ಮೂಡಲಗಿ: ಡಿ,06-ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮ ನಡೆಯಿತು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹಲವಾರು ಚಟಗಳಿಗೆ ಬಲಿಯಾಗುತ್ತೀರುವುದು ವಿಷಾದದ ಸಂಗತಿಯಾಗಿದೆ.ಇದರಿಂದ ಹಲವಾರು ರೋಗಗಳು ಅಂಟಿಕೊಂಡು ಪ್ರೌಢ ವಯಸ್ಸಿನಲ್ಲಿ ಮರಣ ಹೊಂದುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪದವಿ ಕಾಲೇಜಿನ ಪ್ರಾಚಾರ್ಯರಾದ ಸಂಗಮೇಶ ಹೂಗಾರ ಮಾತನಾಡಿದರು.
ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬಾಳಬೇಕೆಂದು ಸಂಸ್ಥೆಯ ಆಡಳಿತಾಧಿಕಾರಿ ಪ್ರಕಾಶ ಗರಗಟ್ಟಿ ಸಸಿಗೆ ನೀರು ಹಾಕಿ ಕಾರ್ಯಕ್ರಮ ಉದ್ಘಾಟಿಸಿದ ನಂತರ ಹಿಗೇ ಮಾತನಾಡಿದರು.
ಅಂಟು ರೋಗಗಳಿಂದ ಯುವಕರು ಎಚ್ಚರ ವಹಿಸಲು ಎನ್.ಎಸ್.ಎಸ್.ಅಧಿಕಾರಿ ಎಸ್.ಬಿ.ಮನ್ನಿಕೇರಿ ಸೂಚನೆ ನೀಡಿದರು. ಶಿಕ್ಷಕರಾದ ಗುರು ಖಡಕಭಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಉಪನ್ಯಾಸಕಿ ವಿದ್ಯಾ ಬಡಿಗೇರ ಸ್ವಾಗತಿಸಿದರು, ಜ್ಞಾನೇಶ್ವರ ಮಲ್ಲಾಪೂರ ನಿರೂಪಿಸಿದರು ಮತ್ತು ಉಪನ್ಯಾಸಕಿ ಶ್ಯಾಹಿಲ್ ಲಂಗೋಟಿ ವಂದಿಸಿದರು.

LEAVE A REPLY

Please enter your comment!
Please enter your name here