ಬೆಂಗಳೂರು ನಗರ ಜಿಲ್ಲೆ, ಆಗಸ್ಟ್ 04: ಸಾರಿಗೆ ಇಲಾಖೆ ವತಿಯಿಂದ ಬೆಂಗಳೂರಿನ ಹೆಚ್.ಎಸ್.ಆರ್
ಲೇಔಟ್ನ ಪ್ರಾದೇಶಿಕ ಕಚೇರಿಯಲ್ಲಿ ಆಗಸ್ಟ್ 3 ರಂದು ನಡೆದ ಕೆಎ-01/ಎನ್ ಬಿ, ಆಕರ್ಷಕ ಸಂಖ್ಯೆಗಳ ಸಾರ್ವಜನಿಕ ಬಹಿರಂಗ ಹರಾಜಿನಲ್ಲಿ ಒಟ್ಟು ರೂ. 61,63,000 ಗಳ ರಾಜಸ್ವ ಸಂಗ್ರಹಿಸಲಾಯಿತು.
ಈ ಬಹಿರಂಗ ಹರಾಜಿನಲ್ಲಿ 28 ಮುಂಗಡ ಸಂಖ್ಯೆಗಳನ್ನು ಹರಾಜು ಮಾಡಲಾಗಿದ್ದು, ಪ್ರತಿ ನೋಂದಣಿ ಸಂಖ್ಯೆಗೆ ಅರ್ಜಿ ಶುಲ್ಕ ರೂ. 75000 ಸೇರಿದಂತೆ ಕೆಎ -01/ಎನ್.ಬಿ – 0001 ಸಂಖ್ಯೆಗೆ ರೂ. 19,25,000, ಕೆಎ -01/ಎನ್ ಬಿ -8055 ಸಂಖ್ಯೆಗೆ ರೂ. 5,15,000, ಕೆಎ -01/ಎನ್ ಬಿ-9999 ಸಂಖ್ಯೆಗೆ ರೂ. 5,05,000, ಕೆಎ -01/ಎನ್ ಬಿ- 6666 ಸಂಖ್ಯೆಗೆ ರೂ. 4,25,000 ., ಕೆಎ -01/ಎನ್ ಬಿ-0009 ಸಂಖ್ಯೆಗೆ ರೂ. 3,70,000., ಕೆಎ -01/ಎನ್ ಬಿ-0999 ಸಂಖ್ಯೆಗೆ ರೂ. 2,00,000, ಮತ್ತು ಕೆಎ -01/ಎನ್ ಬಿ-0666 ಸಂಖ್ಯೆಗೆ ರೂ. 1,80,000 ಗಳ ಬಿಡ್ ಮೊತ್ತಕ್ಕೆ ಹರಾಜು ಮಾಡಲಾಯಿತು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.