ವಿಜಯಪುರ:ವಿಜಯಪುರ ತಾಲೂಕಿನ ಹೊನಗನಹಳ್ಳಿ ಮತ್ತು ಸವನಹಳ್ಳಿ ಅವಳಿಗ್ರಾಮಗಳು ಕೊಳಕು ಮನಸ್ಥಿತಿಯ ರಾಜಕಾರಣಿಗಳ ಒಳಸಂಚಿನಿಂದ ಗ್ರಾಮಸ್ಥರ ಮನಸ್ಥಾಪಹೆಚ್ಚಾಗಿ ಅಶಾಂತಿ ನಿರ್ಮಾಣ ವಾಗುತ್ತಿರುವುದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮವಹಿಸುವಂತೆ ಗ್ರಾಮಸ್ಥರ ಒತ್ತಾಯವಾಗಿದೆ.
ಹೊನಗನಹಳ್ಳಿ ಮತ್ತು ಸವನಹಳ್ಳಿ ಗ್ರಾಮಗಳು ಅವಳಿಗ್ರಾಮಗಳು ಇವು ಎರಡೂ ಗ್ರಾಮಗಳು ಪರಸ್ಪರ ಹೊಂದಾಣಿಕೆ ಸಹಬಾಳ್ವೆಯ ಶಾಂತಿಯ ತೋಟವಾಗಿದೆ.ಈ ಎರಡು ಗ್ರಾಮಗಳಿದ್ದರೂ ಒಂದೇ ಗ್ರಾಮಪಂಚಾಯತಿ,ಒಂದೇ ಪ್ರಾಥಮಿಕ ಶಾಲೆ,ಒಂದೇ ಪ್ರೌಢಶಾಲೆ,ಒಂದೇ ಪಶು ಆಸ್ಪತ್ರೆ,ಒಂದೇ ಬ್ಯಾಂಕು,ಒಂದೇ ರೈತ ಸಹಕಾರ ಸಂಘ ಹೀಗೆ ಎಲ್ಲವೂ ಒಮ್ಮತದ ಒಂದೇ ಜೀವ ಎರಡು ದೇಹಗಳಂತೆ ಪೂರ್ವಿಕರಿಂದಲೂ ನಡೆದುಕೊಂಡು ಬಂದ ಸಂಪ್ರದಾಯ, ಇವು ವಿಜಯಪುರ ದಿಂದ ಕೇವಲ ಹದಿನೇಳು ಕಿಲೋಮೀಟರ್ ಗಳಷ್ಟೇ ಅಂತರದಲ್ಲಿದ್ದರೂ ಸಹ ಈ ಗ್ರಾಮಗಳು ನಲವತ್ತು ಕಿಲೋಮೀಟರ‍್ಗಳಷ್ಟು ದೂರದಲ್ಲಿರುವ ಬಸವನಬಾಗೇವಾಡಿ ವಿಧಾನಸಭೆ ಕ್ಷೇತ್ರಕ್ಕೆ ಸೇರ್ಪಡೆಯಿಂದಾಗಿ ಅಭಿವೃದ್ಧಿವಂಚಿತವಾಗಿದ್ದವು.ನಂತರ ಹಾವು ಹೊಡೆದು ಹದ್ದಿಗೆ ಹಾಕಿದರು ಎಂಬಂತೆ ಮತ್ತೆ ಈ ಗ್ರಾಮಗಳನ್ನು ಬಸವನಬಾಗೇವಾಡಿ ವಿಧಾನಸಭೆಯ ಕ್ಷೇತ್ರದಿಂದ ಬೇರ್ಪಡಿಸಿ ಹಿಂದೆ ಇದ್ದಂತೆಯೇ ಮತ್ತೆ ಅದೇ ನಲವತ್ತು ಕಿಲೋಮೀಟರ್ ಗಳ ಅಂತರದಲ್ಲಿರುವ ನೂತನ ಬಬಲೇಶ್ವರ ಮತಕ್ಷೇತ್ರಕ್ಕೆ ಸೇರಿಸುವುದರಜೋತೆಗೆ ಮತ್ತೊಂದು ಬರೆ ಎಳೆದು ಹದಿನೇಳು ಕಿಲೋಮೀಟರ್ ಅಂತರದಲ್ಲಿದ್ದ ವಿಜಯಪುರ ತಾಲೂಕಿನಿಂದ ಬೇರ್ಪಡಿಸಿ ನಲವತ್ತು ಕಿಲೋಮೀಟರ್ ಅಂತರದ ಬಬಲೇಶ್ವರ ನೂತನತಾಲೂಕಿಗೆ ಸೇರಿಸಿ ಇಡೀ ಎರಡೂ ಗ್ರಾಮದ ರೈತಸಮೂದಾಯ ಮತ್ತು ಎಲ್ಲಾಜಾತಿವರ್ಗದ ಸಮುದಾಯದ ಜನಸಾಮಾನ್ಯರ ಸರ್ಕಾರಿ ಕೆಲಸಕಾರ್ಯಗಳಿಗೆ ಅನಾನೂಕೂಲ ಮಾಡಿದ್ದರು ಸುಮಾರು ವರ್ಷಗಳಿಂದ ಇದರ ನೋವು ಅನುಭವಿಸಿದ ಜನರು ಪಕ್ಷಾತೀತವಾಗಿ ಜನರು ಒಂದಾಗಿ ಹೋರಾಟ ಮಾಡುವುದರ ಮುಖಾಂತರ ಮತ್ತೆ ಮರಳಿ ವಿಜಯಪುರ ತಾಲೂಕಿಗೆ ಸೇರುವಂತೆ ಮಾಡಿದರು.

ಇದೂ ಕೂಡಾ ಇನ್ನೂ ಪರಿಪೂರ್ಣವಾದ ಕೆಲಸಕಾರ್ಯಗಳು ವಿಜಯಪುರಕ್ಕೆ ವರ್ಗಾವಣೆಯಾಗಿಲ್ಲಾ ಕೆಲವು ಸರಕಾರಿ ಕೆಲಸ ಕಾರ್ಯಗಳಿಗೆ ರೈತ ಸಮುದಾಯಕ್ಕೆ ತೊಂದರೆಯಾಗುತ್ತಿದೆ ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು ಮತ್ತು ಬಬಲೇಶ್ವರ ಮತ ಕ್ಷೇತ್ರದಿಂದ ನಮ್ಮ ಗ್ರಾಮಗಳು ನಿರ್ಲಕ್ಷಕ್ಕೆ ಒಳಗಾಗಿ ಅಭಿವೃದ್ಧಿಕಾರ್ಯಗಳು ಆಗುತ್ತಿಲ್ಲವಾದ್ದರಿಂದ ನಮ್ಮ ಗ್ರಾಮಗಳನ್ನು ವಿಜಯಪುರ ಮತಕ್ಷೇತ್ರಕ್ಕೆ ವರ್ಗಾಯಿಸಬೇಕೆಂಬ ಒತ್ತಾಯವನ್ನೂ ಈ ಮೂಲಕ ವ್ಯಕ್ತಪಡಿಸುತಿದ್ದಾರೆ.
ಈ ಎರಡೂ ಗ್ರಾಮದ ಜನರು ಮುಗ್ದ ಮತ್ತು ಸೌಹಾರ್ಧತೆಯವರು ಎಲ್ಲಜಾತಿ ಧರ್ಮಗಳ ಜನರು ವಾಸವಾಗಿದ್ದಾರೆ ಅವರೆಲ್ಲರೂ ಜಾತಿಬೇಧವಿಲ್ಲದೆ ಅಕ್ಕ,ಅಣ್ಣ,ಅಳಿಯ,ಮಾವ ಹೀಗೆ ಮುಂತಾದ ಭಾವನಾತ್ಮಕವಾದ ಸಹೋದರತ್ವವನ್ನು ರಕ್ತಗತವಾಗಿ ಬೆಳಸಿಕೊಂಡು ಬಂದಿರುತ್ತಾರೆ.ಆದರೆ ಇತ್ತೀಚೆಗೆ ಕೊಳಕು ಮನಸ್ಥಿಯ ಹೀನ ರಾಜಕಾರೆಣಿಗಳ ಕುತಂತ್ರಗಳಿಂದಾಗಿ ಇವುಗಳಿಗೆ ತಿಲಾಂಜಲಿ ಬಂದೊದಗಿದೆ.


ಇವತ್ತಿನ ಘಟನೇಯೇ ಈ ಕೊಳಕು ರಾಜಕಾರಣಿಗಳ ಮನಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಇದನ್ನು ಗಮನವಿಟ್ಟು ಓದಿ ಅರ್ಥಮಾಡಿಕೊಳ್ರೀ.
ಅಗಸ್ಟ್ ಹದಿನೈದು ಸ್ವಾತಂತ್ರ ದಿನಾಚರಣೆ ಇವತ್ತು ಬೇಳಿಗ್ಗೆ ಯಷ್ಟೇ ನಾನು ಈ ಗ್ರಾಮಗಳನ್ನು ನೆನಪಿಸಿಕೊಂಡಿದ್ದೆ.ಆ ಗ್ರಾಮದಲ್ಲಿ ಆಚರಿಸುವಷ್ಟು ಸಿಸ್ತುಬದ್ಧ ಮತ್ತು ಸೌಹಾರ್ಧತೆಯಿಂದ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಬೇರೆಲ್ಲಿಯೂ ನಡೆಲಿಕ್ಕಿಲ್ಲಾ ಬಹಳ ಉತ್ಸಾಹ ಉಲ್ಲಾಸ ಸಂಪ್ರದಾಯ ಬದ್ಧವಾಗಿ ನಡೆದುಕೊಂಡು ಬರುತ್ತಿದೆ ಒಂದು ಈ ಕುರಿತು ಉತ್ತಮವಾದ ಬರಹಗಳ ಮೂಲಕ ಪರಿಚಯಿಸಬೇಕೆಂದು ಅಂದು ಕೊಡು ಮೂರುನಾಲ್ಕು ಗಂಡೆಗಳು ಕಳೆದಿರಲಿಲ್ಲಾ ಅಷ್ಟೊತ್ತಿಗೆ ನನಗೆ ಮೋಬೈಲ್ ಕಾಲ್ ಒಂದು ಬಂತು ಅದೇಗ್ರಾಮದಿಂದ!!ನನಗೆ ಮತ್ತಷ್ಟು ಖುಷಿಯಾಗಿ ಹಲೋಸರ ಕಾರ್ಯಕ್ರಮ ಮುಗಿಯಿತಾ?ಎಂದು ಕೇಳಿದೆ ಆಕಡೆಯಿಂದ ಬಂದ ಉತ್ತರ ಮಾತ್ರ ವ್ಯತಿರಿಕ್ತವಾಗಿತ್ತು ಅದನ್ನು ಕೇಳಿ ಬಹಳ ಮನಸ್ಸಿಗೆ ನೋವಾಯಿತು.
ಪ್ರತಿ ವರ್ಷ ಅಗಸ್ಟ್ ಹದಿನೈದರಂದು ನಡೆಯುವ ಕಾರ್ಯಕ್ರಮದ ಪೂರ್ವ ಸಿದ್ಧತೆಗಾಗಿ ಶಾಲಾಮಕ್ಕಳನ್ನು ಶಾಲಾ ಮಾಸ್ತರರು ವಿವಿಧ ಮನೋರಂಜನೆಗಳ ಆಟೋಪಚಾರಗಳನ್ನು,ಭಾಷಣಗಳನ್ನು ನಡೆಸಿ ಅವುಗಳನ್ನು ಸಭಿಕರ ಮುಂದೆ ಪ್ರದರ್ಶಿಸಿ ಬಹುಮಾನಗಳನ್ನು ವಿತರಿಸುವುದು ಅದಕ್ಕೂ ಮೊದಲು ಬೆಳಿಗ್ಗೆ ಏಳು ಗಂಟೆಗೆ ಶಾಲೆಯ ಎಲ್ಲಾಮಕ್ಕಳು ಬಿಳಿ ಸಮವಸ್ತ್ರ ಧರಿಸಿ ಕೈಯಲ್ಲಿ ರಾಷ್ಟçಧ್ವಜ ಹಿದಿದು ಡ್ರಮ್ ಸೆಟ್ ಗಳನ್ನು ಭಾರಿಸುತ್ತಾ ಎರಡೂ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಪ್ರಭಾತ್ಬೇರಿನಡೆಸಿ ಇಡೀ ಎರಡೂ ಗ್ರಾಮಗಳಲ್ಲಿ ಹಬ್ಬದ ವಾತಾವರಣ ನಿರ್ಮಿಸಿ ಪಥ ಸಂಚಲನದ ಮೂಲಕ ಶಾಲೆಗೆ ತೆರಳಿ ಅಲ್ಲಿ ಶಾಲಾ ಮಾಸ್ತರರುಗಳು,ಊರಿನಗಣ್ಯ ಮಾ ನ್ಯರು,ಗುರುಹಿರಿಯರು,ವಿವಿಧ ರಂಗಗಳಲ್ಲಿ ಸಾಧನೆಗೈದ ಸಾಧಕರ ಸಾಲುಗಳು ಕುಳಿತಿದ್ದರೆ ನೋಡಲು ಕಣ್ಣುಗಳೆರಡು ಸಾಲುತ್ತಿರಲಿಲ್ಲಾ.

ಈ ಕಾರ್ಯಕ್ರಮದಲ್ಲಿ ಊರಿನ ಗನ್ಯಾಥಿತಿಗಳನ್ನು ಒಂದು ವಾರದ ಮೋದಲೇ ಶಾಲಾ ಸುಧಾರಣಾ ಸಮಿತಿಯವರು ಗೊತ್ತುಪಡಿಸಿ ಅವ್ಹಾಣ ನೀಡಿಬರುತಿದ್ದರು ಅದರಂತೆ ಎಲ್ಲರೂ ಭಾಗ ವಹಿಸಿ ಎರಡೂ ಗ್ರಾಮಗಳ ಹಿರಿಯರು ಪಕ್ಷಾತೀತ ಮತ್ತು ಜಾತ್ಯತೀತ ವಾಗಿ ಭಾಷಣಗಳನ್ನು ಮಾಡಿದರೆ ಸಣ್ಣಪುಟ್ಟು ಇರುವ ವೈಮಸ್ಸುಗಳೆಲ್ಲಾ ಒಂದಾಗಿ ಪರಸ್ಪರರು ಹೊಗಳಿಕೆಯಮಾತುಗಳಿಂದ ಒಡೆದ ಮನಸ್ಸುಗಳೂ ಒಂದಾಗಿ ಸ್ನೇಹಭಾವ ಮತ್ತಷ್ಟು ಚಿಗುರೊಡೆಯುತ್ತಿದ್ದವು ಅಂಥ ದಿನ ಮತ್ತು ಸನ್ನಿವೇಶ ಗಳನ್ನು ನಾವು ಕಣ್ಣಾರೆ ಕಂಡ ಸಂತಸದ ಕ್ಷಣಗಳಾಗಿವೆ. ಆದರೆ ಇವತ್ತು ಅಗಸ್ಟ್ ಹದಿನೈದು ೨೦೨೩,ಇದಕ್ಕೆಲ್ಲಾ ತಿಲಾಂಜಲಿ ಇಟ್ಟು ಶಾಂತಿ ಕಾಪಾಡಬೇಕಾದ ಸರ್ಕಾರದ ಜವಾಬ್ದಾರಿವುಳ್ಳವರಿಂದಲೇ ಅಶಾಂತಿ ಸೃಷ್ಠಿಯಾಗಿರುವುದು ಬೇಸರದ ಸಂಗತಿ.


ಪ್ರತಿ ವರ್ಷದಂತೆ ನಡೆಯಬೇಕಾಗಿದ್ದ ದ್ವಾಜಾರೋಹಣ ಮತ್ತು ಕಲೆ,ಕ್ರೀಡೆ,ಸಂಸ್ಕೃತಿ,ಭಾಷಣ,ಪ್ರಾಭಾತ್ಬೇರಿ ಎಲ್ಲವುದಕ್ಕೂ ತಿಲಾಂಜಲಿ ಇಟ್ಟಿದ್ದರಿಂದ ಹಬ್ಬದ ವಾತಾವರಣ ಹೋಗಿ ರೌದ್ರಾವತಾರ ತಾಳಿರುವುದನ್ನು ನಿರ್ಮಿಸಿದವರು ಈ ಯುವ ಪೀಳಿಗೆಗೆ ಯಾವ ಸಂದೇಶ ಬೀರಿದರು ಎಂದು ಸ್ಪಸ್ಟ ಪಡಿಸಬೇಕು.ಹೂವಿನಂತಿದ್ದ ಗ್ರಾಮಸ್ತರ ಮನಸ್ಸಲ್ಲಿ ಹಲಾಹಲ ಹುಟ್ಟು ಹಾಕಲು ಕಾರಂಗಳೇನಿರಬಹುದುದೆಂಬುದನ್ನು ಜಿಲ್ಲಾಧಿಕಾರಿಗಳು ಬಯಲಿಗೆಳೆಯಬೇಕು.ಸಾಲಾಸುಧಾರಣಾ ಸಮಿತಿ ಅಧ್ಯಕ್ಷನನ್ನು ದೂರವಿಟ್ಟು ಪೋಲೀಸ್ ಬಂದೂ ಬಸ್ತನಲ್ಲಿ ಶಾಳೆಯ ಮುಖ್ಯೋಪಾಧ್ಯರಿಂದ ದ್ವಜಾ ರೋಃಣ ಮಾಡಿಸುವ ಔಚಿತ್ಯವೇನಿತ್ತು?ಹಿಂದಿನ ಸಂಪ್ರದಾಯಗಳಿಗೆ ತಿಲಾಂಜಲಿ ಇಟ್ಟು ಸೌಹಾರ್ಧತೆಯ ಸ್ವಾತಂತ್ರ್ಯೋತ್ಸವ ಆಚರಿಸಲು ಕಾರಣಗಳೇನು? ಅಭಿವೃದ್ಧಿ ಮತ್ತು ಜನರ ಸಮಸ್ಯಗಳ ಪರಿಹರಿವುದಕ್ಕಿಂತ ಹೆಚ್ಚಾಗಿ ಸ್ವಾರ್ಥಕ್ಕಾಗಿ ಇಂಥಾ ಸನ್ನಿವೇಶ ನಿರ್ಮಾಣ ಸೃಷ್ಠಿಸುವುದಕ್ಕಾಗಿಯೇ ನೂತನ ಮುಖ್ಯೋಪಾಧ್ಯಾಯರನ್ನು ಇಲ್ಲಿಗೆ ವರ್ಗಾಯಿಸಲಾಯಿತೇ? ಇದರ ಹಿಂದಿನ ಉದ್ದೇಶಗಳೇನು ಜಿಲ್ಲಾಧಿಕಾರಿಗಳು ಕೂಡಲೇ ತನಿಖೆ ನಡೆಸಬೇಕು .ಇಲ್ಲದಿದ್ದರೆ ರಾಜ್ಯ ಮುಖ್ಯಮಂತ್ರಿ ಗೃಹ ಮಂತ್ರಿ ಕಾನೂನು ಮಂತ್ರಿಗಳಲ್ಲದೆ  ನ್ಯಾಯಾಲಯಕ್ಕೂ ಹೋಗಲು ಎರಡೂ ಗ್ರಾಮಸ್ಥರು ಸಜ್ಜುಗೊಳ್ಳುತ್ತಿರುವುದಕ್ಕೆ ಜಿಲ್ಲಾಧಿಕಾರಿಗಳೇ ಹಗೊಣೆ ಹೊರಬೇಕಾಗುತ್ತದೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಈ ಮುಖಾಂತರ ಮನವಿ ಮಾಡಿಕೊಳ್ಳುತಿದ್ದಾರೆ.

LEAVE A REPLY

Please enter your comment!
Please enter your name here