ಬೆಂಗಳೂರು: ದಿ 03-11-23 ಶುಕ್ರವಾರ ಯಶವಂತಪುರ ವಿಧಾನಸಭಾ ಕ್ಷೇತ್ರ ಕೆಂಗೇರಿಯ ಬಂಡೆಮಠದಲ್ಲಿ ನಡೆದ “ಶಾಸಕರ ರಾಜ್ಯೋತ್ಸವ ಪ್ರಶಸ್ತಿ-2023” ಪ್ರಧಾನ ಸಮಾರಂಭವು ಅತ್ಯಂತ ಅದ್ದೂರಿ ಹಾಗೂ ಯಶಸ್ವಿಯಾಗಿ ನೆರವೇರಿಸಲಾಯಿತು.

ಪೌರಕಾರ್ಮಿಕರು ಮಳೆ, ಚಳಿ, ಗಾಳಿ, ಸುಡು ಬಿಸಿಲಿನಲ್ಲಿ ಪ್ರತಿನಿತ್ಯ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿ ಕ್ಷೇತ್ರದ ಜನರ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಕೋರೋನ ಮಹಾಮಾರಿ ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದು ತಮ್ಮ ಪ್ರಾಣವನ್ನು ಲೆಕ್ಕಿಸದೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಜನತೆಗಾಗಿ ದುಡಿದ ಎಲ್ಲಾ ನನ್ನ ತಂದೆ-ತಾಯಿ, ಸೋದರ-ಸೋದರಿ ಸಮಾನರಾದ ಪೌರಕಾರ್ಮಿಕರಿಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳನ್ನು ಅರ್ಪಿಸಲು ಬಯಸುತ್ತೇನೆ ಎಂದು ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಇವರುಗಳ ಅದಮ್ಯವಾದ ಸೇವೆಯನ್ನು ಪರಿಗಣಿಸಿ ಕ್ಷೇತ್ರದ ಬಿಬಿಎಂಪಿ ವಾರ್ಡ್ ಗಳಾದ ಹೆಮ್ಮಿಗೆಪುರ, ಕೆಂಗೇರಿ, ಉಲ್ಲಾಳು, ಹೇರೋಹಳ್ಳಿ & ದೊಡ್ಡಬಿದರಕಲ್ಲು ವ್ಯಾಪ್ತಿಯ ಪೌರಕಾರ್ಮಿಕರು, ಆಟೋ & ಟ್ರಕ್ ಡ್ರೈವರ್, ಸಹಾಯಕರುಗಳು, ಸ್ಮಶಾನ ಮತ್ತು ವಿದ್ಯುತ್
ಚಿತಾಗಾರದಲ್ಲಿ ಕಾಯಕ ನಿರ್ವಹಿಸುತ್ತಿರುವ ಕಾರ್ಮಿಕರು ಸೇರಿ 1,200 ಬಿಬಿಎಂಪಿ ಕಾರ್ಮಿಕರಿಗೆ “ಶಾಸಕರ ರಾಜ್ಯೋತ್ಸವ ಪ್ರಶಸ್ತಿ-2023” ನೀಡಿ ಗೌರವಿಸಲಾಯಿ.

ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ – ಅಚ್ಚುಕಟ್ಟಾಗಿ ಆಯೋಜಿಸಿದ ರಾಜ್ಯೋತ್ಸವ ಪ್ರಶಸ್ತಿ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಹೆಮ್ಮಿಗೆಪುರ ಪಾಲಿಕೆ ಸದಸ್ಯರಾದ ಆರ್ಯ ಶ್ರೀನಿವಾಸ್ ರವರು ಹಾಗೂ ಸಮಿತಿಯ ಎಲ್ಲಾ ಸದಸ್ಯರುಗಳಿಗೆ, ಮುಖಂಡರುಗಳಿಗೆ, ಬಿಬಿಎಂಪಿ ಅಧಿಕಾರಿಗಳಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆಂದು ಶಾಸಕರು ಈ ಸಂದರ್ಭದಲ್ಲಿ ಹೇಳಿದರು.





LEAVE A REPLY

Please enter your comment!
Please enter your name here