ಬೆಂಗಳೂರು: ಕರ್ನಾಟಕದ ಮೇರುನಟರುಗಳಲ್ಲಿ ಒಬ್ಬರಾದ ಅಜಾತ ಶತ್ರು ಸ್ನೇಹಜೀವಿ ಭಾವನಾತ್ಮಕ ಹೆಂಗರುಳಿನ ಮನಸ್ಸುಳ್ಳ ಪ್ರಖ್ಯಾತ ಕಲಾವಿದರಾದ ಸಾಹಸ ಸಿಂಹ ದಿವಂಗತ ಡಾಕ್ಟರ್ ವಿಷ್ಣುವರ್ಧನ್ ರವರ 75,ನೇ ಜಯಂತೋತ್ಸವದ ಈ ಶುಭ ಸಂಧರ್ಭದಲ್ಲಿ ಕರ್ನಾಟಕ ಸರ್ಕಾರವು ಡಾಕ್ಟರ್ ವಿಷ್ಣುವರ್ಧನ್ ರವರಿಗೆ “ಕರ್ನಾಟಕ ರತ್ನ” ಗೌರವ ಸಮರ್ಪಿಸಿರುವುದು ರಾಜ್ಯದ ಮೂಲೆಮೂಲೆಗಳಲ್ಲಿರುವ ಡಾಕ್ಟರ್ ವಿಷ್ಣುವರ್ಧನ್ ರವರ ಅಭಿಮಾನಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆಗಳ ಸುರಿಮಳೆ ಗರದಿದ್ದಾರೆ.
ಡಾಕ್ಟರ್ ವಿಷ್ಣು ವರ್ಧನರವರು ಸ್ನೇಹಜೀವಿ ಅಷ್ಟೆ ಅಲ್ಲದೆ ಅವರು ಭಾವನಾತ್ಮಕವಾಗಿಯೂ ಇದ್ದರು.ಯಾವುದೇ ದ್ವೇಷಮನೋಭಾವವಿಲ್ಲದೆ ಮಗುವಿನಂತ ನಿಷ್ಕಲ್ಮಷಮನಸ್ಸುಳ್ಳವರಾಗಿದ್ದರು.ಅವರು ತಮ್ಮ ಬದುಕಿನುದ್ದಕ್ಕೂ ಇಲ್ಲಸಲ್ಲದ ಅಂತೆಕಂತೆಗಳ ಹುಟ್ಟುಹಾಕುತ್ತಾ ಅವರ ಪ್ರತಿಹೆಜ್ಜೆಯಲ್ಲೂ ಮುಳ್ಳನ್ನೇ ಹಾಸುವ ಪ್ರಯತ್ನಪಟ್ಟು ತಮ್ಮಬೇಳೆಬೇಯಿಸಿಕೊಂಡವರೇ ಹೆಚ್ಚು.ಆದರೆ ಡಾಕ್ಟರ್ ವಿಷ್ಣುವರ್ಧನ್ ರವರುಮಾತ್ರ ತಮ್ಮ ಪ್ರತಿಹೆಜ್ಜೆಯಲ್ಲೂ ಅಡ್ಡಲಾಗುವುವ ಮುಳ್ಳುಗಳನ್ನೇಲ್ಲಾ ಹೂವಿನಹಾಸಿಗೆಯಂತೆ ದಾಟುತಿದ್ದರೆ ವಿನಹ ಅವುಮುಳ್ಳುಗಳೆಂದು ಅವುಗಳನ್ನು ಸುಡಲು ಎಂದೂ ಮನಸ್ಸುಮಾಡಲಿಲ್ಲಾ.
ಅಂದು ಅವರು ನಡೆದ ಮುಳ್ಳುಹಾಸಿನ ಮೇಲೆಯೇ ಧೃತಿಗೆಡದೇ ಮುನ್ನುಗ್ಗಿದ ಸಾಹಸ ಸಿಂಹ ವಿಷ್ಣುವರ್ಧನ್ ರವರಿಗೆ ಸದಾ ಅಭಿಮಾನದ ಹೂಮಳೆ ಗರೆಯುತ್ತಾವರ ಹಿಂದೆಯೇ ಹಿಂಬಾಲಿಸಿದ ಅಭಿಮಾನಿಗಳ ಸಂಖ್ಯೆರಾಜ್ಯದ ಎಲ್ಲಾ ದಶದಿಕ್ಕುಗಳಲ್ಲಿತ್ತು ಇಂದಿಗೂ ಇದೆ.
ಅಂಥಾ ಅಭಿಮಾನಿಗಳಲ್ಲಿ ನಾಲ್ಕಾರು ಜನ ಸ್ವಾರ್ಥಿಗಳಿರಬಹುದು,ಅಹಂಕಾರಿಗಳಿರಬಹುದು,ಹಣ,ಅಧಿಕಾರ,ವ್ಯವಹಾರದ ಮದಿರಬಹುದು ಅಂಥವರು ಒಬ್ಬಿಬ್ಬರನ್ನು ಯಾರಾದರೂ ಹೇಳಬಹುದಷ್ಟೆ.ಆದರೆ ಲಕ್ಷಾಂತರ ಅಭಿಮಾನಿಗಳು ಹೊಟ್ಟೆಗೆ ಹಿಟ್ಟಿಲ್ಲದೆ,ಮಾಸಲು ಬಟ್ಟೆ ಇಲ್ಲದೆ,ಕೈತುಂಬಕೆಲಸವಿಲ್ಲದೆ,ಇದ್ದರೂ ಸಹ ಡಾಕ್ಟರ್ ವಿಷ್ಣುವರ್ಧನ್ ರವರ ಪ್ರತಿ ಕಾರ್ಯಕ್ರಮಗಳ ವೇದಿಕೆಗಳ ಮುಂದೆ ಜಮಾಯಿಸಿ ವೇದಿಕೆಯ ಮೈದಾನ ಶುಚಿಗೊಳಿಸುವುದು ಸುಸಜ್ಜಿತವಾಗಿ ಸುತ್ತಮುತ್ತ ಅಲಂಕರಿಸುವುದು ಪರಸ್ಪರ ಹಿಂದಿನ ಘಟನೆಗಳನ್ನು ಮೆಲಕುಹಾಕುತ್ತಾ ವೇದಿಕೆಯ ಗಣ್ಯರ ಸಮಾರಂಭಕ್ಕೆ ಗೌರವ ಹೆಚ್ಚಿಸುವಲ್ಲಿ ಇವತ್ತಿಗೂ ಮುಂಚೂಣಿಯಲ್ಲಿದ್ದಾರೆ.ಪೋಜು ಕೊಡುವವರು ಹತ್ತಾರು ಜನರಿರಬಹುದು ನಿಸ್ವಾರ್ಥ ಮತ್ತು ಮಸ್ಪೂರ್ತಿ ತುಂಬಿಕೊಂಡಿರುವ ಅಭಿಮಾನಿಗಳು ಲಕ್ಷಲಕ್ಷ ಸಂಖ್ಯಲ್ಲಿದ್ದಾರೆ.ಅಂಥಾ ಲಕ್ಷಾಂತರ ಅಭಿಮಾನಿಗಳಿಗೆ ಇಂದು ರಾಜ್ಯಸರ್ಕಾರ ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ್ ರವರಿಗೆ ಹಾಗೂ ಹಿರಿಯ ಮೇರು ನಟಿ ಬಿ.ಸರೋಜಾದೇವಿ ಯವರಿಗೂ “ಕರ್ನಾಟಕರತ್ನ” ಗೌರವ ಘೋಷಣೆ ಮಾಡಿರುವುದನ್ನು ಹೃತ್ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವಿಜಯಪುರ ಜಿಲ್ಲೆಯ ಹೊನಗನಹಳ್ಳಿ ಯ ವಿಷ್ಣು ಸೇನೆಯ ಮಲ್ಲಪ್ಪ ಗುರಪ್ಪ ಬಗಲಿ,ಬಸವರಾಜ್ ನಂದೆಪ್ಪ ದೇವನಗಾಂವ,ಕಲಬುರಗಿಯ ಶ್ರೀ ಆಂಜನೇಯ ಡೊಳ್ಳಿನ್,ದಾವಣಗೆರೆಯ ಪಿ,ಜಗನ್ನಾಥ್,ನಜೀರ್,ದಾವಣಗೆರೆಯ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಹಿಂದೆ ವೃತ್ತ ಒಂದಕ್ಕೆ ಡಾಕ್ಟರ್ ವಿಷ್ಣುವರ್ಧನ್ ವೃತ್ತವೆಂದು ನಾಮಕರಣ ಗೋಳಿಸುವಲ್ಲಿ ಶ್ರಮಿಸಿ ಯಶಸ್ವಿಯಾದ ಶ್ರೀ ಮಂಜುನಾಥಗೌಡ,ಅನಿಲ್,ಯೂಸೂಪ್,ಮಾರುತಿ,ಬಸಾಪುರ ಮಂಜು,ಚಲುವರಾಜ್,ಷಣ್ಮುಖ,ಮಣಿಕಂಠ ಹೊಟೆಲ್ ಬಸವರಾಜ್,ಗಂಗಾಧರ್,ಮುನ್ನಾ,ಶಫಿ,ಎನ್,ಧರ್ಮಣ್ಣ,ವೆಡಿಯಪ್ಪನ್,ಬೆಂಗಳೂರಿನ ರಾಮಮಂದಿರ ಸುರೇಶ,ರಮೇಶ್ ಆರ್ ಎ ಗೌಡ ವಕೀಲರು,ಇಎಸ್ಐ ಬಾಬು,ರಾಜೇಂದ್ರ ಶ್ರೀ ರಾಮಪುರ,ಪೋತಣ್ಣ ಓಕಳಿಪುರ,ಡೈರಿಸರ್ಕಲ್ ಬಿಬಿಎಂಪಿ ರಾಮಣ್ಣ,ಹರ್ಷವರ್ಧನ್,ದೀಪಕ್,ಲಕ್ಷ್ಮಿಪತಿ,ರೇವಣ್ಣ,ಮೂಡಲಪಾಳ್ಯ ರವಿ,ಟೈಲರ್ ರವಿ,ಹೀಗೆ ರಾಜ್ಯದ ಹಲವಾರು ಭಾಗಗಳಿಂದ ಲಕ್ಷಾಂತರ ಅಭಿಮಾನಿಗಳು ಹರ್ಷವ್ಯಕ್ತಪಡಿಸಿದ್ದಾರೆಂದು ಹಿರಿಯ ಪತ್ರಕರ್ತ ಸ್ನೇಹಜೀವಿ ಎಸ್ ಕೆ.ಒಡೆಯರ್ ತಿಳಿಸಿದ್ದಾರೆ.