ಮೂಡಲಗಿ: ಜು,20-ನಾಲ್ಕೈದು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಬತ್ತಿ ಹೋಗಿದ್ದ ಹಳ್ಳ-ಕೊಳ್ಳ ಜಿಲ್ಲೆಯಲ್ಲಿ ಹರಿಯುತ್ತಿರುವ ನದಿಗಳ ನೀರಿನಮಟ್ಟ ಏರಿಕೆಯಾಗುತ್ತಿರುವುದು.
ಖಾಲಿಯಾಗಿದ್ದ ಹಿಡಕಲ್ ಜಲಾಶಯಕ್ಕೆ ಒಂದೇ ದಿನ 5 ಅಡಿ ನೀರು ಬಂದಿದೆ.ಶತಮಾನದ ವಿಠ್ಠಲ ದೇವಸ್ಥಾನ 12 ವರ್ಷಗಳ ನಂತರ ಸಂಪೂರ್ಣವಾಗಿ ಗೋಚರವಾಗಿ ಎರಡು ಮೂರುವಾರಗಳ ಕಾಲ ದಿನ ನಿತ್ಯ ಸಾವಿರಾರು ಭಕ್ತರಿಂದ ಪೂಜೆ ನಡೆದಿದ್ದ ವಿಠ್ಠಲ ಮಂದಿರ ನೀರಿನ ಮಟ್ಟ ಹೆಚ್ಚಾದ ಕಾರಣ ಮತ್ತೆ ದೇಗುಲ ಮುಳುಗುತ್ತಿರುವುದು.ಇದೆ ಕಾರಣಕ್ಕೆ
ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಹರಿಯುವ ಘಟಪ್ರಭಾ ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿರುವುದು,ನದಿಯ ದಂಡೆಯಲ್ಲಿರುವ ಗ್ರಾಮಸ್ಥರು ಎಚ್ಚರವಾಗಿರಲು ಸೂಚಿಸಲಾಗಿದೆ.
ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದರೆ ದಾಟುವ ಯತ್ನ ಯಾರು ಮಾಡಬೇಡಿ. ಎಸ್ಪಿ ಡಾllಸಂಜೀವ ಪಾಟೀಲ ಸೇತುವೆಗಳನ್ನು ಗುರ್ತಿಸಿ ಎರಡು ಬದಿ ಬ್ಯಾರಕೇಡ್ ಹಾಕಿ ಪ್ರವೇಶ ನಿರ್ಬಂಧಿಸಿದ್ದು 24 ಗಂಟೆ ಪೊಲೀಸ್ ಬಂದೋಬಸ್ತ ಏರ್ಪಡಿಸಿದ್ದಾರೆ.