಉತ್ಸುಕತೆಯಿಂದ ಕಾರ್ಯಪ್ರವೃತ್ತರಾಗಿದ್ದಾರೆ.
ಈ ಗಾಗಲೇ ಹಲವುಸುತ್ತಿನ ಸಭೆಗಳನ್ನು ಮಾಡಿ ಸಮ್ಮೇಳನದ ಪೂರ್ವ ಸಿದ್ದತೆಗಾಗಿ ಹಲವಾರು ಗಣ್ಯಮಾನ್ಯರನ್ನು ಭೇಟಿಮಾಡಲಾಗಿದೆ.ಸಮ್ಮೇಳನದ ಲಾಂಛನವನ್ನು ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ದಾವಣಗೆರೆ ಜಿಲ್ಲಾಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನರವರು ಬಿಡುಗಡೆಗೊಳಿಸಿದ್ದಾರೆ.ನಮ್ಮಕಾರ್ಯಕ್ರಮದಂತೆ ಜಿಲ್ಲೆಯ ಜನಪ್ರತಿನಿಧಿಗಳಾದ ಡಾ.ಶಾಮನೂರು ಶಿವಶಂಕರಪ್ಪನರನ್ನು,ಸಂಸದರಾದ ಜಿ.ಎಂ.ಸಿದ್ದೇಶ್ವರ್ ರವರನ್ನು,ಡಿ.ಜಿ.ಶಾಂತನಗೌಡರನ್ನು,ಬಿ.ಪಿ.ಹರೀಶ್ ರವರನ್ನು,ಬಿ.ದೇವೇಂದ್ರಪ್ಪನವರನ್ನು ಹಾಗೂ ಬಸವಂತಪ್ಪನವರು ಶಿವಗಂಗಾ ಬಸವರಾಜರವರನ್ನು ಸೇರಿದಂತೆ ಎಸ್.ವಿ.ರಾಮಚಂದ್ರಪ್ಪ,ಎಂ.ಪಿ.ರೇಣುಕಾಚಾರ್ಯ,ಹೀಗೆ ಮಾಜಿ,ಹಾಲಿ ಜನಪ್ರತಿನಿಧಿಗಳನ್ನು ಹಾಗೂ ಜಿಲ್ಲೆಯ ಹಲವು ವರ್ತಕರನ್ನು ಗಣ್ಯಮಾನ್ಯರನ್ನು ವಿವಿಧಸಂಘಸಂಸ್ಥೆಗಳ ಮುಖಂಡರುಗಳನ್ನು ಭೇಟಿಮಾಡಿ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕೆಂದು ವಿನಂತಿ ಮಾಡಿಕೊಳ್ಳಲಾಗಿದೆ.
ಇದರ ಮುಂದುವರಿದ ಭಾಗವಾಗಿ ದಿನಾಂಕ 30-12-2023ರಂದು ಶ್ರೀ ಅಥಣಿ ವೀರಣ್ಣ, ಶ್ರೀ ಅಣಬೇರು ರಾಜಣ್ಣ, ಶ್ರೀ ಎನ್.ಎ.ಮುರುಗೇಶ್ ಅವರನ್ನು ಭೇಟಿ ಮಾಡಿ ಸಮ್ಮೇಳನಕ್ಕೆ ತನು-ಮನ-ಧನಗಳಿಂದ ಸಹಕಾರ ನೀಡಲು ಕೋರಲಾಯಿತು.ರಾಜ್ಯ ಪತ್ರಕರ್ತರ ಸಮ್ಮೇಳನ ದಾವಣಗೆರೆಯಲ್ಲಿ ನಡೆಯುತ್ತಿರುದರಿಂದ ಸಂತಸವ್ಯಕ್ತಪಡಿಸಿದರು ಮತ್ತುಸಮ್ಮೇಳನದ ಯಶಸ್ಸಿಗೆ ಸಂಪೂರ್ಣ ಬೆಂಬಲ ಸಹಕಾರ ನೀಡುವುದಾಗಿ ಹೇಳಿದರು.