ಕಲಬುರ್ಗಿ : ಕೇಂದ್ರ ಸರ್ಕಾರವು ಸ್ಥಳೀಯ ಸಂಸ್ಥೆಗಳಲ್ಲಿ 50 /ಇದರಂತೆ ಲೋಕಸಭಾ ವಿಧಾನಸಭಾ ಗಳಲ್ಲಿ ಮಹಿಳೆಯರಿಗೆ 33 / ಮೀಸಲಾತಿ ಜಾರಿಗೊಳಿಸಲು ಸಜ್ಜುಗೊಳಿಸುವ ಸ್ವತಂತ್ರ ಭಾರತದ ಶತಮಾನದ ಅಂಚಿನಲ್ಲಿ ಯಾದರೂ ಮಹಿಳೆಯರಿಗೆ ಮೀಸಲಾತಿ ಜಾರಿಗೊಳಿಸಲು ಮುಂದಾಗಿರುವುದು ಒಂದು ಕಡೆ ಸಂತೋಷದ ಸಂಗತಿ ಯಾದರೆ ಇನ್ನೊಂದು ಕಡೆ ಮಹಿಳಾ ರಾಜಕೀಯ ಮುಖಂಡರಿಗೆ ಆತಂಕದ ಛಾಯೆ ಆವರಿಸಿದೆ ಎಕೆಂದರೆ ಭಾರತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ 50 / ಮೀಸಲಾತಿ ನೀಡಿದಂತೆ ಲೋಕಸಭಾ ಮತ್ತು ವಿಧಾನಸಭಾ ಸ್ಥಾನಗಳಲ್ಲಿ ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳ ಸಂಖ್ಯೆಗೂ ಕಡಿಮೆ ಸಂಖ್ಯೆಯ ಒಟ್ಟು ಸ್ಥಾನಗಳಲ್ಲಿ ಪ್ರತಿಶತ 33 / ಪ್ರಸೆಂಟ್ ರಷ್ಟು ಸ್ಥಾನ ಮಹಿಳೆಯರಿಗೆ ಮೀಸಲಾತಿ ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಈಗಿರುವ ಜನಪ್ರತಿನಿಧಿಗಳ ಕುಟುಂಬದವರಿಗೆ ಸದರಿ ಮೀಸಲಾತಿಯಲ್ಲಿ ಅವಕಾಶ ನೀಡದೆ ಸ್ವತಂತ್ರವಾಗಿ ರಾಜಕೀಯ ಮತ್ತು ಸಾಮಾಜಿಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಈ ಹಿಂದೆ ಕುಟುಂಬದಲ್ಲಿ ಜನಪ್ರತಿನಿಧಿ ಸ್ಥಾನಮಾನ ಹೊಂದಿರದ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಮಹಿಳೆಯರಿಗೆ ಕೇಂದ್ರ ಸರ್ಕಾರ ನೀಡಲು ಮುಂದಾಗಿರುವ ಮಹಿಳಾ ಮೀಸಲಾತಿಯಲ್ಲಿ ಪ್ರಬಲ ಕಾನೂನೂ ನಿಯಮ ಅಳವಡಿಸಿದಾಗ ಮಾತ್ರ ಪ್ರಸ್ತುತ ಜಾರಿಗೆ ತರುತ್ತಿರುವ ಮಹಿಳಾ ಮೀಸಲಾತಿ ನಿಜವಾದ ಸಾಮರ್ಥ್ಯ ಹೊಂದಿರುವ ಮಹಿಳೆಯರಿಗೆ ಅವಕಾಶ ಸಿಗುವಂತಾಗಬೇಕು ಅಂದಾಗ ಮಾತ್ರ ಗಂಡು ಹೆಣ್ಣು ಬೇಧ ಮತ್ತು ಸಮಾನತೆ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ ಇದನ್ನು ಕೇಂದ್ರ ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ಸೂಕ್ತ ಮಹಿಳಾ ಮೀಸಲಾತಿ ಜಾರಿಗೊಳಿಸಲು ಉಭಯ ಸರ್ಕಾರಕ್ಕೆ ಸಾಮಾಜಿಕ ಹೋರಾಟಗಾರ ವಿಶ್ವನಾಥ ಪಾಟೀಲ್ ಗವನಳ್ಳಿ ಅವರು ಆಗ್ರಹ ಪಡಿಸಿದ್ದಾರೆ