ಬಾಗಲಕೋಟೆ:ಯಾದಗಿರಿ ಮತ್ತು ಆಲಮಟ್ಟಿಯ ಜನರಿಗೆ ಶುಭ ಸುದ್ದಿ 162 ಕಿ.ಮೀ. ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗದ ಅಂತಿಮ ಸ್ಥಳ ಸಮೀಕ್ಷೆಗೆ ₹4.05 ಕೋಟಿ ವೆಚ್ಚದಲ್ಲಿ ಅನುಮೋದನೆ ದೊರೆತಿದೆ.
ಈ ಬಹುಕಾಲದ ಬೇಡಿಕೆಯು ಉತ್ತರ ಕರ್ನಾಟಕದ ಸಂಪರ್ಕವನ್ನು ಸುಧಾರಿಸಲು ಮತ್ತು ಆರ್ಥಿಕ ಸಾಮರ್ಥ್ಯವನ್ನು ಮತ್ತಷ್ಟು ದೃಢಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಡಿಸೆಂಬರ್‌ನಲ್ಲಿ, ನಾನು ಮಾನ್ಯ ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ಈ ಪ್ರಮುಖ ಯೋಜನೆಗೆ ಅನುಮೋದನೆ ನೀಡಿವಂತೆ ಒತ್ತಾಯಿಸಿದ್ದೆ. ಏಪ್ರಿಲ್‌ನಲ್ಲಿ ಸಚಿವರ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ವಿಕಾಸ್ ಜೈನ್ ಅವರನ್ನು ಭೇಟಿಮಾಡಿ ತ್ವರಿತವಾಗಿ ಅನುಮೋದನೆ ನೀಡುವಂತೆ ಒತ್ತಾಯಿಸಿದ್ದೆ. ರೈಲ್ವೆ ಸಚಿವಾಲಯವು ತ್ವರಿತವಾಗಿ ಸ್ಪಂದಿಸಿದ್ದಕ್ಕಾಗಿ ಕೃತಜ್ಞತೆಗಳು. ಇದು ಪ್ರಾದೇಶಿಕ ಅಭಿವೃದ್ಧಿ ಮತ್ತು ಸಮಗ್ರ ಬೆಳವಣಿಗೆಗೆ ದೊಡ್ಡ ಉತ್ತೇಜನವಾಗಿದೆ.