ಪೆರಿಯಾರ್ ತಮ್ಮ ಸ್ವಂತ ಮಗಳನ್ನು ಮದುವೆಯಾದರು ಎನ್ನುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಇದು ವಾಟ್ಸಪ್ಪ್ ಯೂನಿವರ್ಸಿಟಿ ಭಕ್ತರು ಹರಡಿದ ಸುಳ್ಳು ಸುದ್ಧಿಯಾಗಿದೆ.
ಏಕೆಂದರೆ,,
ಪೆರಿಯಾರ್ ರಾಮಸ್ವಾಮಿಯವರಿಗೆ ಮದುವೆ ವಯಸ್ಸಿನ ಮಗಳೆ ಇರಲಿಲ್ಲ,ಪೆರಿಯಾರ್ ರ ಹೆಣ್ಣು ಮಗು 5 ತಿಂಗಳಿಗೆ ಸಾವನ್ನಪ್ಪಿತು, ಪೆರಿಯಾರ್ 1896 ರಲ್ಲಿ ನಾಗಮ್ಮಾಯಿ ಅವರನ್ನು ವಿವಾಹವಾದರು. ನಂತರ, ನಾಗಮ್ಮಾಯಿ 1935 ರಲ್ಲಿ ನಿಧನರಾದರು. ಹಾಗಾದರೆ ಪೆರಿಯಾರ್ ತಮ್ಮ ದತ್ತು ಮಗಳನ್ನು ಮದುವೆಯಾದರೇ ?
ಪೆರಿಯಾರ್ ಯಾರನ್ನೂ ದತ್ತು ಪಡೆದಿಲ್ಲ, ದತ್ತು ಪಡೆದಿದ್ದರು ಎನ್ನುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ..
ವಾಟ್ಸಪ್ಪ್ ಯೂನಿವರ್ಸಿಟಿ ಅಂಧಭಕ್ತರು ಹರಡಿದ ಮತ್ತೊಂದು ಫೇಕ್ ನ್ಯೂಸ್ ಏನೆಂದರೆ ಪೆರಿಯಾರ್ 32 ವರ್ಷ ವಯಸ್ಸಿನ ಮಣಿಯಮ್ಮಾಯಿಯವರನ್ನು ಮದುವೆಯಾದರು ಎನ್ನುವುದು, ಅದಕ್ಕೆ ಸಾಕ್ಷಿಯಾಗಿ ಅವರು, ಮಣಿಯಮ್ಮಾಯಿ ಯವರ ಪೆರಿಯಾರ್ ಜೊತೆಗೆ ಕೊರಳಲ್ಲಿ ಹಾರ ಹಾಕಿಕೊಂಡಿರುವ ಫೋಟೋ ತೋರಿಸುತ್ತಾರೆ, ಆದರೆ ಅವರು ತೋರಿಸಿದ ಫೋಟೋದಲ್ಲಿ ನಿಜವಾದ ಮದುವೆ ಗಂಡಿನ ಮುಖವು ಕಾಣದಂತೆ ಫೋಟೋವನ್ನು ಕ್ರಾಪ್ ಮಾಡಿ ತೋರಿಸಿರುತ್ತಾರೆ.
ಒರಿಜಿನಲ್ ಫೋಟೋ ನೀವು ಇಲ್ಲಿ ನೋಡಬಹುದು.
ಇದನ್ನು ಹೊರತು ಪಡಿಸಿ ಅಂಧಭಕ್ತರು, ಮಣಿಯಮ್ಮಾಯಿ ಪೆರಿಯಾರ್ ಪಕ್ಕದಲ್ಲಿ ಕುಳಿತ ಮತ್ತೊಂದು ಫೋಟೋ ತೋರಿಸುತ್ತಾರೆ. ಆದರೆ ಈ ಫೋಟೋ ಅವರಿಬ್ಬರೂ ಗಂಡ ಹೆಂಡತಿ ಎನ್ನುವುದನ್ನು ಸಾಬೀತುಪಡಿಸುತ್ತದೆಯೇ ? ಇಲ್ಲ..
ಒಂದು ಗಂಡು ಹೆಣ್ಣು ಅಕ್ಕ ಪಕ್ಕ ಕುಳಿತುಕೊಳ್ಳುವುದರಿಂದ ಅವರು ಪತಿ ಪತ್ನಿ ಎಂದಾಗುವುದಿಲ್ಲ, ಆದರೆ ಭಕ್ತರ ಕಣ್ಣಿಗೆ ಅವರು ಪತಿ ಪತ್ನಿಯರಂತೆ ಕಂಡರೆ ಅವರ ತಲೆಯಲ್ಲಿ ಸಗಣಿ ಇದೆ ಎನ್ನುವುದು ಸಾಬೀತಾಗುತ್ತದೆ.
ಮಣಿಯಮ್ಮಾಯಿ ಅವರು ಜಸ್ಟಿಸ್ ಪಕ್ಷದ ಸದಸ್ಯೆ ಕನಗಸಾಬಾಯಿಯವರ ಮಗಳು ಮತ್ತು ಸ್ವಾಭಿಮಾನ ಚಳವಳಿಯ ತತ್ವಗಳ ದೃಢ ನಂಬಿಕೆಯುಳ್ಳವರಾಗಿದ್ದರು. ಮಣಿಯಮ್ಮಾಯಿ 20 ರ ದಶಕದ ಆರಂಭದಲ್ಲಿ ತಮ್ಮ ತಂದೆಯ ನಿಧನದ ನಂತರ ದ್ರಾವಿಡರ್ ಕಳಗಂ (ಪೆರಿಯಾರ್ ಸ್ಥಾಪಿಸಿದ) ಸೇರಿದರು. ಅವರು ಸಂಘಟನೆಗೆ ಬದ್ಧರಾಗಿದ್ದರು ಮತ್ತು ಪೆರಿಯಾರ್ ಅವರ ಅತ್ಯಂತ ವಿಶ್ವಾಸಾರ್ಹ ಅನುಯಾಯಿಯಾಗಿದ್ದರು.
ಅವರು ಪೆರಿಯಾರ್ ಅವರ ವೃದ್ಧಾಪ್ಯದಲ್ಲಿ ಅವರನ್ನು ನೋಡಿಕೊಳ್ಳುತ್ತಿದ್ದರು,ಇದನ್ನೇ ಬಲಪಂಥಿಯರು ತಪ್ಪಾಗಿ ಅರ್ಥ ಮಾಡಿಕೊಂಡು ಪೆರಿಯಾರ್ ಕುರಿತು ಅಪಪ್ರಚಾರ ಮಾಡಿದರು, ಇಂದಿಗೂ ಮಾಡುತ್ತಲೇ ಇದ್ದಾರೆ, ಕಾರಣ ಇಷ್ಟೇ ಪೆರಿಯಾರ್ ರಾಮಾಯಣದ ವಿಕೃತ ರೂಪವನ್ನು ಎಕ್ಸ್ಪೋಸ್ ಮಾಡಿ “ಪೆರಿಯಾರ್” ಎನ್ನುವ ಹೆಸರು ಕೇಳಿದರೆ ಮನುವಾದಿಗಳ ನವರಂದ್ರಗಳಲ್ಲೂ ಬೆವರಿಳಿಯುವಂತೆ ಮಾಡಿದ್ದಾರೆ.
- ಅರಿವೇ ಗುರುವು(by:Hadimani tf facebook)