ಮೂಡಲಗಿ:ಜು,21-ಇವಾಗ ತಾಸೀಗೆ ಸುಮಾರು ನಾಲ್ಕು ಲಕ್ಷಕ್ಕಿಂತ ಹೆಚ್ಚು ಹಣವನ್ನು ವೆಚ್ಚ ಅಧಿವೇಶನಕ್ಕಾಗಿ ಖರ್ಚು ಮಾಡಲಾಗದೆ.ನಿನ್ನೆ ದಿವಸ ಅಧಿವೇಶನದಲ್ಲಿ ಶಿಷ್ಟಾಚಾರ ಆತಿಥ್ಯ ಸತ್ಕಾರ ವಿಷಯದ ಬಗ್ಗೆ ಇಡೀ ಸದನದ ಕಲಾಪವೇ ಗದಲದಿಂದ ಹಾಳಾಯಿತು.ಈಗಾಗಲೇ ಹೊರರಾಜ್ಯದಿಂದ ಗಣ್ಯರಿಗೆ ಗೌರವಾನಿತ ಮುಖ್ಯ ಮಂತ್ರಿ ವಿಶೇಷ ಭೋಜನ 3ಕೋಟಿ17ಲಕ್ಷ 62ಸಾವಿರ ಯಾವ ರೀತಿ ಖರ್ಚ ಆಗಿದೆ ಎಂದು.ಶಿಷ್ಟಾಚಾರ ಇದು ವರೆಗೆ ಯಾವುದೇ ಸದನದಲ್ಲಿ ಯಾರು ಚರ್ಚೆ ಮಾಡಿಲ್ಲ.ನಾಡಿನ ಅಭಿವೃದ್ಧಿ ಆಗಲಿ, ಜನರ ತೆರಿಗೆ ಹಣ ದುರುಪಯೋಗ ಆಗದಿರಲಿ.ಒಂದು ಊಟಕ್ಕೆ 6136 ಸಾವಿರ (ಆರು ಸಾವಿರದ ಒಂದು ನೂರಾಮೂವತ್ತಾರು ರೂಪಾಯಿ)(ಹೊರಗಿನಿಂದ ಅಧ್ಯಯನ ಕಮೀಟಿಗೆ ಬಂದಾಗ ಒಬ್ಬರಿಗೆ ಒಂದು ಊಟದ ಖರ್ಚು)ಸಾರ್ವಜನಿಕರ ಅಭಿಪ್ರಾಯ ಅವರು ತಿಂದಿದಾದರೂ ಏನೂ/ಹೆಂತ ಊಟ ಅದು.ಶಿಷ್ಟಾಚಾರ ಕಡಿವಾಣ ಹಾಕಬೇಕೆಂದು ಸಾರ್ವಜನಿಕಜನಿಕರ ಪರವಾಗಿ ಮುಖ್ಯ ಮಂತ್ರಿಗಳಲ್ಲಿ ವಿನಂತಿಸುತ್ತೇನೆ.
ಅತಿಥಿ ವೆಚ್ಚಕ್ಕಾಗಿ 23-10-2013 ರಂದು 14 ನೆಯ ಆರ್ಥಿಕ ಆಯೋಗ ಮಾನ್ಯ ಅಧ್ಯಕ್ಷ ಹಾಗೂ ಸದಸ್ಯರು ರಾಜ್ಯಕ್ಕೆ ಬೇಟಿ ನೀಡಿದಾಗ,ಇವರ ಆತಿಥ್ಯಗಾಗಿ 21ಲಕ್ಷ, 72ಸಾವಿರ,556ರೂಪಾಯಿ (ಇಪ್ಪತ್ತೊಂದು ಲಕ್ಷ ಎಪ್ಪತ್ತೆ ರಡು ಸಾವಿರದಾ ಐದು ನೂರಾ ಐವತ್ತಾರು) ರೂಪಾಯಿಗಳು. 2014ರಲ್ಲಿ ಐಸಿಸಿ ವಿನ್ಸರ್ ಮ್ಯಾನರ್ ಹೊಟೇಲ ಸ್ವಾತಂತ್ರ್ಯ ದಿನಾಚರಣೆ ದಿವಸ ಚಹಾ ಹಾಗೂ ಔತಣ ಕೂಟಕ್ಕೆ 11ಲಕ್ಷ 34 ಸಾವಿರದಾ 392(ಮೂರನೂರಾ ತೊಂಬತ್ತೆರಡು)ರೂಪಾಯಿ ಈ ರೀತಿಯಾಗಿ ಸಾರ್ವಜನಿಕರ ತೆರಿಗೆ ಹಣ ಖರ್ಚ ಆದರೆ ಹೇಗೆ ಎಂದು ಜನರ ಪರವಾಗಿ ಜನ ಪ್ರತಿನಿಧಿಗಳನ್ನು ಕೇಳಬೇಕಾಗುತ್ತದೆ.ಹೊರ ರಾಜ್ಯಗಳಿಂದ ಬರುವವರೆಗೆ 3 ಕೋಟಿ17ಲಕ್ಷ ಈ ರೀತಿ ಖರ್ಚ ಮಾಡಲು ನಿಯಮಾವಳಿಗೆ ಅನುಮೋದನೆ ಇದೆಯಾ?ಎಂಬುದು ಕಲಾಪದಲ್ಲಿ ಚರ್ಚೆ ಆಗಬೇಕು.ನಿಮ್ಮ ಸ್ವಂತ ಹಣ ಖರ್ಚು ಮಾಡಿ,ಜನರ ತೆರಿಗೆ ಹಣ ದಯವಿಟ್ಟು ರಾಜ್ಯದ ಅಭಿವೃದ್ಧಿಗೆ ಉಪಯೋಗ ಆಗಬೇಕೆಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಜನಪ್ರತಿನಿಧಿಗಳಿಗೆ ಜನರ ಪರವಾಗಿ ಪತ್ರಿಕಾ ಪ್ರಕಟಣೆ ಮೂಲಕ ಕೇಳಿದ್ದಾರೆ.