ಕಳೆದ 12ರಂದು ಈರ್ವರು ಹಿಳೆಯರು ಕೊಪ್ಪದಿಂದ ಹರಿಹರಪುರಕ್ಕೆ 10 ಕಿಮೀ ಖಾಸಗಿ ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ ಇವರು ಪಾವತಿಸಿರುವ _17+17 ಮೊತ್ತ 34 ರೂಪಾಯಿಗಳು ಇವರುಗಳು ಮರಳಿ ತಮ್ಮ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಹರಿಹರ ಪುರದಿಂದ ಕೊಪ್ಪದಲ್ಲಿ ಇಳಿದಿದ್ದಾರೆ ಈ ಬಸ್ ನಿರ್ವಾಹಕರು ಶಕ್ತಿ ಯೋಜನೆಯಡಿ ಟಿಕೆಟ್ ನೀಡಿದ್ದು ಟಿಕೆಟ್ ನಲ್ಲಿ ಕೊಪ್ಪ ದಿಂದ ಶಿವಮೊಗ್ಗ ಎಂದು ನಮೂದಿಸಿ ಪ್ರತಿ ಪ್ರಯಾಣಿಕೆ ಕರಿಗೆ 90 ರೂ ಗಳಂತೆ 180ಗಳನ್ನು ನಮೂದಿಸಿ ನಿಯಮದಂತೆ ಮೊತ್ತ ಶೂನ್ಯ ಮಾಡಿ ನೀಡಿದ್ದಾರೆ, ಈ ಪ್ರಯಾಣಿಕರು ಶಿವಮೊಗ್ಗಕ್ಕೆ ಪ್ರಯಾಣವನ್ನೇ ಬೆಳೆಸಿಲ್ಲ 10 ಕಿ.ಮೀ ಪ್ರಯಾಣಿಸಿದ ಪ್ರಯಾಣಿಕರಿಂದ ತಲಾ 90 ರೂಪಾಯಿಗಳಂತೆ ಸರ್ಕಾರದಿಂದ ಕಸಿದುಕೊಳ್ಳುವ ಈ ನಿರ್ವಾಹಕನ ತಂತ್ರಗಾರಿಕೆ ಮಾರ್ಗದರ್ಶನ ಕೊಡುತ್ತಿರುವ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳ ಬಗ್ಗೆ ಶಿಸ್ತು ಕ್ರಮವನ್ನು ಕೈಗೊಳ್ಳುವ ಅಗತ್ಯವಿದೆ ಈ ರೀತಿ ಆನೇಕಡೆ ಆಗುತ್ತಿರಬಹುದು ಸಾರಿಗೆ ಸಂಸ್ಥೆ ನಿರ್ವಾಹಕರ ಮೇಲೆ ಸರ್ಕಾರದ ಕಣ್ಗಾವಲು ಅಗತ್ಯವಿದೆ ಇಲ್ಲವಾದಲ್ಲಿ . ಸರ್ಕಾರಿ ಬೊಕ್ಕಸುವನ್ನೇ ಖಾಲಿ ಮಾಡುತ್ತಾರೆ.

LEAVE A REPLY

Please enter your comment!
Please enter your name here