ಕೆ ಆರ್ ಪೇಟೆ: ತಾಲೂಕಿನ ಕಸಬಾ ಹೋಬಳಿ ಹರಿಹರಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹೆಚ್ಎಸ್ ಮೋಹನ್ ಹಾಗೂ ನೂತನ ಉಪಾಧ್ಯಕ್ಷರಾಗಿ ಮರಿಯಯ್ಯ ಅವರು ಆಯ್ಕೆಯಾಗಿದ್ದಾರೆ.
ಹರಿಹರಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಿಂದಿನ ಅಧ್ಯಕ್ಷ ರೇವಣ್ಣ ಹಾಗೂ ಉಪಾಧ್ಯಕ್ಷರಾಗಿದ್ದ ತಮ್ಮಯ್ಯ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿತ್ತು. ಅಧ್ಯಕ್ಷ ಉಪಾಧ್ಯಕ್ಷರ ನಡೆದ ಚುನಾವಣೆಯಲ್ಲಿ ಮೋಹನ್ ಮತ್ತು ಮರಿಯಯ್ಯ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರವನ್ನು ಸಲ್ಲಿಸದ ಕಾರಣದಿಂದಾಗಿ ಚುನಾವಣಾಧಿಕಾರಿಗಳಾದ ಆಶಾ ಅವರು ಮೋಹನ್ ಕುಮಾರ್ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಮರಿಯಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಪ್ರಕಟಿಸಿದರು..
ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೋಹನ್ ಹಾಗೂ ಮರಿಯಯ್ಯ ಅವರನ್ನು ಸ್ನೇಹಿತರು, ಹಿತೈಷಿಗಳು,ಅಭಿಮಾನಿಗಳು ಅಭಿನಂದಿಸಿ ಸನ್ಮಾನಿಸಿ ಗೌರವಿಸಿದರು. ಪಟಾಕಿ ಸಿಡಿಸಿ ಸಿಹಿ ವಿತರಣೆ ಮಾಡಲಾಯಿತು.
ನೂತನ ಅಧ್ಯಕ್ಷ ಮೋಹನಕುಮಾರ್ ಮಾತನಾಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ.ನಮ್ಮ ಸಂಘದ ವ್ಯಾಪ್ತಿಯ ರೈತರಿಗೆ ಸಕಾಲಕ್ಕೆ ಸಾಲವನ್ನು ನೀಡುವುದು. ರಾಸಾಯನಿಕ ಗೊಬ್ಬರ,ಬಿತ್ತನೆ ಬೀಜಗಳನ್ನು ನೀಡುವುದು ನಮ್ಮ ಮೊದಲ ಕರ್ತವ್ಯವಾಗಿದೆ.ರೈತರು ನಮ್ಮ ಸಂಘದಲ್ಲಿ ಷೇರುದಾರರಾಗಿ ಸಂಘದ ಅಭಿವೃದ್ಧಿಗೆ ಕಾರಣರಾಗಬೇಕು. ತೆಗೆದುಕೊಂಡ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಸಂಘವನ್ನು ಉನ್ನತ ಮಟ್ಟಕ್ಕೆ ಬೆಳಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹರಿಹರಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬೊಮ್ಮೇನಹಳ್ಳಿ ಹರ್ಷ, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್ ವೈ ಜಯಕುಮಾರ್, ಹೆಚ್ ಎನ್ ಶ್ರೀಧರ್,ಸಿದ್ದಲಿಂಗಪ್ಪ,ಕತ್ತರಘಟ್ಟ ಮಹೇಶ್,ಟಿಎಪಿಸಿಎಂಎಸ್ ನಿರ್ದೇಶಕ ಮಂಜುನಾಥ್, ನಾಗೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ್,ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಂತರಾಜು, ಮೇಲ್ವಚಾರಕ ಆದಿಲ್ ಪಾಷಾ, ಮುಖಂಡರಾದ ಬಲರಾಮೇಗೌಡ, ನವೀನ್,ಸಂಘದ ನಿರ್ದೇಶಕರಾದ ರಾಮೇಗೌಡ, ಕಿಶೋರ್, ರೇವಣ್ಣ,ರವೀಶ್,ಸುಂದ್ರಮ್ಮ,ನೇತ್ರಾವತಿ, ಮಹಮ್ಮದ್ ಗೌಸ್,ತಮ್ಮಯ್ಯ, ಸೇರಿದಂತೆ ಇತರರು ಹಾಜರಿದ್ದರು.