ಮೂಡಲಗಿ:ಆ,15- ತಾಲೂಕಿನ ಶಿವಾಪುರ (ಹ) ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಮೂಡಲಗಿ ತಾಲೂಕಾ ಪಂಚಾಯತಿ ಹಾಗೂ ಶಿವಾಪುರ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅಡಿಯಲ್ಲಿ “ನಮ್ಮ ನೆಲ ನಮ್ಮ ದೇಶ” ಮನರೇಗಾ-ಮಹಿಳೆಯರು ಹಾಗೂ ಪಂಚ ಪ್ರಜಾ ಆಸ್ತಿ ಅಭಿಯಾನದ ಕಾರ್ಯಕ್ರಮವನ್ನು ಮಂಗಳವಾರ ರಾಜ್ಯಸಭಾ ಸದಸ್ಯರಾದ ಶ್ರೀ ಈರಣ್ಣ ಕಡಾಡಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಣ್ಣು ಸಂಗ್ರಹ, ಸಸಿ ನೆಡುವುದು, ಶಿಲಾ ಫಲಕ ಅನಾವರಣ, ಮಾಜಿ ಸೈನಿಕರು ಹಾಗೂ ಹುತಾತ್ಮ ಸೈನಿಕರ ಕುಟುಂಬವನ್ನು ಸನ್ಮಾನಿಸಿ, ಮಾತನಾಡಿದ ಮಾನ್ಯರು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 76 ವರ್ಷಗಳಾಗಿವೆ. ದೇಶಕ್ಕೆ ಸ್ವಾತಂತ್ರ್ಯ ಸುಮ್ಮನೆ ಸಿಕ್ಕಿಲ್ಲ. ತ್ಯಾಗ, ಬಲಿದಾನ ಫಲವಾಗಿ ಸ್ವಾತಂತ್ರ್ಯ ಸಿಕ್ಕಿದೆ. ಇದನ್ನು ನಾವು ಮರೆಯುತ್ತಿದ್ದೇವೆ. ಸ್ವಾತಂತ್ರ್ಯ ಆಚರಣೆ ಮಾಡುವ ಸಂದರ್ಭದಲ್ಲಿ ನೆನೆಪು ಮಾಡಿಕೊಳ್ಳಬೇಕಿದೆ. ನಮ್ಮ ದೇಶಕ್ಕೆ ಬ್ರಿಟಿಷರು ವ್ಯಾಪಾರ ಮಾಡಲು ಬಂದಿದ್ದರು. ಫಲವತ್ತಾದ ಮಣ್ಣು ಇದೆ. ಮುತ್ತು ರತ್ನಗಳನ್ನು ತುಂಬಿಕೊಂಡು ಸಂಪತ್ತು ಭರಿತ ನಾಡಾಗಿತ್ತು. ಇದನ್ನು ಕಂಡು ಬ್ರಿಟಿಷ್ ರು ನಮ್ಮ ದೇಶವನ್ನು ಆಳಿ ಲೂಟಿ ಮಾಡಿದರು. ಅವರನ್ನು ದೇಶದಿಂದ ತೊಲಗಿಸಲು ದೇಶಾದ್ಯಂತ ಹೋರಾಟ ಮಾಡಿದ್ದಾರೆ. ಅಂದು ದೇಶಕ್ಕಾಗಿ ಕಷ್ಟಪಟ್ಟು ಸ್ವಾತಂತ್ರ್ಯ ಪಡೆದಿದ್ದಾರೆ. ನಮ್ಮ ಸೈನಿಕರು ಜೀವದ ಹಂಗು ತೊರೆದು ಹೋರಾಟ ಮಾಡುವುದರಿಂದ ನಾವೆಲ್ಲರೂ ಅರಾಮ ಇದ್ದೇವೆ. ನಮ್ಮ ನೆಲ, ನಮ್ಮ ದೇಶದ ಮೇಲೆ ಅಭಿಮಾನ ಇರಬೇಕು ಎಂದು ತಿಳಿಸಿದರು.
ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ “ಮೇರಿ ಮಿಟ್ಟಿ ಮೇರಾ ದೇಶ” ಕಾರ್ಯಕ್ರಮದಿಂದ 7500 ಗಿಡ ಬೆಳೆಸುವುದು. ದೇಶದ ಎಲ್ಲೆಡೆಯಿಂದ ತಂದಿರುವ ಮಣ್ಣು ಸಂಗ್ರಹಿಸಿ ಸ್ಮಾರಕ ನಿರ್ಮಾಣ ಮಾಡಲಾಗುತ್ತಿದೆ. ಜಗತ್ತಿಗೆ ಸ್ಪರ್ಧೆ ನೀಡುವಂತಹ ವಿಮಾನ ನಿಲ್ದಾಣಗಳು ನಮ್ಮ ದೇಶದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ನೀಡುವಂತಹ ಯೋಜನೆ, ಸಾವಿರಾರು ಕಿಮೀ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಹಳ್ಳಿಗಳು ನಿರ್ಮಿಸಲಾಗಿದೆ. ದೇಶದ ಕ್ರಾಂತಿಕಾರಿ ಬದಲಾವಣೆಗೆ ಸಾರ್ವಜನಿಕರ ಭಾಗವಹಿಸುವಿಕೆ ಬಹುಮುಖ್ಯವಾಗಿದೆ ಎಂದರು ರಾಜ್ಯ ಸಭಾ ಸದಸ್ಯರಾದ ಈರಣ್ಣ ಭೀ ಕಡಾಡಿ ಹೇಳಿದರು.
ಈ ವೇಳೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಫ್.ಜಿ.ಚಿನ್ನನವರ, ಮಾನ್ಯ ಸಹಾಯಕ ನಿರ್ದೇಶಕರಾದ (ಗ್ರಾಉ) ಸಂಗಮೇಶ ರೊಡ್ಡನ್ನವರ ಮಾನ್ಯ ಸಹಾಯಕ ನಿರ್ದೇಶಕರು (ಪಂರಾ) ಚಂದ್ರಶೇಖರ್ ಬಾರ್ಕಿ, ತಾಂತ್ರಿಕ ಸಂಯೋಜಕರಾದ ನಾರ್ಗಾಜುನ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಬಬಲಿ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಎಸ್ ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ತಾಂತ್ರಿಕ ಸಹಾಯಕರು, ಬಿಎಫ್ ಟಿಗಳು, ಗ್ರಾಮ ಕಾಯಕ ಮಿತ್ರರು, ಶಾಲಾ ಮಕ್ಕಳು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here