ಹುಬ್ಬಳ್ಳಿ: ಉತ್ತರ ಕರ್ನಾಟಕದ ರೈಲು ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೈರುತ ರೈಲೆಯು ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬಳ್ಳಿ ಜಂಕ್ಷನ್ ಮತ್ತು ಕುಷ್ಟಗಿ ನಿಲ್ದಾಣಗಳ ನಡುವೆ ಹೊಸ ದೈನಂದಿನ ಎಕ್ಸ್‌ಪ್ರೆಸ್ ರೈಲು ಸೇವೆಗಳನ್ನು ಪ್ರಾರಂಭಿಸಲು ಸಂತಸ ವ್ಯಕ್ತಪಡಿಸಿದೆ.

ಗದಗ-ಕುಷ್ಟಗಿ ಹೊಸ ರೈಲು ಮಾರ್ಗದ ಉದಾಟನೆಯೊಂದಿಗೆ, ರೈಲು ಸಂಖ್ಯೆ 07353 ಕುಷ್ಟಗಿ – ಎಸ್‌ಎಸ್‌ಎಸ್ ಹುಬಳ್ಳಿ ಉದ್ಘಾಟನಾ ವಿಶೇಷ ಎಕ್ಸ್‌ಪ್ರೆಸ್ (ಒನ್ ವೇ) ರೈಲಿಗೆ ಮಾನ್ಯ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ಮೇ 15, 2024 ರಂದು ಕುಷ್ಟಗಿ ರೈಲು ನಿಲ್ದಾಣದಿಂದ ಹಸಿರು ನಿಶಾನೆ ತೋರಿಸಿದ್ದಾರೆ.

ಈ ಉದ್ಘಾಟನಾ ವಿಶೇಷ ರೈಲು 2 ಎಸ್‌ಎಲ್‌ಆರ್/ಡಿ ಮತ್ತು 6 ಸಾಮಾನ ದ್ವಿತೀಯ ದರ್ಜೆ/ಸ್ತ್ರೀಪರ್ ದರ್ಜೆಯ ಬೋಗಿಗಳೊಂದಿಗೆ ಕುಷ್ಟಗಿಯಿಂದ ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ ಗೆ ಚಲಿಸಿದ್ದು, ಮಾರ್ಗಮಧ್ಯ, ಈ ರೈಲು ಲಿಂಗನಬಂಡಿ, ಹನಮಾಪೂರ, ಯಲಬುರ್ಗಾ, ಸಂಗನಾಳ, ಕುಕನೂರು, ತಳಕಲ್, ಬನ್ನಿಕೊಪ, ಸೋಂಪುರ ರೋಡ್, ಹಳ್ಳಿಗುಡಿ ಹಾಲ್, ಹರ್ಲಾಪುರ, ಕಣಗಿನಹಾಳ, ಗದಗ, ಹುಲಕೋಟಿ, ಅಣ್ಣಿಗೇರಿ, ಶಿಶ್ವಿನಹಳ್ಳಿ, ಹೆಬಸೂರ ಮತ್ತು ಕುಸುಗಲ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.

ನಿಯಮಿತ ರೈಲು ಸೇವೆಗಳು:

ರೈಲು ಸಂಖ್ಯೆ 17327 ಎಸ್ಎಸ್‌ಎಸ್ ಹುಬ್ಬಳ್ಳಿ- ಕುಷ್ಟಗಿ ದೈನಂದಿನ ಎಕ್ಸ್‌ಪ್ರೆಸ್ ರೈಲು ಮೇ 16, 2025 ರಿಂದ ನಿಯಮಿತ ಸೇವೆಯನು ಪ್ರಾರಂಭಿಸಲಿದೆ.

ರೈಲು ಸಂಖ್ಯೆ 17328 ಕುಷ್ಟಗಿ – ಎಸ್‌ಎಸ್‌ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್‌ಪ್ರೆಸ್ ರೈಲು ಮೇ 17, 2025 ರಿಂದ ನಿಯಮಿತ ಸೇವೆಯನ್ನು ಪ್ರಾರಂಭಿಸಲಿದೆ.

ರೈಲು ಸಂಖ್ಯೆ 17327 ಎಸ್‌ಎಸ್‌ಎಸ್ ಹುಬಳಿ-ಕುಷ್ಟಗಿ ದೈನಂದಿನ ಎಕ್ಸ್‌ಪ್ರೆಸ್ ರೈಲು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬಳ್ಳಿ ನಿಲ್ದಾಣದಿಂದ ಸಂಜೆ 5:00 ಗಂಟೆಗೆ ಹೊರಟು ಅದೇ ದಿನ ರಾತ್ರಿ 8:40 ಕ್ಕೆ ಕುಷ್ಟಗಿಯನು ತಲುಪಲಿದೆ. ಮಾರ್ಗ ಮಧ್ಯೆ, ಈ

ರೈಲು ಸಂಖ್ಯೆ 17328 ಕುಷ್ಟಗಿ- ಎಸ್‌ಎಸ್‌ಎಸ್ ಹುಬ್ಬಳ್ಳಿ, ದೈನಂದಿನ ಎಕ್ಸ್‌ಪ್ರೆಸ್ ರೈಲು ಕುಷ್ಟಗಿಯಿಂದ ಬೆಳಿಗ್ಗೆ 07:00 ಗಂಟೆಗೆ ಹೊರಟು ಅದೇ ದಿನ ಬೆಳಿಗ್ಗೆ 10:40 ಕ್ಕೆ ಸಿದ್ದರೂಢ ಸ್ವಾಮೀಜಿ ಹುಬಳ್ಳಿಯನ್ನು ತಲುಪಲಿದೆ.

ಈ ರೈಲುಗಳು ಒಟ್ಟು 11 ಬೋಗಿಗಳನ್ನು ಹೊಂದಿವೆ. ಅವುಗಳಲ್ಲಿ 9 ಸಾಮಾನ್ಯ ದ್ವಿತೀಯ ದರ್ಜೆಯ ಮತ್ತು 2 ದ್ವಿತೀಯ ದರ್ಜೆಯ ಲಗೇಜ್ ಕಮ್ ಗಾರ್ಡ್ ಬ್ರೇಕ್ ವ್ಯಾನ್‌ಗಳು/ದಿವ್ಯಾಂಗಜನ ಬೋಗಿಗಳು ಸೇರಿವೆ.

ಈ ಹೊಸ ದೈನಂದಿನ ಎಕ್ಸ್‌ಪ್ರೆಸ್ ಸೇವೆಯು ಈ ಭಾಗದ ಪ್ರಯಾಣಿಕರು, ವಿದ್ಯಾರ್ಥಿಗಳು, ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ವೇಗವಾದ ಮತ್ತು ಅನುಕೂಲಕರ ಪ್ರಯಾಣವನ್ನು ಒದಗಿಸುವ ಮೂಲಕ ಉತ್ತರ ಕರ್ನಾಟಕದ ಪ್ರಮುಖ ಪಟ್ಟಣಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

LEAVE A REPLY

Please enter your comment!
Please enter your name here