ಭಾರತದ ಕುರುಬರು

ಕುರುಬ ಸಮುದಾಯವೂ ಸಂಪೂರ್ಣ ಭಾರತದಲ್ಲಿ ನೂತನ ಶಿಲಾಯುಗದ ಕಾಲದಿಂದಲೂ ಕಾಣಿಸಿಕೊಳ್ಳುತ್ತಾರೆ. ಪೂರ್ವಜರು ಉತ್ತರದಲ್ಲಿ ವೃಷ್ಣಿಬುಡಕಟ್ಟಿನವರು ಹಾಗೂ ಗೊಂಡರು ಕುರುಂಬರು ಕಳವರ ಹೆಸರಿನ ಸಮುದಾಯವಾಗಿಯೇ ಗುರುತಿಸಿಕೊಂಡು, ಮೂಲ ಆದಿವಾಸಿ ಸಂಸ್ಕತಿಯಲ್ಲಿ ಜೀವಿಸುತ್ತಿದ್ದಾರೆ, ಇಂದಿಗೂ ನಾವು ಕಾಣಬಹುದು. ಇವರಿಂದಲೇ ಗೊಂಡವಾನ ಖಂಡಕ್ಕೆ ಗೊಂಡವಾನ್’ ಎಂಬ ಹೆಸರು ಬಂದಿತ್ತೆಂದು ಹೇಳಲಾಗುತ್ತದೆ. ಕೇವಲ ಕಾಡನ್ನೇ ಆಶ್ರಯ ತಾಣವನ್ನಾಗಿ ಮಾಡಿಕೊಂಡ ಗೋಂಡ್ ಜನರು ಅಭಿವೃದ್ಧಿಯ ಕಡೆಗೆ ಮುಖ ಮಾಡಲಿಲ್ಲ. ಅಡವಿ ಮತ್ತು ನಗರ ಪ್ರದೇಶಗಳ ಸಂಪರ್ಕ ಹೊಂದಿ ನಿರಂತರ ಸಂಚಾರಿ ಜೀವನವನ್ನು ಅವಲಂಬಿಸಿದ ಹಾಲುಮತದವರು ಸುಧಾರಣೆಯ ಕಡೆಗೆ ತೆರೆದುಕೊಂಡರು. ಕುರಿಗಾರಿಕೆ, ದನಮೇಯಿಸುವುದು, ಕುರಿಯ ಉತ್ಪನ್ನಗಳ ಮಾರಾಟ, ಕೃಷಿ, ಅರಣ್ಯ ಸಂಪನ್ಮೂಲಗಳ ವಿನಿಮಯ, ನಗರಕ್ಕೆ ಹೊಂದಿಕೊಂಡ ಜೀವನದ ಕಾರಣದಿಂದ ಕುರುಬರಿಗೆ ಸಾಮಾಜಿಕ, ಧಾರ್ಮಿಕ ಯಜಮಾನಿಕೆ ಪ್ರಾಪ್ತವಾಯಿತು. ಮೊದಲು ದೇವರಸೇವೆ ಎಂದು ಪ್ರಾರಂಭವಾದ ಕುರಿಸಾಕಾಣಿಕೆ ವೃತ್ತಿಯು ಮಧ್ಯಯುಗದಲ್ಲಿ ಜೀವನಾಧಾರ ಕಸುಬಾಗಿ ರೂಪ ಪಡೆಯಿತು. ಜೀವನೋಪಾಯಕ್ಕಾಗಿ ಬದುಕಲು ಮುಂದಾದಾಗ ಪ್ರಾಣಿ ಹಿಂಡುಗಳ ಆರೈಕೆಯ ಜೊತೆಗೆ ಕೃಷಿಯನ್ನು ಕಲಿತು ಮಿಶ್ರ ಕಸುಬುಗಳನ್ನು ಅವಲಂಬಿಸಿದ. ಪಶುಗಳೇ ಸಂಪತ್ತಾಗಿದ್ದ ಕಾಲದಲ್ಲಿ ಹೆಚ್ಚು ಪಶುಗಳನ್ನು ಹೊಂದಿದವರು ಶ್ರೀಮಂತರು ಎನಿಸಿಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಇವರಿಗೆ ಧನಗರ ಎಂದು ಹೆಸರು ಬಂದಿದೆ. ಭಾರತದಲ್ಲಿನ ಎಲ್ಲಾ ರಾಜ್ಯಗಳಲ್ಲಿ ವಿವಿಧ ಹೆಸರುಗಳಿಂದ 'ಕುರುಬ- ಧನಗರರು’ ವ್ಯಾಪಿಸಿಕೊಂಡಿದ್ದಾರೆ. ಇವರು ಕುರಿಗಾರಿಕೆಯ ಕಸುಬಿನ ಆಧಾರಿತವಾಗಿಯಾದರೂ ಇದುವರೆಗೂ ಸಂಘಟಿತರಾಗಿರುವುದಿಲ್ಲ. ಒಂದು ಸಮೂಹ ಶಕ್ತಿಯಾಗಿ ತನ್ನ ಸಾಂಪ್ರದಾಯಿಕ ಕಸುಬಿನ ಲಾಭ ನಷ್ಟಗಳ ಬಗ್ಗೆ, ತಮ್ಮ ಶಿಕ್ಷಣ, ಔದ್ಯೋಗಿಕ, ಆರ್ಥಿಕ ಸುಧಾರಣೆಯ ಬಗ್ಗೆ ಮತ್ತು ಸಾಮಾಜಿಕ ಸ್ಥಾನಮಾನಗಳ ಬಗ್ಗೆ ಯೋಚಿಸದಿರುವುದು ಸಹ ದುರಂತವೇ ಸರಿ. ಧಾರ್ಮಿಕ, ಸಾಮಾಜಿಕ, ರಾಜಕೀಯ ಯಜಮಾನಿಕೆಯನ್ನು ತಾವು ಒಂದು ಗುಂಪಾಗಿ ಸಂಘಟಿತರಾಗಿ ಕಾಯ್ದುಕೊಂಡ ಅಥವಾ ಪಡೆದುಕೊಂಡ ಉದಾಹರಣೆ ಇತಿಹಾಸದಲ್ಲಿ ಸಿಗುವುದಿಲ್ಲ. (ಕರ್ನಾಟಕದಲ್ಲಿ ಇತ್ತೀಚಿಗೆ ಕಾಣಬಹುದಾಗಿದೆ). ಭಾರತದ ಇತಿಹಾಸದಲ್ಲಿ ಬಹಳ ಪುರಾತನ ಕಾಲದಿಂದಲ್ಲೂ ಕುರಿ, ಹಸು, ಎಮ್ಮೆ, ಕುದುರೆ ಸಾಕಾಣಿಕೆ, ಕಂಬಳಿಗಳ ನೇಯ್ಗೆ, ಹಾಲು ಮತ್ತು ಹಾಲಿನ ಉತ್ಪನ್ನಗಳ ಕೊಡು-ಕೊಳ್ಳುವಿಕೆಯ ಸಮುದಾಯಗಳಾಗಿ ಧನಗರ್ ಅಥವಾ ಕುರುಬರನ್ನು ಗುರುತಿಸಲಾಗಿದೆ. ತಮ್ಮ ಕಸುಬನ್ನು ಲಾಭದ ಮೂಲವನ್ನಾಗಿ ಮಾಡಿಕೊಳ್ಳಲೂ ಸಹ ಕುರುಬರು ವಿಫಲರಾಗಿದ್ದಾರೆ. ಅತ್ಯಂತ ಕಷ್ಟಮಯ ಕುರಿ ಸಾಕಾಣಿಕೆಯನ್ನು ಮಾಡಿಯೂ ಸಹ ಕುರಿ ಮಾರಾಟದ ಉದ್ಯಮ ಮತ್ತು ಮಾಂಸ ಮಾರಾಟದ ಉದ್ಯಮದ ಲಾಭವನ್ನು ಪಡೆಯಲಾಗಿಲ್ಲ. ಹೈನುಗಾರಿಕೆ, ಹಾಲಿನ ಉತ್ಪನ್ನಗಳ ಉದ್ಯಮದ ಯಜಮಾನಿಕೆ ಮತ್ತು ಲಾಭವನ್ನೂ ಪಡೆಯಲಾಗಿಲ್ಲ. ಪುರಾತನ ಕಾಲದಿಂದಲೂ ಸರ್ವಜನಾಂಗ ಮತ್ತು ಧರ್ಮಗಳ ಜನರು ಆರಾಧಿಸುವ ಕೃಷ್ಣ, ವಿಠ್ಠಲ, ಮೈಲಾರ ಮಲ್ಲಯ್ಯ, ತಿಮ್ಮಪ್ಪ, ರೇವಣಸಿದ್ದೇಶ್ವರ, ಬೀರದೇವರು ಹಾಗು ಇತರೆ ಹಾಲುಮತ ಧಾರ್ಮಿಕ ಕೇಂದ್ರಗಳ ಪ್ರಭಾವಗಳನ್ನು ಬೆಳೆಸಿಕೊಂಡು ವ್ಯಾವಹಾರಿಕವಾಗಿ ಲಾಭದ ಕೇಂದ್ರಗಳನ್ನಾಗಿಯೂ ಮಾಡಿಕೊಂಡಿಲ್ಲ. ಹಲವು ಧಾರ್ಮಿಕ ಕೇಂದ್ರಗಳನ್ನು ಬ್ರಾಹ್ಮಣರು, ವೀರಶೈವ, ಲಿಂಗಾಯಿತ, ಜೈನರು ಅತಿಕ್ರಮಿಸಲು ಬಿಟ್ಟಿರುವುದನ್ನು ಕಾಣುತ್ತೇವೆ. ಪ್ರಾಚೀನ ಕಾಲದಲ್ಲಿ ಕುರುಬ-ಧನಗರರು ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಸಾಂಸ್ಕತಿಕವಾಗಿ ಪ್ರಮುಖ ಸಮುದಾಯವೆಂದು ಸಾಬೀತಾಗಿದೆ. ಎಲ್ಲಿಯವರೆಗೆ ನೇರಾನೇರ ಯುದ್ದನೀತಿ, ಮತ್ತು ನ್ಯಾಯ ಭಾರತದಲ್ಲಿತ್ತೋ ಅಲ್ಲಿಯವರೆಗೆ ಕುರುಬರು ಸಾಮಾಜಿಕ, ಧಾರ್ಮಿಕ, ರಾಜಕೀಯ ಯಜಮಾನಿಕೆ ಹೊಂದಿದ್ದರು. ವೈದಿಕರ ಪ್ರಭಾವ ಹೆಚ್ಚಾದಂತೆಲ್ಲಾ ಯುದ್ಧ ನೀತಿಗಳಲ್ಲಿ ಕುತಂತ್ರಗಾರಿಕೆಯು ಮೇಲುಗೈ ಸಾಧಿಸಿತು ಮತ್ತು ಆದಿವಾಸಿಗಳು, ಪಾಲ್, ಧನಗರ್, ಕುರುಬ ಕುರುಂಬ, ಭಾಘೇಲ್ ಗ್ವಾಲ ಅಹೀರ್ ವಂಶದವರ ಸಾಮಾಜಿಕ, ರಾಜಕೀಯ, ಧಾರ್ಮಿಕ ಯಜಮಾನಿಕೆ ನಾಶವಾಗುತ್ತಾ ಬಂದವು. ತಂತ್ರಗಾರಿಕೆಯ ರಾಜ್ಯಾಡಳಿತ, ಧಾರ್ಮಿಕ ವ್ಯವಸ್ಥೆಗೆ ಒಗ್ಗದ ಜನರು ತಮ್ಮ ಪಾರಂಪರಿಕ ಕಸುಬಾದ ಪಶುಪಾಲನೆಯನ್ನು ಆಶ್ರಯಿಸಿದರು. ಕುರುಬರಲ್ಲಿನ ದೌರ್ಬಲ್ಯಗಳು ರಾಜಕೀಯ, ಸಾಮಾಜಿಕ ಜೀವನದಿಂದ ದೂರವಾಗಿ ಊರ ಹೊರಗಿನ ಅಡವಿಯಲ್ಲಿ ಪಶು, ಕುರಿ ಸಾಕಾಣಿಕೆಯಲ್ಲಿ ಮುಂದುವರೆದ ಜನಸಮುದಾಯ ಶಿಕ್ಷಣ, ರಾಜಕೀಯದಿಂದ ದೂರವಾಯಿತು. ಕುರಿಗಳನ್ನು ಬೆನ್ನತ್ತಿ ಅರಣ್ಯದ ಪಾಲಾದ ಜನರು ಊರಿನಲ್ಲಿ, ನಾಡಿನಲ್ಲಿ ಆಗುವ ಗುಂಪುಗಾರಿಕೆ, ಚಟುವಟಿಕೆಗಳಿಂದ ವಿಮುಖರಾದರು. ಊರಿನ ಜನರೊಂದಿಗೆ ಒಡನಾಟ ಇದ್ದ ಇತರೆ ಎಲ್ಲಾ ಜಾತಿ ಸಮುದಾಯಗಳು, ಊರಿನ ಹಿರಿಯರೆನಿಸಿಕೊಂಡವರು ಮಾಡುವ ವ್ಯವಹಾರಿಕ, ರಾಜಕೀಯ ಸ್ವಾರ್ಥದ ತಂತ್ರಗಳ ಬಗ್ಗೆ ತಿಳಿದುಕೊಂಡಿರುವಷ್ಟು ಕುರುಬರು ತಿಳಿದುಕೊಳ್ಳಲಾಗದ ಕಾರಣ ಇಂದಿಗೂ ಕುರುಬರು ಇತರರ ನಯವಂಚನೆಗಳನ್ನು ಅರ್ಥಮಾಡಿಕೊಳ್ಳದೆ ದುರ್ಬಳಕೆ ಆಗುತ್ತಿದ್ದಾರೆ. ಶಿಕ್ಷಣ ರಾಜಕೀಯ ಮತ್ತು ವ್ಯವಹಾರಿಕ ಶಕ್ತಿಯ ಬಗ್ಗೆ ಇಂದಿಗೂ ಅರಿವಿರದ ಕಾರಣ, ತಾನು ಮತ್ತು ತನ್ನವರು ಉದ್ಯೋಗ, ವ್ಯವಹಾರ ಮತ್ತು ರಾಜಕೀಯದಲ್ಲಿ ಮುನ್ನಡೆಯಬೇಕೆಂಬ ಹಂಬಲದ ಕೊರತೆ ಕುರುಬರಲ್ಲಿ ಎದ್ದು ಕಾಣುತ್ತದೆ. ಬಹು ಮುಖ್ಯ ಸಂದರ್ಭದಲ್ಲಿ ತನ್ನವರನ್ನೂ ಸಹ ನಂಬದೇ, ವಿರೋಧಿಗಳೊಂದಿಗೆ ಕೈಜೋಡಿಸುವ ನಡವಳಿಕೆ ಕುರುಬರಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಕಾಣಬಹುದು. ಅಲ್ಲದೆ ಅಧಿಕಾರ ಮತ್ತು ಇತರೆ ಉತ್ತಮ ಅವಕಾಶಗಳು ಸಿಕ್ಕಾಗಲೂ ಸಹ ಇತರರಿಗೆ ಪ್ರೀತಿಪಾತ್ರರಾಗಲು ಹವಣಿಸುವ ಮತ್ತು ತಮ್ಮವರೊಂದಿಗೆ ಗುರುತಿಸಿಕೊಳ್ಳದ ಇವರ ಗುಣವೂ ಸಹ ಅತ್ಯಂತ ವಿಷಾದಕರ ವಿಷಯ. ಅಂದಿನ ದುಡಿಮೆ, ಅಂದಿನ ಊಟ, ಅಂದಿನ ನಿದ್ರೆಯಲ್ಲಿಯೇ ತೃಪ್ತಿ ಪಡುವ ಅಲ್ಪತೃಪ್ತ ಜೀವನದ ಕುರುಬರಲ್ಲಿ ತನ್ನ ಮತ್ತು ತನ್ನವರ ಭವಿಷ್ಯದ ಬಗ್ಗೆ ಮಹತ್ವಾಕಾಂಕ್ಷೆ ಇಲ್ಲದಿರುವುದು ಕಾಣುತ್ತದೆ. ಶಿಕ್ಷಣದ ಕೊರತೆ, ತನ್ನ ತನ್ನತನದ ಬಗ್ಗೆ ಅಭಿಮಾನ ಇಲ್ಲದಿರುವುದು ಮತ್ತು ಸಾಮಾಜಿಕ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಬಗ್ಗೆ ಕಾಳಜಿ ಇರುವ ಜನರು ಕುರುಬರು ಶಿಕ್ಷಣದಿಂದ ವಂಚಿತರಾಗದ ರೀತಿಯಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ವೇದಗಳಲ್ಲಿ ಉಲ್ಲೇಖ ಕುರುಬ ಜನರ ಕುರಿತ ವಿಷಯ-ಉಲ್ಲೇಖಗಳು ಮೊದಲಿಗೆ ಋಗ್ವೇದದಲ್ಲಿ ಕಂಡುಬರುತ್ತವೆ. ಋಗ್ವೇದದಲ್ಲಿ ಕುರಿಗಾಹಿಯ ಉಲ್ಲೇಖಗಳಿವೆ. ವೇದಕಾಲದಲ್ಲಿ ಕುರುಬನನ್ನು ಅವಿಪಾಲ್, ಅಜಪಾಲ್, ಮೇಷಪಾಲ್, ಗೋಪಾಲ್ ಮುಂತಾದ ವಿವಿಧ ಹೆಸರುಗಳಿಂದ ಕರೆಯಲಾಗುತ್ತಿತ್ತು. ಕಂಬಳ(ಕಂಬಳಿ)ಎಂಬ ಪದವು ವೇದಗಳಲ್ಲಿ ಕಂಡುಬರುತ್ತದೆ. ಕುರುಬರುಪುಶನ್’ ಎಂಬ ದೇವರನ್ನು ಉದ್ದೇಶಿಸಿ ಮಾಡಿದ ಪ್ರಾರ್ಥನೆಗಳು ಋಗ್ವೇದದಲ್ಲಿ ಕಂಡುಬರುತ್ತವೆ. ಪುಶನ್ ಪಶುಹಿಂಡುಗಳ ರಕ್ಷಕನಾಗಿದ್ದು, ಅವನನ್ನು ಈ ಕೆಳಗಿನ ವಿಧಾನಗಳಲ್ಲಿ ಆರಾಧಿಸುತ್ತಾ, ಆಹ್ವಾನಿಸಲಾಗುತ್ತದೆ. ಎಲ್ಲಿ ಹುಲ್ಲು ಸಮೃದ್ಧವಾಗಿದೆ ಮತ್ತು ಹಸಿರು ಇರುತ್ತದೆ, ಎಲ್ಲಿ ಹುಲ್ಲುಗಾವಲು ಸುಂದರವಾಗಿರುತ್ತದೆ, ನಮ್ಮ ಹಿಂಡುಗಳನ್ನು ಅಂತಹ ಆಹ್ಲಾದಕರ ಮಾರ್ಗದ ಕಡೆಗೆ ಮುನ್ನಡೆಸು”, ನಮಗೆ ಸಮೀಪದಲ್ಲಿ ಮತ್ತು ವಿಸ್ತಾರವಾದ ಹುಲ್ಲುಗಾವಲುಗಳನ್ನು ನೀಡು ಮತ್ತು ಹೋರಾಡಲು ನಮ್ಮನ್ನು ಬಲಪಡಿಸು. ಕುರುಬರ ಕುರಿತು ವೇದಗಳಲ್ಲಿ ಉಲ್ಲೇಖವಿದೆಯೆಂಬ ಕಾರಣಕ್ಕೆ ಇವರು ವೈದಿಕರಲ್ಲ ವೇದಕಾಲದಲ್ಲಿ ಪ್ರಭಾವಿಗಳಾಗಿದ್ದ ಈ ನೆಲದ ನಿವಾಸಿಗಳಾದ ಕುರುಬರನ್ನು ವೇದ ರಚನಕಾರರು ಉಲ್ಲೇಖಿಸಿದ್ದಾರೆ. “ಗಿeಜಚಿs ಚಿಡಿe ಣhe soಟಿgs oಜಿ ಣhe Sheಠಿheಡಿಜs” ಎಂದು ಸಂಶೋಧಕರು ಹೇಳುತ್ತಾರೆ. ಭಾರತದ ಮೂಲ ನಿವಾಸಿಗಳ ಅಥವಾ ಆರ್ಯಪೂರ್ವ ಭಾರತದ ಜನರಲ್ಲಿ ಕಂಠಸ್ಥವಾಗಿ, ಬಾಯಿಂದ ಬಾಯಿಗೆ ತಲೆಮಾರುಗಳಿಂದ ಬಂದಿದ್ದ ವಿದ್ಯೆ, ತಂತ್ರಗಾರಿಕೆ, ಭಕ್ತಿ ಸಂಪ್ರದಾಯಗಳನ್ನು ಸೂತ್ರೀಕರಿಸಿ, ಲಿಪೀಕರಿಸಿ, ಗ್ರಂಥಗಳನ್ನು ವಿಂಗಡಿಸಿ, ಆರ್ಯರು ವೇದಗಳನ್ನು ರಚಿಸಿದರು ಎಂಬುದು ನನ್ನ ಅಭಿಪ್ರಾಯವಾಗಿದೆ. ನಾಲ್ಕುವೇದಗಳಿಗೆ ಅಜಪವೇದವೇ ಮೂಲ ಎಂಬ ಕುರುಬರಲ್ಲಿನ ಪಾರಂಪರಿಕ ನಂಬಿಕೆ ಇದನ್ನು ಪುಷ್ಟೀಕರಿಸುತ್ತದೆ. ಈ ಬಗ್ಗೆ ಸಂಶೋಧನೆ ಆಗಬೇಕಿದೆ. ಈ ವೇದವನ್ನು ನಾಲ್ಕು ವೇದಗಳಾಗಿ ವಿಂಗಡಿಸಲಾಗಿದೆ. ವಲಸಿಗರಾಗಿ ಬಂದ ವೈದಿಕರು ಪಶುಪಾಲಕರ ವಿದ್ಯೆ ಮತ್ತು ಸಂಸ್ಕöತಿಗೆ ಆಕರ್ಷಿತರಾಗಿ ತಮ್ಮದನ್ನಾಗಿಸಿಕೊಂಡರು. ವೈದಿಕ ಪೂರ್ವ ಭಾರತದ ಭಾಷೆ ಯಾವುದಿತ್ತು ಮತ್ತು ಯಾವ ಲಿಪಿಯನ್ನು ಹೊಂದಿದ್ದರು ಎಂಬುದು ಇಂದಿಗೂ ಸ್ಪಷ್ಟವಾಗಿಲ್ಲ. ಹರಪ್ಪ ಮೊಹೆಂಜೋದಾರ ಕಾಲದ ಲಿಪಿಯನ್ನು ಇಂದಿಗೂ ಬಿಡಿಸಲಾಗಿಲ್ಲ ಎಂಬುದನ್ನು ಕೇಳಿದ್ದೇನೆ. ಕುರುಬರು ವೇದ ಪೂರ್ವ ಕಾಲದ ಭಾರತೀಯರು ಮತ್ತು ದ್ರಾವಿಡರು ಎಂದು ಬಹುತೇಕರು ಸಾಬೀತುಪಡಿಸುತ್ತಾರೆ. “ದ್ರಾವಿಡ ಮೂಲದ ಭಾರತದಲ್ಲಿನ ಕುರುಬರನ್ನು ಈ ನೆಲದ ಮೂಲ ನಿವಾಸಿಗಳೆಂದು ಪರಿಗಣಿಸಬೇಕು ಮತ್ತು ಅವರು ವೈದಿಕ ಪೂರ್ವ ಕಾಲಕ್ಕೆ ಸೇರಿದವರು’” ಎಂದು ಸಂಶೋಧಕ ಗಸ್ಟೋವ್ ಓಪರ್ಟ್ ಹೇಳುತ್ತಾರೆ. ವೈದಿಕ ಸಾಮಾಜಿಕ, ಧಾರ್ಮಿಕ ಯಜಮಾನಿಕೆಯ ತಂತ್ರ ಪ್ರಭಾವಕ್ಕೆ ಒಳಗಾಗಿ ಮೂಲ ದ್ರಾವಿಡ ಕುರುಬರಲ್ಲಿನ ಕೆಲವರು ಪರಿವರ್ತನೆ ಆಗಿ, ಕುರುಬರಿಂದ ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದಾರೆ. ಮೂಲ ಗುಂಪಿನಿಂದ ಪ್ರತ್ಯೇಕವಾದ ಕೆಲವರು ಪ್ರತ್ಯೇಕ ಜಾತಿ ಗುಂಪುಗಳಾಗಿ ಗುರುತಿಸಿಕೊಂಡಿದ್ದಾರೆ. ಉತ್ತರದ ರಾಜ್ಯಗಳಲ್ಲಿ ಕುರಿ ಸಾಕಾಣಿಕೆಯ ವೃತ್ತಿಯ ಕುರುಬ-ಧನಗರ- ಪಾಲ್ -ಗಡರಿಯಾ -ಬಘೇಲ್ ಹಿನ್ನೆಲೆಯ ಜನರು ವೃಷ್ಣಿಗಳು ಆದಿವಾಸಿಸಂಸ್ಕೃತಿಯಿಂದ ಸಂಪೂರ್ಣವಾಗಿ ದೂರವಾಗಿ ವೈದಿಕ ಸಂಸ್ಕೃತಿಗೆ ಒಳಗಾಗಿರುವುದಲ್ಲದೆ ಇಸ್ಲಾಂ, ಸಿಖ್, ಕ್ರೈಸ್ತರಾಗಿ ಮತಾಂತರವಾಗಿರುವುದನ್ನು ಕಾಣುತ್ತೇವೆ. ಕುರುಬರು ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ ಪಶ್ಚಿಮ-ದಕ್ಷಿಣ ಭಾಗ, ತಮಿಳುನಾಡುಗಳಲ್ಲಿ ವೃಷ್ಣಿಬೀರದೇವರು ಮತ್ತು ಮೈಲಾರ ವಿಠ್ಠಲ ತಿಮ್ಮಪ್ಪ ಖಂಡೋಬಾ ಸ್ಕಂದ ಸಂಪ್ರದಾಯಗಳನ್ನು ಉಳಿಸಿಕೊಂಡು ಬಂದಿರುವ ಕಾರಣದಿಂದ ಸಮಾಜದಲ್ಲಿ ಗೌರವ ಸ್ಥಾನವನ್ನು ಹೊಂದಿದ್ದಾರೆ. ಇವರು ಉತ್ತರದ ರಾಜ್ಯಗಳಲ್ಲಿ ತಮ್ಮ ಸಂಸ್ಕೃತಿಯ ಸ್ವಂತಿಕೆಯನ್ನು ಮರೆತಿರುವ ಕಾರಣ ಸಾಮಾಜಿಕವಾಗಿ ಆಸ್ಪಶ್ಯರ ರೀತಿಯಲ್ಲಿ ಜನಾಂಗವು ಗುರುತಿಸಲ್ಪಡುತ್ತಿದೆ. ಅಲ್ಲದೆ ರಾಜಕೀಯ, ವ್ಯವಹಾರಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಅತ್ಯಂತ ಶೋಚನೀಯ ಸ್ಥಾನಮಾನಗಳನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ನಮಗೆ ಅರ್ಥವಾಗುವುದೇನೆಂದರೆ ಯಾವುದೇ ಜನಾಂಗದ ಸಾಂಸ್ಕöತಿಕ ಸ್ವಂತಿಕೆಯು ಅವರಿಗೆ ಸಮಾಜದಲ್ಲಿ ಗೌರವವನ್ನು ತಂದು ಕೊಡುತ್ತದೆ. ಸಂಸ್ಕöತಿಯನ್ನು ಮರೆತರೆ ಜನಾಂಗವು ಸಾಮಾಜಿಕ ಗೌರವವನ್ನು ಕಳೆದುಕೊಳ್ಳುತ್ತದೆ. ಖಂಡೋಬನು ಒಮ್ಮೆ ಕಾಡಿನಲ್ಲಿ ಒಡಾಡುತ್ತಿದ್ದಾಗ ಧನಗರ್ ಜನಾಂಗದ ಮೂಲಪುರುಷ ಭೇಟಿಯಾದನು. ಖಂಡೋಬನ ಅದ್ಭುತ ಶಕ್ತಿಯ ಪ್ರದರ್ಶನದಿಂದ ಮೂಕನಾದನು. ಆ ಸಮಯದಿಂದ ಧನಗರ್ ಖಂಡೋಬನನ್ನು ಭಕ್ತಿಯಿಂದ ಪೂಜಿಸಲು ಪ್ರಾರಂಭಿಸಿದನು. ದೇವರಿಗೆ ತನ್ನ ಮಗಳು ಬಾನಾಯಿಯನ್ನು ಹೆಂಡತಿಯಾಗಿ ಅರ್ಪಿಸಿದನು. ಖಂಡೋಬಾ ಅವನಿಗೆ, ಅವನು ಮತ್ತು ಅವನ ವಂಶಸ್ಥರು ಕುರಿಗಳನ್ನು ಸಾಕುವುದರ ಮೂಲಕ ಮತ್ತು ಮೇಯಿಸುವ ಮೂಲಕ ಉತ್ತಮ ಜೀವನವನ್ನು ಗಳಿಸಲು ವರವನ್ನು ನೀಡಿದನು. ಶಾಮಲ್’ ಎಂಬುವನನ್ನು ಒಂಟೆಯನ್ನು ಕಾಯಲು ನಶ್ರಮಿಸುತ್ತಾರೆ ರಬರಿ ಜನರ ಮೂಲಪುರುಷನಾದನು. ಎರಡನೆಯಭಾರವಾಡನನ್ನು ಕುರಿ- ಆಡು’ಗಳನ್ನು ಕಾಯುತ್ತಾರೆ ಚಾರಣ’ ಎಂಬುವನನ್ನು ನಂದಿಯನ್ನು ಕಾಯಲು ನೇಮಿಸಿದನು. ನಾಲ್ಕನೆಯಅಹಿರ್’ ಎಂಬುವವನಿಗೆ ಭೂಮಿಯನ್ನು ನೋಡಿಕೊಳ್ಳಲು ನೇಮಿಸಲಾಯಿತು. ಈ ನಾಲ್ವರಿಗೆ ಶಿವನು ಅಪ್ಸರೆಯರನ್ನು ಕೊಟ್ಟು ಮದುವೆ ಮಾಡಿದನು. ಈ ನಾಲ್ವರು ಒಂದೊAದು ಸಮುದಾಯವಾಗಿ ಗುರುತಿಸಿಕೊಂಡಿದ್ದಾರೆ. ಗುಜರಾತ್, ರಾಜಸ್ಥಾನ ಭಾಗದ ಕಥೆಯ ಪ್ರಕಾರ, ಕುರಿ, ಆಡು, ಪಶುಗಳ ರಕ್ಷಣೆಗಾಗಿ ಪವಿತ್ರಾ ಅಗ್ನಿಯಿಂದ ಭಾರವಾಡ್' ಜನಾಂಗವನ್ನು ಸೃಷ್ಟಿಸಿದನು. ದ್ವಾರಕೆಯು ಮುಳುಗಿದಾಗ ಕೃಷ್ಣನನ್ನು ಹುಡುಕಿಕೊಂಡು ನಾಲ್ಕು ನದಿಗಳ ತೀರದ ಮೂಲಕ ಹೋಗಿ ದೇಶದ ನಾನಾ ಮೂಲೆಗಳಿಗೆ ಹರಡಿದರು. ಈ ಗುಂಪುಗಳು ದೇಶದ ಬೇರೆಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಗುರುತಿಸಲ್ಪಟ್ಟರು ಎಂದು ಹೇಳುತ್ತದೆ. ದೇಶದಲ್ಲಿ ಕುರುಬರ ಪ್ರಮುಖ ರಾಜಾಳಿತ - ವಿಶ್ವವಿದ್ಯಾಲಯಗಳ ಸ್ಥಾಪನೆ ನಾವು ಭಾರತದ ಇತಿಹಾಸದಲ್ಲಿ ಕುರುಬರು ರಾಜ್ಯ, ಸಾಮ್ರಾಜ್ಯಗಳನ್ನು ಕಟ್ಟಿ ಆಳಿದ ವಿಷಯ ಅರಿಯಬಹುದು. ೮ ನೇ ಶತಮಾನದಲ್ಲಿ ಗೋಪಾಲ್ ಎಂಬ ರಾಜನಿಂದ ಸ್ಥಾಪನೆಯಾದ ಪಾಲ್ ಸಾಮ್ರಾಜ್ಯವನ್ನು ೨೯ ಪಾಲ್ ರಾಜವಂಶಗಳು ೧೧ ನೇ ಶತಮಾನದವರೆಗೆ ಆಳಿದುದನ್ನು ದಾಖಲಿಸಲಾಗಿದೆ. ಇವರು ಪಶ್ಚಿಮ ಬಂಗಾಲದಿಂದ ಹಿಡಿದು ಕನೌಜ್, ಜಲಂಧರದ ವರೆಗೆ ಆಳಿದರು. ಧರ್ಮಪಾಲ್ ಎಂಬಾತ ಜಗತ್ತಿನ ಶ್ರೇಷ್ಠ ನಳಂದ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿದನು. ಅಲ್ಲದೇ ಹೆಸರಾಂತ ವಿಕ್ರಮಶಿಲಾ, ಉದಂತಪುರಿ, ತಕ್ಷಶಿಲಾ, ಶಿವಪುರಿ ವಿಶ್ವವಿದ್ಯಾಲಯಗಳ ಸ್ಥಾಪನೆ ಮತ್ತು ಅಭಿವೃದ್ಧಿಗೆ ಪಾಲ ರಾಜವಂಶಗಳೇ ಕಾರಣ. ಬೌದ್ಧ, ಜೈನ ಧರ್ಮಗಳ ಪ್ರಚಾರಕ್ಕೆ ಇವರ ಕೊಡುಗೆ ಅಪಾರ. ಈ ಸಮುದಾಯದ ಅನೇಕ ರಾಜಕುಲಗಳು ಇತಿಹಾಸದಲ್ಲಿ ಪ್ರಬಲ ರಾಜ್ಯಗಳನ್ನು ಮತ್ತು ಸಾಮ್ರಾಜ್ಯಗಳನ್ನು ಸ್ಥಾಪಿಸಿ ಆಳಿದ್ದುದು ಇತಿಹಾಸದಿಂದ ತಿಳಿದು ಬರುತ್ತದೆ. ಅವುಗಳಲ್ಲಿ ಪ್ರಮುಖವಾದವು ಎಂದರೆ, ಮೌರ್ಯರು, ಶತವಾಹನರು, ಪಲ್ಲವರು, ಗಂಗರು, ಬಾಣ, ನೊಳಂಬ, ವೈದುಂಬ, ಪಾಲರು, ದೇವಗಿರಿ ಯಾದವರು, ಕಾಕತೀಯರು, ಹೊಯ್ಸಳರು, ವಿಜಯನಗರ. ಬಯಲುನಾಡಿನ ಕದಂಬರು, ದಕ್ಷಿಣ ಭಾರತದ ಕರೋಲಿ ರಾಜರು ಸಹ ಜಾತಿಗಳಿಂದ ಕುರುಬರಾಗಿದ್ದರು ಎಂದು ಬ್ರೌನ್ ವಾದಿಸಿದ್ದಾರೆ. ಅವರ ನಾಣ್ಯಗಳು ಕುರಿ ಮತ್ತು ಸಿಂಹದ ಚಿತ್ರಗಳನ್ನು ಹೊಂದಿವೆ. ಮರಾಠರ ರಾಜ ಛತ್ರಪತಿ ಶಿವಾಜಿ ಕೊಲ್ಲಾಪುರದ ಶಾಹು ಮಹಾರಾಜ್ ಮರಾಠರ ಆಳ್ವಿಕೆಯಲ್ಲಿ ಧನಗಾರ್‌ಗಳ ಪಾತ್ರ ಮಹತ್ವವಾದದ್ದು. ತುಕಾಜಿ ರಾವ್ ಹೋಳ್ಕರ್ ಅಟ್ಟೋಕ್‌ನಲ್ಲಿ ಮರಾಠ ಧ್ವಜವನ್ನು ಹಾರಿಸಿದ ಮೊದಲ ಧನಗರ್. ೧೮೫೯ ರ ಮೊದಲು ಬ್ರಿಟಿಷರ ವಿರುದ್ಧ ದಂಗೆಯನ್ನು ಪ್ರಾರಂಭಿಸಿದ ಕೀರ್ತಿ ಯಶವಂತರಾವ್ ಹೋಳ್ಕರ್ ಅವರಿಗೆ ಸಲ್ಲುತ್ತದೆ. ಕುರುಬರು ಸಮರ ಜನಾಂಗದವರಾಗಿದ್ದರು ಎಂಬುದನ್ನು ಸಾಬೀತುಪಡಿಸುತ್ತದೆ ವಿವಿಧ ರಾಜ್ಯಗಳಲ್ಲಿನ ಕುರುಬರ ನಾಮ ಮತ್ತು ಉಪನಾಮಗಳು ಕುರಿ ಸಾಕಾಣಿಕೆಯನ್ನು ಮಾಡುತ್ತಿರುವ, ಬೇರೆ ಬೇರೆ ರಾಜ್ಯಗಳಲ್ಲಿರುವ ಕುರುಬರ ಹೆಸರುಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ. ದೇಶದ ಕುರುಬರ ವಿವಿಧ ಹೆಸುರುಗಳ ಅರ್ಥ ವೃಷ್ಣಿಪಾಲ = ಟಗರು ಕುರುಬ, ಅಂಧಕ - ಹಂಡೆಕುರುಬ, ಕುರುಬ= ಜ್ಞಾನಿ, [ಕುರುಹ(ಸತ್ಯ)ನ್ನು ಬಲ್ಲಾತ ಕುರುಬ.] ರಕ್ಷಕ[ಕಾಯುವಾತ ಕುರುಬ, ಕೊಲ್ಲುವಾತ ಕಟುಕ]. ೨ಪಾಲ್= ರಕ್ಷಕ, ಮುಖ್ಯವಾಗಿ ಧನಗರ್ ಜನಾಂಗದವರು ತಮ್ಮ ಹೆಸರಿನೊಂದಿಗೆ ಬಳಸುವ ಪದವಾಗಿದ್ದರೂ ಅನ್ಯ ಸಮುದಾಯದ ಜನರೂ ಬಳಸುತ್ತಾರೆ. ಧನಗರ್= "ಶ್ರೀ" (ಶ್ರೇಯಾ, ಸಂಪತ್ತು, ಶುಭ, ಜಯ....) ಹೊಂದಿದಾತ. ಗೋ(ಕುರಿ, ಆಡು, ಆಕಳು...) ಹೊಂದಿದಾತ. ಸಂಸ್ಕöÈತ ಪದ 'ಧಂಗ್' ಅಂದರೆ ಬೆಟ್ಟ, ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಸಮುದಾಯವನ್ನು ಧನಗರ್ ಎಂದು ಕರೆಯಲಾಗುತ್ತದೆ. ಕುರುಂಬ- ಕುರುಚಲು ಬೆಟ್ಟಗುಡ್ಡದಲ್ಲಿ ಪಶುಪಾಲನೆ ಕೃಷಿ ಮಾಡುವವನು. ಮಹಾರಾಷ್ಟದ ಪುಣೆ ಜಿಲ್ಲೆಯ ಗುಹೆಯೊಂದರಲ್ಲಿ ದನಗರ್ ಎಂಬ ಪದವನ್ನು ಕೆತ್ತಲಾಗಿದೆ. ಈ ಗುಹೆಯು ಮೊದಲ ಮತ್ತು ಮೂರನೇ ಶತಮಾನದ ನಡುವಿನ ಅವಧಿಗೆ ಸೇರಿದೆ. ಗಡರಿಯ= ಹಿಂದಿ ಭಾಷೆಯ 'ಗದರ್' ಎಂಬ ಪದದಿಂದ ಗಡರಿಯ ಆಗಿದೆ. 'ಗದರ್' ಎಂದರೆ ಕುರಿ ಎಂದರ್ಥ. ಬಘೇಲ್= ಈ ಪದವನ್ನು ರಜಪೂತ ಜನಾಂಗದವರು ತಮ್ಮ ಹೆಸರೊಂದಿಗೆ ಬಳಸುತ್ತಾರೆ.(ಕೇಸರಿ ಎಂಬ ಅರ್ಥವೂ ಇದೆ) ಗೊಂಡ್= ಪರ್ವತವಾಸಿಗಳು, ಗುಡ್ಡದಲ್ಲಿ (ಅರಣ್ಯದಲ್ಲಿ) ವಾಸಿಸುವಾತ. ಘೋಸಿ= ಕೂಗುವಾತ. (ಪರ್ವತ ಪ್ರದೇಶದಲ್ಲಿ ಕುರಿ ಸಾಕಾಣಿಕೆಯಲ್ಲಿ ವಿಭಿನ್ನವಾಗಿ ಕೂಗುವ ಕಾರಣ ಈ ಹೆಸರು ಬಂದಿರಬಹುದು) ಈ ಹೆಸರಿನ ಕೆಲವರು ಮುಸ್ಲಿಂ ಆಗಿ ಗುರುತಿಸಿಕೊಂಡಿದ್ದಾರೆ. ಭಾರವಾಡ್= ಭಾರವಾಡ್ ಹೆಸರು ಬಡವಾಡ್ (bಚಿಜಚಿತಿಚಿಜ) ಎಂಬ ಗುಜರಾತಿ ಪದದಿಂದ ಬಂದಿದೆ. 'ಬಡ' ಎಂದರೆ ಕುರಿ. 'ವಾಡ್' ಎಂದರೆ ಹೊಂದಿರುವಾತ. ಕುರಿಗಳನ್ನು ಹೊಂದಿರುವಾತ. ಭಾರವಾಡ ಜನರೇ ನಿಖಾರ್- ಧನಗರ್ ಗುಂಪುಗಳಾಗಿವೆ. ಚೌಹಾಣ್, ಪರಿಹಾರ್, ಸಿಸೋಡಿಯಾ, ಶಿರಶ್ವರ್, ಚಂಡೆಲ್, ಮೊಹಾನಿಯ, ಕುಲ, ಗೋತ್ರಗಳು ನಿಖಾರ್- ಧನಗರ್ ಜನರಲ್ಲಿ ಇರುವುದು ಸಾಮ್ಯತೆಯನ್ನು ತೋರಿಸುತ್ತದೆ. ಭಾರವಾಡ್' ಜನಾಂಗದವರು ಕೃಷ್ಣನ ವಂಶಸ್ಥರೆಂದು,ನಂದ’ ರಾಜವಂಶದವರೆಂದು ಹೇಳಲಾಗುತ್ತದೆ. ನಿಖಾರ್= ನಿಖಾರ್ ಪದವು ಅರಳುವುದು, ಅಭಿವೃದ್ಧಿ, ಪಕ್ವತೆಯ ಸೂಚಕವಾಗಿದೆ. ಅಹಿರ್= ಸಂಸ್ಕöತದ ಪದ ‘ಅಭೀರ್’ ಎಂಬ ಹೆಸರಿನಿಂದ ಬಂದಿದೆ. ಭಯವಿಲ್ಲದವನು ಮತ್ತು ಭಯಗೊಳಿಸುವವನು ಎಂಬರ್ಥವನ್ನು ಸೂಚಿಸುತ್ತದೆ. ಇವರು ಖಾರ್ಸ್ಕ್ ದೇವ್' ಎಂಬ ದೇವರನ್ನು ಆರಾಧಿಸುತ್ತಾರೆ. ಈ ದೇವರು ಕುರಿ ಹಟ್ಟಿಯಲ್ಲಿ ಇರುತ್ತಾನೆಂಬ ನಂಬಿಕೆಯಿದೆ. ಗಡ್ಡಿಗಳಲ್ಲಿ ಬ್ರಹ್ಮಮಣರು, ಕ್ಷತ್ರಿಯರು, ರಜಪೂತರು, ಮುಸ್ಲಿಂ ಜನರು ಸಹ ಇದ್ದಾರೆ. ರಬರಿ = ಸಂಪತ್ತನ್ನು ಹೊಂದಿದಾತ. ನೀತಿ ನಿಯಮಗಳನ್ನು ರೂಪಿಸುವಾತ, ಹೊರಗಿನಾತ(ಕುರಿ, ದನ, ಒಂಟೆ ಸಾಕಾಣಿಕೆಗಾಗಿ ಊರ ಹೊರಗಿರುತ್ತಾನಾದ್ದರಿಂದ) ಎಂಬ ಅರ್ಥವನ್ನು ನೀಡುತ್ತದೆ. ಹಾಟ್ಕಾರ್= ಕನ್ನಡದ ಹಟ್ಟಿಕಾರ ಪದವು ಹಿಂದಿಯಲ್ಲಿ ಹಟ್ಕಾರ್ ಆಗಿದೆ. ಕುರಿಗಳ ಹಟ್ಟಿ ಹೊಂದಿದಾತ. ಕರ್ನಾಟಕದ ಬೀದರಿನಲ್ಲಿ ಹಟ್ಕಾರ್ ಜನಾಂಗ ಇದೆ. ಮಹಾರಾಷ್ಟçದಲ್ಲಿ ಧನಗರ್ ಸಮುದಾಯದೊಂದಿಗೆ ಇವರು ಸಂಬAಧಗಳನ್ನು ಹೊಂದಿದ್ದಾರೆ. ಬಕ್ಕರ್ವಾಲ್= ಬಕರಿ ಅಂದರೆ ಆಡು, ಹಾಡು ಮತ್ತು ಕುರಿಗಳನ್ನು ಹೊಂದಿರುವವನು ಭೆಡಿಹಾರ್ (ಭೇಡ್ವಾರ್) = ಭೇಡ್ ಅಂದರೆ ಕುರಿ, ಕುರಿಗಳನ್ನು ಹೊಂದಿರುವವನು. ಗೋವಲಾ=ಗೊವು’ ಎಂದರೆ ಪಶುಗಳು, ಸಾಕುಪ್ರಾಣಿಗಳಾದ ಕುರಿ ದನಗಳನ್ನು ಹೊಂದಿದವನು, ಹಾಕುವವನು. ಹಲ್ದಾರ್= ಲೆಕ್ಕದ ಪುಸ್ತಕವನ್ನು ಹೊಂದಿರುವವನು ಅಥವಾ ಲೆಕ್ಕಾಚಾರದ ಜೀವನವನ್ನು ಮಾಡುವವನು. ರಾಖಲ್ = ಹಸು/ ಪಶುಗಳನ್ನು ಹೊಂದಿದ ಹುಡುಗ. ರೆವಾಡಿ= ಗೌರವಿಸಲ್ಪಡುವವನು, ರೇವಾಳ ತಂದೆಯು ಬಲರಾಮನಿಗೆ ಮಗಳನ್ನು ಕೊಟ್ಟು ಮದುವೆ ಮಾಡಿದ ಕಾರಣ ಅವರಿಗೆ ಮಾತ್ತು ಅವರು ಸಂತತಿಗೆ ರೆವಾಡಿ ಎಂಬ ಹೆಸರು ಬಂದಿತು ಎಂಬುದು ಜಾನಪದ ನಂಬಿಕೆ. ರಾಯ್ಕ= ಶಾಂತಿ, ಸ್ಪಷ್ಟ ಮತ್ತು ಶುದ್ಧ ಹೃದಯ, ಮನಸ್ಸಿನ ಜನ ಎಂದರ್ಥ. ಗಾಯರಿ= ಹಸು/ ಪಶುಗಳನ್ನು ಹಾಕುವವನು. ಮಾಲ್ದಾರಿ = ಸಾಕು ಪ್ರಾಣಿಗಳನ್ನು ಹೊಂದಿದವನು. ಪಂಜಾಬಿನ ‘ಅಹಿರ್’ ಎಂಬ ಕುರುಬ ಸಮುದಾಯದಿಂದ ಧರ್ಮಾಂತರವಾದ ಜನರೇ ‘ಘೋಸಿ’ ಎಂಬ ಮುಸಲ್ಮಾನರು. ಹರಿಯಾಣದಲ್ಲಿಯೂ ಸಹ ಗಢರಿಯ ಸಮುದಾಯದ ಕೆಲವರು ಗಡರಿಯ ಮುಸ್ಲಿಂ' ಆಗಿ ಧರ್ಮಾಂತರವಾಗಿದ್ದಾರೆ.ರಬರಿ’ ಜನಾಂಗವನ್ನು ಗುಜರಾತಿನ ಹೆಗ್ಗುರುತಾಗಿ ಗುರುತಿಸಲಾಗಿದೆ. ಕರ್ನಾಟಕದ ಕುರುಬರಲ್ಲಿ ಎರಡು ಕಂಕಣಗಳು ಇರುವಂತೆ, ಗುಜರಾತಿನ ಜನಾಂಗದವರಲ್ಲಿ ಮೋಟಬಾಯಿ, ನಾನಾಬಾಯಿ ಎಂಬ ಎರಡು ಗುಂಪುಗಳನ್ನು ನೋಡಬಹುದು. ಅವಶ್ಯಕತೆ ಇರುವ ಅಧ್ಯಯನಗಳು ಕಾಶ್ಮೀರದಿಂದ ಕನ್ಯಾಕುಮಾರಿಯವರಿಗೆ ಹಬ್ಬಿರುವ ಕುರುಬ ಸಮುದಾಯವನ್ನು ಸಮಗ್ರವಾಗಿ ಅಭ್ಯಾಸ ಮಾಡುವ ಅವಶ್ಯಕತೆ ಇದೆ. ರಾಜ್ಯವಾರು ಅಧ್ಯಯನಗಳು ಆಗುತ್ತಿವೆ, ಬಿಡಿಬಿಡಿ ಅಧ್ಯಯನಗಳು ಕುರುಬ ಸಮಾಜದ ಬಗ್ಗೆ ಸಂಕ್ಷಿಪ್ತ ಪರಿಚಯ ನೀಡುತ್ತವಷ್ಟೆ. ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಕುರುಡನು ಆನೆಯನ್ನು ಮುಟ್ಟಿ ನೋಡಿ, ಇದು ಆನೆ ಎಂದು ಕಲ್ಪಿಸಿಕೊಂಡಂತೆ ಇಂದು ಕುರುಬರ ಇತಿಹಾಸ ದಾಖಲಾಗಿದೆ. ಕುರುಬ, ಧನಗರ್, ಪಾಲ್, ಗಡರಿಯ, ಗಾಯರಿ, ಗಡ್ಡಿ ಹೆಸರಿನಿಂದ ಕರೆಯಲ್ಪಡುವ ಜನಾಂಗದ ಇತಿಹಾಸವನ್ನು * ಸಿಂಧೂ ನದಿಯ ದಕ್ಷಿಣದಿಂದ ಕನ್ಯಾಕುಮಾರಿಯವರೆಗಿನ ಕುರಿಗಾರಿಕೆಯ ಇತಿಹಾಸವನ್ನು ಸಂಶೋಧಿಸಬೇಕಾಗಿದೆ. * ವೇದಗಳಲ್ಲಿ, ಜೈನ, ಬೌದ್ಧ ಸಾಹಿತ್ಯದಲ್ಲಿ ಕುರುಬರ ಮಾಹಿತಿಯ ಬಗ್ಗೆ ಸಮಗ್ರವಾಗಿ ಅಭ್ಯಾಸ ಮಾಡುವ ಅವಶ್ಯಕತೆ ಇದೆ. ರಾಷ್ಟçದಾದ್ಯಂತ ವಿವಿಧ ಹೆಸರುಗಳಿಂದ ಗುರುತಿಸಿಕೊಂಡ ಕುರುಬರ ಮತ್ತು ಕುರುಬ ಉಪ-ಜಾತಿಗಳ ಜೀವನ ಮತ್ತು ಸಂಸ್ಕತಿಯ ಮೇಲೆ ಎಲ್ಲಾ ರಾಜ್ಯಗಳಲ್ಲಿರುವ ಜನಗಣತಿ ವರದಿಗಳು, ಜಿಲ್ಲಾ ಗೆಜೆಟಿಯರ್‌ಗಳು, ಗ್ರಾಮ ಟಿಪ್ಪಣಿಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯುಕ್ತರ ವರದಿಗಳ ಮಾಹಿತಿಯನ್ನು ಸಂಗ್ರಹಿಸಿ ಸಂಶೋಧಿಸುವ ಕಾರ್ಯ ಆಗಬೇಕಾಗಿದೆ.. ಪರ್ಯಾಯ ಗುಂಪುಗಳೊದಿಗೆ ಸೌಹಾರ್ದತೆಯ ಅವಶ್ಯಕತೆ ಯಾದವ, ಹಟ್ಕಾರ್, ಗೌಳಿ ಮತ್ತು ಗೊಂಡ್ ಸಮುದಾಯಗಳು ಕುರುಬ- ದನಗರ್ ಜನರು ಪರ್ಯಾಯ ಹೆಸರಿನ ಅತಿ ದೊಡ್ಡ ಗುಂಪುಗಳು. ಈ ಎಲ್ಲ ಸಮುದಾಯಗಳು ಪ್ರತ್ಯೇಕತೆಯನ್ನು ಹೊಂದಿರುವುದು ಸಾಮಾಜಿಕ ಶಕ್ತಿ-ಸಾಮರ್ಥ್ಯಕ್ಕೆ ದೊಡ್ಡ ಹೊಡೆತವನ್ನು ಕೊಟ್ಟಿದೆ. ಯದು ವಂಶವೇ ಕುರುಬರಾಗಿದ್ದಾರೆ ಎಂದು ಇತಿಹಾಸವು ಸ್ಪಷ್ಟವಾಗಿ ಹೇಳಿದ್ದಾರೆ. ಯಾದವರ ದೇವರು ಮೂಲತಃ ವೃಷ್ಣಿಬೀರವಾಸುದೇವ, ಕುರುಬರ ದೈವ ಬೀರ ಕಾಡುಗೊಲ್ಲರ ವೈವಾಹಿಕ, ಧಾರ್ಮಿಕ, ಸಾಂಸ್ಕತಿಕ ಕುಲಾಚರಣಗಳಲ್ಲಿ ಸಾಮ್ಯತೆ ಇದೆ.ಕಾಡುಗೊಲ್ಲರಲ್ಲಿ ಅತಿಯಾದ ಮಡಿವಂತಿಕೆ ಜಾರಿಯಲ್ಲಿದೆ. ತೆಲಂಗಾಣದ ಭಾಗದಲ್ಲಿ ಯಾದವ ಕುರುಬರನ್ನು ಒಂದೇ ಜನಾಂಗವಾಗಿ ಗುರುತಿಸಲಾಗುತ್ತದೆ. ವೈವಾಹಿಕ ಸಂಬಂಧಗಳು ಜಾರಿಯಲ್ಲಿವೆ. ಆಂಧ್ರ ಭಾಗದಲ್ಲಿ ಇತ್ತೀಚೆಗೆ ಯಾದವರು ಕುರುಬರು ಪ್ರತ್ಯೇಕತೆಯನ್ನು ಹೊಂದಿದ್ದು ಬೇಸರದ ಸಂಗತಿ. ಶ್ರೀಶೈಲದಲ್ಲಿ ಹಿಂದೆ ಯಾದವ ಕುರುಬ ಸಂಗಮ್/ ಭವನವನ್ನು ಒಂದಾಗಿ ಕಟ್ಟಿಸಿದ್ದು ಯಾದವ ಕುರುಬರು ಒಂದಾಗಿದ್ದರು ಎಂಬುದಕ್ಕೆ ಸಾಕ್ಷಿ. ತೆಲಂಗಾಣದಲ್ಲಿನ ವೈವಾಹಿಕ ಸಂಬಂಧವನ್ನು ಮುಂದುವರಿಸಿ ಯಾದವ ಕುರುಬರು ಒಂದಾಗಿ ಮುನ್ನಡೆಯುವ ಹಿನ್ನೆಲೆಯಲ್ಲಿ ಸಂಘಟನೆಗಳ ಅವಶ್ಯಕತೆ ಇದೆ. ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ರಾಜ್ಯಗಳಲ್ಲಿ ಸಿದ್ದರಾಮಯ್ಯನವರು ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಯಾದವರು ಸಂಭ್ರಮಿಸಿದ್ದನ್ನು ಗಮನಿಸಬಹುದು. ಮಹಾರಾಷ್ಟçದಲ್ಲಿ ಗೌಳಿ, ಧನಗರ ಗೌಳಿ ಹಾಗೂ ಹಟ್ಕಾರ್ ಹೆಸರಿನಿಂದ ಗುರುತಿಸುವ ಜನರು ಧನಗರ್ ಜನರೊಂದಿಗೆ ಸಂಬAಧಗಳನ್ನು ಹೊಂದಿದ್ದಾರೆ. ಈ ಸಂಬAಧಗಳನ್ನು ಕಾಪಾಡಿಕೊಂಡು ಅವರನ್ನು ನಮ್ಮಲ್ಲೇ ಒಬ್ಬರನ್ನಾಗಿ ಮುಂದುವರಿಸಿಕೊAಡು ಹೋಗುವುದು ಅವಶ್ಯವಿದೆ. ಕುರುಬ-ಧನಗರ್ ಸಂಸ್ಕöÈತಿ ಮತ್ತು ಗೊಂಡ್ ಆದಿವಾಸಿಗಳ ಸಂಸ್ಕöÈತಿಯಲ್ಲಿ ಸಾಮ್ಯತೆ ಇದ್ದರೂ ಸಹ ಸಮಾಜದಲ್ಲಿ ಭಿನ್ನ ಸಮುದಾಯಗಳಾಗಿ ಗುರುತಿಸಿಕೊಂಡಿದ್ದಾರೆ. ಕುರುಬರು ಅಲೆಮಾರಿಗಳಾದ ಕಾರಣ ವಿಭಿನ್ನ ಹೆಸರುಗಳಿಂದ ಗುರುತಿಸಿಕೊಂಡು ನಾಗರಿಕ ಸಮಾಜದೊಂದಿಗೆ ಬೆರೆತರು. ಆದರೆ ಗೊಂಡರು ಅರಣ್ಯದಲ್ಲೇ ನೆಲೆಗೊಂಡ ಕಾರಣ ನಾಗರಿಕತೆಯಿಂದ ದೂರವಾಗಿ ಆದಿವಾಸಿ ಗುಣಲಕ್ಷಣಗಳನ್ನು ಮುಂದುವರಿಸಿಕೊAಡು ಬಂದರು. ಸಂಸ್ಕöÈತಿ ಹಾಗೂ ದ್ರಾವಿಡ ಹಿನ್ನೆಲೆಯಲ್ಲಿ ಗೊಂಡ್ ಸಮುದಾಯದೊಂದಿಗೆ ಸೌಹಾರ್ದ ಸಂಬAಧವನ್ನು ಬೆಳೆಸಿಕೊಳ್ಳಲು ಅವಕಾಶವಿದೆ. ಬೀದರ್ ಕಲ್ಬುರ್ಗಿಯಲ್ಲಿ ಇರುವ ಗೊಂಡರು ಉತ್ತರದ ಗೊಂಡರೊAದಿಗೆ ಸಂಬAಧಗಳನ್ನು ಹೊಂದುವ ಅವಶ್ಯಕತೆ ಇದೆ. ಎರಡು ಸಮುದಾಯಗಳನ್ನು ಬೆಸೆಯುವ ಹಿನ್ನೆಲೆಯಲ್ಲಿ ಕನಕ ಗುರುಪೀಠ ತಿಂಥಣಿ ಬ್ರಿಜ್ ಪೀಠದಲ್ಲಿ ಅಖಿಲ ಭಾರತ ಆದಿವಾಸಿ ಗೊಂಡ ಮಹಾಸಭಾದ ೧೩ನೇ ಸಮಾವೇಶವನ್ನು ಆಚರಿಸಿ, ಎಲ್ಲಾ ರಾಜ್ಯಗಳ ಗೊಂಡ ಸಮುದಾಯವನ್ನು ಆಹ್ವಾನಿಸಿ ಕಾರ್ಯಕ್ರಮವನ್ನು ಮಾಡಲಾಯಿತು. ಮೂಲತಃ ಗೊಂಡ ಆದಿವಾಸಿಗಳ ಒಂದು ಗುಂಪು ಕುರಿಗಾರಿಕೆಯನ್ನು ಅವಲಂಬಿಸಿ ಪ್ರತ್ಯೇಕ ಜಾತಿಯಾಗಿ ಗುರುತಿಸಿಕೊಂಡಿದ್ದು ಇತಿಹಾಸ. `ಗೊಂಡ್’ ಹಾಗೂ ಧನಗರ್ ಸಮುದಾಯಗಳು ಒಂದೇ ಎಂಬುದನ್ನು ಅರಿತು ಸಾಮಾಜಿಕ ಮುನ್ನಡೆಯನ್ನು ಪಪಡೆಯಬೇಕಾಗಿದೆ ಕರ್ನಾಟಕದಲ್ಲಿರುವ ಉತ್ತರ ಕರ್ನಾಟಕದ ಹೆಳವರು, ಸುಡುಗಾಡು ಸಿದ್ಧರು, ಟಗರು ಜೋಗಿಗಳನ್ನೂ ಸಹ ಅಪ್ಪಿಕೊಂಡು ಮುನ್ನಡೆಯಬೇಕಿದೆ. ಕುರುಬ- ಧನಗರ್ ಪರ್ಯಾಯ ಪದಗಳಲ್ಲಿ ದೇಶದಾದ್ಯಂತ ಗುರುತಿಸಿಕೊಂಡಿರುವ ಜನರನ್ನು ಮತ್ತು ಕುರುಬ ಧನಗರ್ ಸಮುದಾಯದಿಂದ ಪ್ರತ್ಯೇಕಗೊಂಡಿರುವ ಸಮುದಾಯಗಳನ್ನು ಒಂದೇ ಛತ್ರಿಯಡಿ ತರುವ ಕಾರ್ಯವನ್ನು ಧಾರ್ಮಿಕ ಮುಖಂಡತ್ವದಲ್ಲಿ, ರಾಜಕೀಯ ಶಕ್ತಿಯ ಸಹಕಾರದೊಂದಿಗೆ ಮಾಡಿದರೆ, ಭವಿಷ್ಯದಲ್ಲಿ ಕುರುಬರು ಭಾರತದ ಸಾಮಾಜಿಕ ರಾಜಕೀಯ ಪ್ರಾಬಲ್ಯವನ್ನು ಹೊಂದಬಹುದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಜ್ಞಾವಂತರು ಮತ್ತು ಉನ್ನತ ಸ್ಥಾನದಲ್ಲಿರುವ ಅಧಿಕಾರ ವಲಯದ ಜನರು ಕಾರ್ಯಪ್ರವೃತ್ತರಾಗುವ ಅವಶ್ಯಕತೆ ಇದ

ಈ ಲೇಖನವನ್ನು ಶ್ರೀ ಶ್ರೀ ಸಿದ್ದರಾಮಾನಂದ ಸ್ವಾಮಿ
ಕನಕ ಗುರು ಪೀಠ ತಿಂತಿಣಿ ಬ್ರಿಡ್ಜ್ ಶಾಖ ಮಠ ಇವರು ಇದನ್ನು ಬರೆದದ್ದು ಇತಿಹಾಸದ ಒಂದು ಅಂಕಣವಾಗಿ ಮತ್ತಷ್ಟು ಮೈಲಿಗಲ್ಲಿಗೆ ಈ ವಿಚಾರಧಾರಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪುತ್ತದೆ ಇಂತಹ ಕೆಲಸವನ್ನ ಎಲ್ಲಾ ಸ್ವಾಮೀಜಿಗಳು ಈಶ್ವರಾನಂದಪುರಿ ಸ್ವಾಮೀಜಿ ಕನಕಗುರುಪೀಠ ಹೊಸದುರ್ಗ ಶ್ರೀ ಶಿವಾನಂದ ಮಹಾಪುರಿ ಸ್ವಾಮೀಜಿ ಮಾಡಿದರೆ ಒಳಿತು ಇಂದು ನಮ್ಭಾವನೆ ಇಂತಹ ನಿಟ್ಟಿನಲ್ಲಿ ಈಶ್ವರಾನಂದ ಪರಿ ಮಹಾಸ್ವಾಮಿಗಳ ಒಂದು ಹೆಜ್ಜೆಯನ್ನು ಇಟ್ಟಿರುವುದನ್ನು ನಾವು ತಾಳಿಕಟ್ಟೆಯ ಜ್ಞಾನದಾಸೋಹದ ಬಗ್ಗೆ ಮಾತನಾಡಿದ್ದಾಗ ತಿಳಿದುಕೊಂಡಿದ್ದೇವೆ ಇಂತಹ ಕೆಲಸವನ್ನು ಹೆಚ್ಚು ಮಾಡಿದರೆ ಸಮಾಜಕ್ಕೆ ಒಳಿತು ಎಂದು ನಾವು ಭಾವಿಸಿದ್ದೇವೆ

ಸ್ವಾಮೀಜಿಗಳಿಗೆ ಧನ್ಯವಾದಗಳು ಅರ್ಪಿಸುತ್ತೇವೆ

LEAVE A REPLY

Please enter your comment!
Please enter your name here