ದಾವಣಗೆರೆ:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದಾವಣಗೆರೆ ಜಿಲ್ಲಾ ಸಮಿತಿಯು 38,ನೇಯ ರಾಜ್ಯಸಮ್ಮೇಳನಮಾಡಿದ ಯಶಸ್ಸಿನ ಬೆನ್ನಲ್ಲೇ ದಾವಣಗೆರೆ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ನಿವೇಶನ ಕೋರಿ ಮನವಿ ಸಲ್ಲಿಸಲಾಗಿತ್ತು.ಜಿಲ್ಲಾ ಉಸ್ತುವಾರಿ ಸಚಿವರ ಮತ್ತು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಸಂಘದ ಕಚೇರಿಗಾಗಿ ರಿಯಾಯತಿದರದಲ್ಲಿ ನಿವೇಶನಕೋರಿ ಮನವಿಮಾಡಿಕೊಳ್ಳಲಾಗಿತ್ತು.ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಗಳು ರಿಯಾಯತಿದರದಲ್ಲಿ ನಿವೇಶನ ಮಂಜೂರು ಮಾಡಿದರು,ಇವರ ಸಹಕಾರದಿಂದ ದಾವಣಗೆರೆ ಹರಿಹರ ನಗರಾಭಿವೃದ್ಧಿಪ್ರಾಧಿಕಾರದ ವತಿಯಿಂದ ಕರ್ನಾಟಕ ಕಾರ್ಯ ನಿರತ ಪತ್ರಕರ್ತ ಸಂಘ ದಾವಣಗೆರೆ ಜಿಲ್ಲಾ ಸಮಿತಿಗೆ ನಿವೇಶನ ಮಂಜೂರಾಗಿದ್ದು ಅದನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದಾವಣಗೆರೆ ಜಿಲ್ಲಾ ಸಮಿತಿಗೆ ನೋಂದಣಿ ಕೂಡಾಮಾಡಿಸಲಾಗಿದೆ.ಅದರ ಮುಂದುವರಿದ ಭಾಗವಾಗಿ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ದಿನೇಶ್ ಕೆ ಶೆಟ್ಟಿಯವರ ಸಮ್ಮುಖದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ನಿವೇಶನದ ಸ್ವಾಧೀನ ಪತ್ರವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮಿತಿಗೆ ವಿತರಿಸಿದರು.ಈ ಸಂಧರ್ಭದಲ್ಲಿ ಪ್ರಾಧಿಕಾರದ ಆಯುಕ್ತರು ಉಪಸ್ಥಿತರಿದ್ದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಇ.ಎಮ್.ಮಂಜುನಾಥ್,ಪ್ರಧಾನಕಾರ್ಯದರ್ಶಿ ಎ.ಫಕೃದ್ದೀನ್,ಕೋಶಾಧ್ಯಕ್ಷ ಎನ್ ವಿ.ಬದ್ರಿನಾಥ್,ರಾಜ್ಯ ಕಾರ್ಯಕಾರಿಸಮಿತಿ ಸದಸ್ಯ ಕೆ.ಚಂದ್ರಣ್ಣ,ರಾಷ್ಟ್ರೀಯ ಮಂಡಳಿ ಸದಸ್ಯ ಎಸ್ ಕೆ ಒಡೆಯರ್,ಜಿಲ್ಲಾ ಉಪಾಧ್ಯಕ್ಷ ಆರ್ ಎಸ್ ತಿಪ್ಪೇಸ್ವಾಮಿ,ನಿರ್ದೇಶಕರಾದ ಕೃಷ್ಣೋಜಿರಾವ್,ಸಿ ವೇದಮೂರ್ತಿ,ಹಾಗೂ ಶಿವಕುಮಾರ್ ಮುಂತಾದವರು ಉಪಸ್ಥಿತಿತರಿದ್ದು ಸಚಿವರಿಗೆ,ಪ್ರಾಧಿಕಾರದ ಅಧ್ಯಕ್ಷರಿಗೆ ಮತ್ತು ಪ್ರಾಧಿಕಾರದ ಆಯುಕ್ತರಿಗೆ ಅಭಿನಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here