ಮೂಡಲಗಿ: ಜು,20-ಖಜಕಿಸ್ತಾನದಲ್ಲಿ ನಡೆದ ಅಂತರಾಷ್ಟ್ರೀಯ “ಐರಾನ್ ಮ್ಯಾನ್” ಸ್ಪರ್ಧೆಯಲ್ಲಿ ವಿಜೇತರಾದ ಸಿಪಿಐ ಶ್ರೀ ಶೈಲ ಬ್ಯಾಕೂಡ ಅವರನ್ನು ಕುಲಗೋಡ ಪೋಲಿಸ್ ಠಾಣೆಯಿಂದ ಸತ್ಕರಿಸಲಾಯಿತು. ಸತ್ಕಾರ ಸ್ವೀಕರಿಸಿದ ಸಿಪಿಐ ಶ್ರೀಶೈಲ ಬ್ಯಾಕೂಡ ಮಾತನಾಡಿ,ಕಠಿಣ ಶ್ರಮ,ಅಧಿಕಾರಿಗಳ ಸಹಾಯ ಈ ಸಾಧನೆ ಕಾರಣ .ಪ್ರತಿಯೊಬ್ಬರು ಎತ್ತರಕ್ಕೆ ತಕ್ಕಂತೆ ತೂಕ ಹೊಂದಿ,ಶುಧ್ಧ ಆಹಾರ ಪದ್ದತಿ ಪಾಲಿಸಬೇಕು. ಇಲಾಖೆಯ ಸಿಬ್ಬಂದಿ ವರ್ಗ ಯೋಗ ,ವ್ಯಾಯಮ ಮಾಡಿದರೆ ಮನಸ್ಸು ಶರೀರ ಹತೋಟಿಯಲ್ಲಿ ಇಟ್ಟುಕೊಳ್ಳಬಹುದು ಎಂದು ಹೇಳಿದರು. ಶ್ರೀಶೈಲ ಬ್ಯಾಕೂಡ ಅವರು ಅಮೋಘ ಸಾಧನೆ ಮಾಡಿದ್ದು ಇಲಾಖೆಗೆ ಸ್ಫೂರ್ತಿ ತಂದಿದ್ದಾರೆ ಎಂದು ಕುಲಗೋಡ ಪಿ ಎಸ್ ಐ ಗೋವಿಂದ ಕೊಪ್ಪದ ಸಂತೋಷ ವ್ಯಕ್ತ ಪಡಿಸಿದರು.ಗೋವಿಂದ ಕೊಪ್ಪದ ಮಾಜಿ ಸದಸ್ಯರು ಜಿಪಂ, ಸತೀಶ ವಂಟಗೂಡಿ,ಪ್ರಕಾಶ ಬೀಸನಕೊಪ್ಪ,ಶಿವನಗೌಡ ಪಾಟೀಲ, ಎ.ಡಿ.ಕೊಪ್ಪದ,ಎ.ವಿ.ಹಣಜಿ,ರಮೇಶ ನಾಯಿಕ,ಸಿ.ಎಸ್.ಹಿರೇಮಠ, ವಾಯ್.ಎನ್.ಸಾಂಗ್ಲಿ,ಎಮ್.ಜೆ.ಕಾಜಿ,ಎಲ್.ಎ.ನಾಯಿಕ,ಮಾಳಪ್ಪ ಆಡಿನ,ಎಸ್.ಎಸ್.ವಜ್ರಮಟ್ಟಿ,ಕಲ್ಮೇಶ ಬಾಗಲಿ,ಶ್ರೀಧರ ಮುಗ್ಗನ್ನವರ,ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಕುಲಗೋಡ ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.