ಬೆಂಗಳೂರು: ಹಿರಿಯ ರಂಗ ಸಂಘಟಕರಾದ ಜಯಪ್ರಕಾಶಗೌಡರಿಗೆ, ಮಂಡ್ಯ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೆಟ್ ದೊರೆತದ್ದು, ಕನ್ನಡ ರಂಗಭೂಮಿಗೆ ದೊಡ್ಡ ಗೌರವ. ಕರ್ನಾಟಕ ರಂಗ ಪರಿಷತ್ತು, ಕೇಂದ್ರ ಸಮಿತಿ, ಬೆಂಗಳೂರು ವತಿಯಿಂದ ಜೆಪಿ ಯವರನ್ನ ಗೌರವಿಸುತ್ತಿದ್ದೇವೆ ಎಂದು ರಂಗ ಪರಿಷತ್ತಿನಾ ರಾಜ್ಯಾಧ್ಯಕ್ಷರಾದ ಜಯಶಂಕರ್ ಬೆಳಗುಂಬ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಜೆ ಪಿ ಅಭಿನಂದನೆ ಕಾರ್ಯಕ್ರಮ
31 ಜುಲೈ 2015 ರಂದು ಸಂಜೆ 6ಕ್ಕೆ ಬೆಂಗಳೂರಿನ ನಯನ ರಂಗಮದಿರದಲ್ಲಿ ಜರುಗಲಿದೆ.
ಮೊದಲಿಗೆ ಜಾನಪದ ಕಲಾವಿದರಾದ
ಸಿ. ಎಂ. ನರಸಿಂಹಮೂರ್ತಿ ಚಾಮರಾಜನಗರ ಮತ್ತು ಸಂಗಡಿಗರಿಂದ ಗಾಯನ,
ಹಿರಿಯ ರಂಗಸಂಘಟಕರಾದ ಶ್ರೀನಿವಾಸ್ ಜಿ. ಕಪ್ಪಣ್ಣ ಅಭಿನಂದಿಸಲಿದ್ದಾರೆ,
ಹಿರಿಯ ನಾಟಕಕಾರರಾದ ಡಾ. ಚಂದ್ರು ಕಾಳೆನಹಳ್ಳಿ ಅಭಿನಂದನಾ ನುಡಿಗಳನ್ನಡಲಿದ್ದಾರೆ,
ಮುಖ್ಯ ಅಥಿತಿಗಳಾಗಿ
ಹಿರಿಯ ರಂಗ ಸಂಘಟಕರಾದ ಮಹಾಂತೇಶ್ ಗಜೇಂದ್ರಗಡ ಅವರು ಭಾಗವಹಿಸಲಿದ್ದಾರೆ. ಜೊತೆಗೆ
ಪ್ರೊ. ಕಿರಂ ನಾಗರಾಜ ರಚನೆಯ ನೀಗಿಕೊಂಡ ಸಂಸ ನಾಟಕವನ್ನು ಕಲಾವಿದರು ಸಿದ್ದರಾಮ ಕೊಪ್ಪರ್
ಅವರ ನಿರ್ದೇಶನದಲ್ಲಿ ಅಭಿನಯಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here