ಭದ್ರಾವತಿ: ಸಪ್ಟೆಂಬರ್ ತಿಂಗಳು ಹದಿನೆಂಟನೇ ತಾರೀಕು ಗುರುವಾರ ಕರ್ನಾಟಕ ರತ್ನ ಡಾಕ್ಟರ್ ಸಾಹಸಸಿಂಹ ವಿಷ್ಣುವರ್ಧನ್ ರವರ ಹುಟ್ಟು ಹಬ್ಬದ ಪ್ರಯುಕ್ತ ಮತ್ತು 75ನೇ ಅಮೃತ ಮಹೋತ್ಸವ ಪ್ರಯುಕ್ತ ಭದ್ರಾವತಿ ಕೆಎಸ್ಆರ್ಟಿಸಿ ಹೊಸ ಸೇತುವೆ ರಸ್ತೆಯಲ್ಲಿ ಇರುವ ಕುವೆಂಪು ಪ್ರವಾಸಿ ವಾಹನ ಚಾಲಕರ ಮಾಲೀಕರ ಸಂಘದ ಕಚೇರಿಯ ಮುಂಭಾಗದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ರವರ ಅಮೃತ ಮಹೋತ್ಸವದ ಪ್ರಯುಕ್ತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ ಮತ್ತು ವಿಷ್ಣುಸಾರ್ ರವರ ಕೇಕ್ ಕಟ್ಟಾದ ನಂತರ ಊಟದ ವ್ಯವಸ್ಥೆ ಇರುತ್ತದೆ ದಯಮಾಡಿ ನಿಮ್ಮ ಕುಟುಂಬ ಸಮೇತ ನೀವು ಬನ್ನಿ ನಿಮ್ಮ ಸ್ನೇಹಿತರನ್ನು ಕರೆತನ್ನಿ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳೋಣ ಬ್ಲಡ್ ಡೊನೇಟ್ ಮಾಡುವವರು ದಯಮಾಡಿ ಹೆಸರು ನಂಬರನ್ನು ಸೂಚಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.