ಹೊನ್ನಾಳಿ:
ಹೆಣ್ಣು ಬ್ರೂಣ ಹತ್ಯೆ ನಿಯಂತ್ರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರಮಟ್ಟದಲ್ಲಿ ಗರ್ಭಿಣಿ ನೋಂದಾವಣಿಯನ್ನು ಕಡ್ಡಾಯಗೊಳಿಸಿ ಆರುಷಿ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಕನ್ಯಾಕುಮಾರಿಯಿಂದ ದೆಹಲಿವರೆಗೂ ಪಾದಯಾತ್ರೆಯ ಪೂರ್ವಭಾವಿ ಸಭೆಯನ್ನು ದಿನಾಂಕ 26 /8 /2023 ರ ಶನಿವಾರದಂದು ಮಧ್ಯಾಹ್ನ 12 ಗಂಟೆಗೆ ಹೊನ್ನಾಳಿಯ ಕನಕ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು ಹೊನ್ನಾಳಿ ನಗರದ ಸಿಎಂ ಜಕ್ಕಾಳಿಯವರು ಈ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ ಈ ಪಾದಯಾತ್ರೆಯ ಉದ್ದೇಶ ಹೆಣ್ಣು ಬ್ರೂಣ ಹತ್ಯೆಯು ರಾಷ್ಟ್ರಾದ್ಯಂತ ಹೆಚ್ಚಾಗಿದ್ದು ಸರ್ಕಾರ ಏನೇ ಯೋಜನೆ ಹಾಗೂ ಕಾನೂನು ತಂದರು ಸಹ ಹೆಣ್ಣು ಬ್ರೂಣ ಹತ್ಯೆ ಹೆಚ್ಚಾಗಿರುವ ವರದಿಗಳು ಕಂಡು ಬಂದಿವೆ ಜಾಗೃತಿ ಮೂಡಿಸುವ ಮತ್ತು ಗರ್ಭಿಣಿ ನೋಂದಾವಣೆಯನ್ನು ಕಡ್ಡಾಯಗೊಳಿಸುವಂತೆ ಸತತವಾಗಿ ಹತ್ತು ವರ್ಷಗಳಿಂದ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದೇನೆ ಗರ್ಭಿಣಿ ನೋಂದಣಿ ಕಡ್ಡಾಯಗೊಳಿಸಿ ಭ್ರೂಣಕ್ಕೆ ಕೋಡ್ ನೀಡುವುದು ಈ ಕೋಡ್ ಸಂಖ್ಯೆ ವ್ಯಕ್ತಿಯ ಅಂತ್ಯದವರೆಗೆ ಮುಂದುವರಿಸಬಹುದು ಕಾಲಕಾಲಕ್ಕೆ ನೀಡಬೇಕಾಗಿರುವ ಎಲ್ಲಾ ಕಾರ್ಡುಗಳನ್ನು ಸರ್ಕಾರದ ಕಡೆಯಿಂದ ಕಳುಹಿಸಿ ಕೊಡುವ ಅಂಶದೊಂದಿಗೆ ಯೋಜನೆಗೆ ಸಂಬಂಧಿಸಿದ ಸಂಪೂರ್ಣ ವಿವರಣೆಯೊಂದಿಗೆ 2014ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ ಹಾಗೆ ಕನ್ಯಾಕುಮಾರಿಯಿಂದ ರಾಷ್ಟ್ರಪತಿ ಭವನ ದೆಹಲಿಯವರೆಗೆ
ಪಾದಯಾತ್ರೆಯ ಮೂಲಕ ಆಗಮಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ನೀಡಲಾಗುತ್ತದೆ ಮತ್ತು ಪಾದಯಾತ್ರೆಯಲ್ಲಿ ಆಗಮಿಸಿ ಹತ್ತನೇ ಬಾರಿಗೆ ಮನವಿಯನ್ನು ನೀಡುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮಾಹಿತಿಯನ್ನು ನೀಡಿರುತ್ತೇನೆ ಇದುವರೆಗೂ ಯಾವುದೇ ಕ್ರಮ ಜರುಗಿಸಿರುವುದಿಲ್ಲ ಪಾದಯಾತ್ರೆ ಸಂದರ್ಭದಲ್ಲಿ ಸೂಕ್ತ ರಕ್ಷಣೆಯ ಅವಶ್ಯಕತೆ ಇದ್ದು ರಾಜ್ಯ ಸರ್ಕಾರದಿಂದ ರಕ್ಷಣೆಯನ್ನು ಹಾಗೂ ವಿಶೇಷ ಅನುದಾನದಡಿಯಲ್ಲಿ ಯಾತ್ರೆಗೆ ಅನುದಾನ ನೀಡುವಂತೆ ಶಾಸಕರ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಸರ್ಕಾರ ನನಗೆ ರಕ್ಷಣೆ ಹಾಗೂ ಆರ್ಥಿಕ ಸಹಾಯ ಕೊಟ್ಟರು ಕೊಡದಿದ್ದರೂ ಯಾತ್ರೆಯನ್ನು ಕೈಬಿಡುವುದಿಲ್ಲ ಯಾತ್ರೆಯ ಸಮಯದಲ್ಲಿ ಅವಘಡ ಸಂಭವಿಸಿದರೆ ಜನತೆಗೆ ಸರ್ಕಾರವೇ ಒತ್ತರಿಸಬೇಕಾಗಿತ್ತು ಎಂದು ಸಿಎಂ ಜಕ್ಕಳಿಯವರು ಸಭೆಯಲ್ಲಿ ಪ್ರಸ್ತಾಪಿಸಿದರು ಕನ್ಯಾಕುಮಾರಿಯಿಂದ ದೆಹಲಿವರೆಗೆ 3650 ಕಿಲೋಮೀಟರ್ ನೂರು ದಿನಗಳ ಕಾಲ ಪಾದಯಾತ್ರೆ ಯಶಸ್ವಿಯಾಗಲು ಸರ್ಕಾರದಿಂದ ಆರ್ಥಿಕ ಸಹಾಯ ಮತ್ತು ರಕ್ಷಣೆ ನೀಡಲು ಸಭೆಯಲ್ಲಿ ಶಾಸಕರಾದ ಡಿಜೆ ಶಾಂತನಗೌಡರು ಮೂಲಕ ಮನವಿ ಸಲ್ಲಿಸಿದರು ಶಾಸಕರು ಸಭೆಯಲ್ಲಿ ನಾನು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರೊಟ್ಟಿಗೆ ಮಾತನಾಡಿ ನಿಮಗೆ ವ್ಯವಸ್ಥೆ ಕಲ್ಪಿಸುತ್ತೇವೆ ಹಾಗೂ ವಿಶೇಷವಾಗಿರುವಂತಹ ಈ ವಿಷಯ ನನಗೆ ತುಂಬಾ ವಿಶೇಷವಾಗಿ ಇರುವಂತದ್ದು ಸಚಿವರೊಂದಿಗೆ ಮಾತನಾಡಲು ನಿಮ್ಮನ್ನು ಕರೆದೊಯುವೆ ಎಂದು ಹೇಳಿದರು .
ಸಭೆಯಲ್ಲಿ ಅವಳಿ ತಾಲೂಕಿನ ಶಾಸಕರಾದ ಡಿ ಜಿ ಶಾಂತನ ಗೌಡ್ರು ತಹಶೀಲ್ದಾರ್ ತಿರುಪತಿ ಪಾಟೀಲ್ ಕರ್ನಾಟಕ ರಾಜ್ಯಗ್ರಾಮ ಪಂಚಾಯಿತಿ ಸದಸ್ಯರ ಮಹ ಒಕ್ಕೂಟದ ರಾಜ್ಯ ಸಹಕಾರ್ಯದರ್ಶಿಯಾದ ರೇಖಾ ಲೋಕೇಶ್ ಕಿಚಡಿ ಹಾಗೂ ತಾಲೂಕು ಅಧ್ಯಕ್ಷರಾದ ಶ್ವೇತಬಸವರಾಜ್ ಚಂದ್ರಕಲಾ, ಯುವರಾಜ್ ಎಂ ಜೆ ಮಂಜ ನಾಯ್ಕ ಸುರೇಶ್ ಕಿರಣ್ ಹಾಗೂ ವಿವಿಧ ಕ್ಷೇತ್ರದ ಮುಖಂಡರುಗಳು ಪಾಲ್ಗೊಂಡಿದ್ದರು.